ಆರೋಗ್ಯ-ಜೀವನಶೈಲಿ

ಹಾಸಿಗೆ ಹುಣ್ಣು

ಹಾಸಿಗೆ ಹುಣ್ಣುಗಳು ಅಥವಾ ಬೆಡ್‌ಸೋರ್ ಎಂದರೆ ಬಹಳ ದಿನಗಳಿಂದ ಮಲಗಿದ್ದಲ್ಲೇ ಮಲಗಿ ಆಗುವಂಥ ವ್ರಣಗಳು (ಹುಣ್ಣುಗಳು). ಈ ಹುಣ್ಣುಗಳು ರೋಗಿಗಳಿಗೆ ಒಂದು ಶಾಪ. ರೋಗಿ ತನ್ನ ರೋಗಕ್ಕಿಂತ ಹೆಚ್ಚಾಗಿ ಇವುಗಳಿಂದ ಬಹಳೇ ಕಷ್ಟ ಅನುಭವಿಸಬೇಕಾಗುತ್ತದೆ. ಇದನ್ನು ನೋಡಲೂ ಆಗದು. ಅಂದಮೇಲೆ ಅನುಭವಿಸುವವರು ಕಷ್ಟ ಬೇರೆಯವರಿಗೆ ತಿಳಿಸುವುದು ಅಸಾಧ್ಯ.
ರೋಗಿಯ ಸೇವೆ ಮಾಡುವವರ ಅಲಕ್ಷ್ಯದಿಂದ ಹಾಸಿಗೆ ಹುಣ್ಣುಗಳಾಗುತ್ತವೆ. ಅಸಹಾಯಕನಾದ ರೋಗಿಯ ಸೇವೆ ಮಾಡುವವರು ಬಹಳ ಲಕ್ಷ್ಯ ಕೊಟ್ಟು, ಕಾಳಜಿಯಿಂದ ನೋಡಿಕೊಂಡಲ್ಲಿ ಮಾತ್ರ ಈ ಹುಣ್ಣುಗಳು ಆಗದಂತೆ ತಡೆಯಬಹುದು. ಇಂಥವರ ಸೇವೆ ಮಾಡುವವರಿಗೆ ಬಹಳ ಸಹನೆ ಅಗತ್ಯ.

ಆಗದಂತೆ ಎಚ್ಚರವಹಿಸಿ...
ಈ ಹುಣ್ಣುಗಳನ್ನು ಗುಣಪಡಿಸುವುದು ಕಷ್ಟ. ಹೀಗಾಗಿ, ಇವು ಆಗದಂತೆ ಎಚ್ಚರ ವಹಿಸುವುದೊಳಿತು. ಒಂದೇ ಜಾಗದಲ್ಲಿ ಮನುಷ್ಯನ ಚರ್ಮ ಹಾಸಿಗೆಗೆ ತರಿದು ತರಿದು ಚರ್ಮ ಸವೆದು ಅಲ್ಲಿಯೇ ನೋವಾಗುತ್ತದೆ. ಆ ನೋವು ಹೆಚ್ಚಾಗಿ ದೊಡ್ಡ ಹುಣ್ಣುಗಳಾಗುತ್ತವೆ. ಎಚ್ಚರ ತಪ್ಪಿದಲ್ಲಿ ಆ ಹುಣ್ಣುಗಳಲ್ಲಿ ಹುಳುಗಳಾಗುವುದುಂಟು.

ಏನು ಮಾಡಬೇಕು?

  • ಒಂದೇ ಕಡೆಯ ಚರ್ಮ ಸವೆಯದಂತೆ ರೋಗಿಗಳನ್ನು ಮೇಲಿಂದ ಮೇಲೆ ಜಾಗ ಬದಲಿಸಿ ಹೊರಳಿಸುತ್ತಿರಬೇಕು.
  • ಎರಡನೆಯದಾಗಿ ಹಾಸಿಗೆಗೆ ಹತ್ತುವ ಚರ್ಮದ ಭಾಗವನ್ನು ಮೆತ್ತಗಿಡಬೇಕು. ಇದಕ್ಕೆ ಪೆಟ್ರೋಲಿಯಂ ಜೆಲ್ಲಿ ಎಂಬ ವಾಸನೆ ಇಲ್ಲದ ವ್ಯಾಸಲಿಲ್ ಸಿಗುತ್ತದೆ. ಇದನ್ನು ಸವೆಯುತ್ತಿರುವ ಚರ್ಮದ ಭಾಗಕ್ಕೆ ದಿನಕ್ಕೆ 3 ಸಲವಾದರೂ ಹಚ್ಚಬೇಕು (ನೋವಾಗದಂತೆ).
  • ಯಾವುದಾದರೂ ಟಾಲ್ಕಂ ಪೌಡರ್ ಉದುರಿಸಬೇಕು.
  • ಒಂದೇ ಕಡೆ ಚರ್ಮದ ಮೇಲೆ ಭಾರ ಬೀಳದಂತೆ ರೋಗಿಯುನ್ನು ಮೇಲಿಂದ ಮೇಲೆ ಹೊರಳುಸುತ್ತಿರಬೇಕು.
  • ಮಾರುಕಟ್ಟೆಯಲ್ಲಿ ಈಗ ವಾಟರ್ ಬೆಡ್‌ಗಳೂ ಲಭ್ಯವಿದ್ದು, ಅವುಗಳ ಸಕಾಲಿಕ ಬಳಕೆಯಿಂದ ಈ ಅನಾಹುತ ತಪ್ಪಿಸಬಹುದು.
- ಡಾ. ಕರವೀರಪ್ರಭು ಕ್ಯಾಲಕೊಂಡ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು ಸಾಧಿಸಿದು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ