ಆರೋಗ್ಯ-ಜೀವನಶೈಲಿ

ಹೊಟ್ಟೆನೋವಾ?

ಹೊಟ್ಟೆನೋವು ಯಾರನ್ನೂ ಬಿಡೋದಿಲ್ಲ. ಅದರಲ್ಲೂ ಹೆಣ್ಣಿಗೂ, ಈ ನೋವಿಗೂ ಬಹಳ ನಂಟು. ಮುಟ್ಟಿನಲ್ಲಿ ಕಾಣಿಸಿಕೊಳ್ಳುವ ನೋವು ಹೆಣ್ಣನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಎದೆಯ ಭಾಗದಿಂದ ಹಿಡಿದು ಕಿಬ್ಬೊಟ್ಟೆಯ ತನಕ ಎಲ್ಲಿ ಬೇಕಾದರೂ ಈ ನೋವು ಕಾಣಿಸಿಕೊಳ್ಳಬಹುದು.
ಅಜೀರ್ಣ, ಗ್ಯಾಸ್ ತುಂಬಿಕೊಳ್ಳುವುದು, ಆಹಾರ ವಿಷಮತೆ, ಹೊಟ್ಟೆಯ ಸೋಂಕು, ಜಠರದ ನೋವು, ಪಿತ್ತಾಶಯದಲ್ಲಿ ಕಲ್ಲು ಸೋಂಕು, ಮಲಬದ್ಧತೆ, ಆಹಾರ ಒಗ್ಗದಿರುವಿಕೆ, ಹೊಟ್ಟೆಹುಣ್ಣು, ಕ್ರಿಮಿ, ಹಸಿವು, ಆಮ್ಲಪಿತ್ತಗಳಿಂದ ಹೊಟ್ಟೆನೋವು ಬರಬಹುದು.
ಹಸಿವು ಇಲ್ಲದಿರುವುದು, ಹುಳಿತೇಗು, ವಾಂತಿ, ಹೊಟ್ಟೆಯುರಿ, ಹೊಟ್ಟೆ ತೊಳೆಸುವುದು, ಹೊಟ್ಟೆಯುಬ್ಬರ, ಭೇದಿ, ಹೊಟ್ಟೆ ಹಿಂಡಿದ ಹಾಗೆ ಅನುಭವದ ಮೂಲಕ ನೋವಿಗೆ ಕಾರಣ ತಿಳಿಯಬಹುದು.

ಮನೆಯಲ್ಲೇ ಮದ್ದು

  •     ಅಜೀರ್ಣದಿಂದ ಹೊಟ್ಟೆನೋವು ಬಂದರೆ ಒಂದು ಬಟ್ಟಲು ಬಿಸಿನೀರಿಗೆ ಒಂದು ನಿಂಬೆಹಣ್ಣಿನ ರಸ ಹಾಗೂ ಅರ್ಧ ಚಮಚ ಸೋಡಾಪುಡಿ ಬೆರೆಸಿ ಕುಡಿಯಿರಿ.
  •    ಮಲಬದ್ಧತೆ ಇದ್ದರೆ ನಿಂಬೆಹಣ್ಣಿನ ರಸದೊಂದಿಗೆ ಹರಳೆಣ್ಣೆ ಬೆರೆಸಿ ಕುಡಿಯಿರಿ.
  •     ಉಷ್ಣಕ್ಕಾದರೆ ಜೀರಿಗೆ, ಸಕ್ಕರೆ, ಒಣಶುಂಠಿ ಮತ್ತು ಅಡುಗೆ ಉಪ್ಪನ್ನು ಒಂದು ಚಮಚದಷ್ಟು ತೆಗೆದುಕೊಂಡು ನುಣ್ಣಗೆ ಪುಡಿಮಾಡಿ. ಅರ್ಧ ಬಟ್ಟಲು ಬಿಸಿನೀರಿಗೆ ಒಂದು ಹೋಳು ನಿಂಬೆಹಣ್ಣಿನ ರಸ ಸೇರಿಸಿ ಕುಡಿಯಿರಿ.
  •     ಜೀರಿಗೆ ತಿನ್ನಬಹುದು.
  •     ಟೀ ಚಮಚದಷ್ಟು ಕಾಳುಮೆಣಸನ್ನು ಹುರಿದು ಒಂದು ಹಿಡಿ ತುಳಸಿ ರಸ ಸೇರಿಸಿ ಕುದಿಯುವ ನೀರಿನಲ್ಲಿ ಬೆರೆಸಿ. ಸ್ವಲ್ಪ ಜೇನುತುಪ್ಪ ಬೆರೆಸಿ 3-4 ದಿನ ಸೇವಿಸಿದರೆ ಅಜೀರ್ಣದ ಸಂಕಟ ಮಾಯ.
  •     ಚಮಚದಷ್ಟು ಕಾದ ಹಸುವಿನ ತುಪ್ಪಕ್ಕೆ ಕಾಳುಮೆಣಸಿನ ಪುಡಿ ಮತ್ತು ಉಪ್ಪು ಬೆರೆಸಿ ಕುದಿಸಿ ಬಿಸಿ ಅನ್ನಕ್ಕೆ  ಕಲಸಿ ಊಟ ಮಾಡಿದರೆ ಅಜೀರ್ಣ, ಹೊಟ್ಟೆ ಉಬ್ಬರ ಕಡಿಮೆಯಾಗುವುದು.
  •     ಸಕ್ಕರೆ ಬೆರೆಸಿದ ಕೊತ್ತಂಬರಿ ಬೀಜದ ಕಷಾಯ ಸೇವಿಸಿದರೆ ಅಜೀರ್ಣ, ಹುಳಿತೇಗಿಗೆ ಒಳ್ಳೆಯದು.
  •     ಊಟಕ್ಕೆ ಮುಂಚೆ ಹಸಿಶುಂಠಿಯನ್ನು ಸ್ವಲ್ಪ ಉಪ್ಪು ಸಹಿತ ಅಗಿದು ತಿನ್ನಿ.
  •     ಕೊತ್ತಂಬರಿ ಬೀಜ, ಒಣಶುಂಠಿ ಕಷಾಯ ಸೇವಿಸಿ.
  •     ಸೀಬೆಹಣ್ಣಿಗೆ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ತಿನ್ನಿ.
  •     ಸಕ್ಕರೆಯೊಂದಿಗೆ ನೆಲ್ಲಿಕಾಯಿ ರಸ ಕುಡಿಯಬಹುದು.
  •     ಹುರಿದ ಬೆಳ್ಳುಳ್ಳಿ ಬಳಸಿ.
  •     ತೆಂಗಿನ ತುರಿ ಮತ್ತು ಎಳೆನೀರಿನೊಂದಿಗೆ ಗಟ್ಟಿ ಕಲ್ಲುಸಕ್ಕರೆ, ಏಳಕ್ಕಿಪುಡಿ ಸೇವಿಸಿ.
  •     ಬಿಳಿದ್ರಾಕ್ಷಿಯನ್ನು ಯಥೇಚ್ಛವಾಗಿ ಸೇವಿಸಿ.
  •     ಊಟಕ್ಕೆ ಮೊದಲು ಅನಾನಸ್ ರಸಕ್ಕೆ ಉಪ್ಪು ಮತ್ತು ಕಾಳುಮೆಣಸು ಪುಡಿ ಸೇರಿಸಿ ತಿಂದರೆ ಒಳ್ಳೆಯದು.
  •    ಲವಂಗದ ಕಷಾಯ ಸೇವನೆ ಹೊಟ್ಟೆಉಬ್ಬರವನ್ನು ಇಳಿಸುತ್ತದೆ.
  •    ಬಾರ್ಲಿ ಗಂಜಿ ಸೇವಿಸಿ.
  •    ಪುದೀನಾ ಸೊಪ್ಪಿನ ಟೀ ಕುಡಿಯಿರಿ.
  •    ಓಮಿನಕಾಳನ್ನು ಉಪ್ಪಿನೊಂದಿಗೆ ತಿನ್ನಿ.
  •    ನಿಂಬೆಹಣ್ಣನ್ನು ಚೀಪುತ್ತಿದ್ದರೆ ಹೊಟ್ಟೆ ತೊಳೆಸುವುದು ದೂರವಾಗುವುದು
  •    ನೇಂದ್ರ ಬಾಳೆಹಣ್ಣಿನ ಸಿಪ್ಪೆ ಕಷಾಯ ಸೇವನೆಯಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ
  •    ಈರುಳ್ಳಿಯನ್ನು ಉಪ್ಪಿನೊಂದಿಗೆ ತಿಂದರೆ ಹೊಟ್ಟೆನೋವು ಮಾಯವಾಗುತ್ತದೆ.
  •    ಮಗುವಿಗೆ ಹೊಟ್ಟೆ ಉಬ್ಬರವಿದ್ದಾಗ ವೀಳ್ಯದೆಲೆಗೆ ಹರಳೆಣ್ಣೆ ಸವರಿ ಬಾಡಿಸಿ ಹೊಟ್ಟೆಯ ಮೇಲೆ ಶಾಖ ಕೊಡಿ. - ಕರಿಮೆಣಸಿನ ಪುಡಿಗೆ ಬೆಲ್ಲ ಬೆರೆಸಿ ತಿನ್ನಿ.
  •    ನೀರಿನಲ್ಲಿ ಬೇಯಿಸಿದ ಹುರುಳಿಕಾಯಿ ಕಟ್ಟನ್ನು ಬಸಿದು ಮಾಡಿದ ಸಾರಿನ ಸೇವನೆ ಹೊಟ್ಟೆ ನೋವಿನ ಜತೆ ಹೊಟ್ಟೆಹುಣ್ಣನ್ನೂ ಗುಣಪಡಿಸುತ್ತದೆ.
  •    ಹೊಟ್ಟೆಹುಣ್ಣು ಇದ್ದಾಗ ಬೂದುಕುಂಬಳದ 1 ಲೋಟ ರಸಕ್ಕೆ ಕಲ್ಲುಸಕ್ಕರೆ ಮತ್ತು ಏಲಕ್ಕಿಯೊಂದಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 15 ದಿವಸ ಸೇವಿಸಿ.
  •     ಅತಿಮಧುರ ಪುಡಿಯನ್ನು 1 ಚಮಚ ತುಪ್ಪದೊಂದಿಗೆ ಊಟಕ್ಕೆ 1/2 ಗಂಟೆ ಮುಂಚೆ ದಿನಕ್ಕೆ 2 ಸಲ ತೆಗೆದುಕೊಳ್ಳಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!