ಆರೋಗ್ಯ-ಜೀವನಶೈಲಿ

ಈಜಿ ಲೈಫ್

ಈಜಬೇಕು ಇದ್ದು ಜಯಿಸಬೇಕು...


ಚೈತನ್ಯದಿಂದಿರುವ ವ್ಯಕ್ತಿ ಆರೋಗ್ಯವಂತ ಹಾಗೂ ದೃಢಕಾಯ ಆಗಿರುತ್ತಾನೆ. ಬುದ್ಧಿ ಹಾಗೂ ದೇಹವನ್ನು ಸುವ್ಯವಸ್ಥಿತವಾಗಿ ಬೆಳೆಸಲು ಸ್ವಿಮ್ಮಿಂಗ್ ಉತ್ತಮ ವ್ಯಾಯಾಮ.
ಹೊಂದಾಣಿಕೆ, ಸಹಕಾರ, ಶಿಸ್ತು ರೂಢಿಯಾಗುವುದರೊಂದಿಗೆ, ಈಜಿನಿಂದ ಸೋಲು-ಗೆಲವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವೂ ಬೆಳೆಯುತ್ತದೆ. ಈಜುವಾಗ ಶೇ.90ರಷ್ಟು ದೇಹದ ತೂಕವನ್ನು ನೀರು ಭರಿಸುವುದರಿಂದ ಹೆಚ್ಚು ಆಯಾಸವೂ ಆಗುವುದಿಲ್ಲ.
ಸ್ಲಿಮ್ ಆಗಲು ಸ್ವಿಮ್
    ಕೀಲು ರೋಗ ಹಾಗೂ ಬೊಜ್ಜಿಗೆ ಸ್ವಿಮ್ಮಿಂಗ್ ಪರಿಹಾರವಾಗಬಲ್ಲದು.
    ಗಾಳಿಗಿಂತ 12ಪಟ್ಟು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ನೀರು ಒದಗಿಸುತ್ತದೆ. ಆದ್ದರಿಂದ ಈಜು ಮಕ್ಕಳ ಸಹಜ ಬೆಳವಣಿಗೆಗೆ ಸಹಕರಿಸುತ್ತದೆ. ಕಾರ್ಯಕ್ಷಮತೆ, ಬುದ್ಧಿಕ್ಷಮತೆ, ಏಕಾಗ್ರತೆಗೆ ಇದು ಸಹಾಯಕ.
    ಇತರೆ ವ್ಯಾಯಾಮಗಳಿಗಿಂತ ಈಜಿನಲ್ಲಿ ದೈಹಿಕ ಸದೃಢತೆ ಹೆಚ್ಚುತ್ತದೆ. ಇದರಲ್ಲಿ ಒಮ್ಮೆಯೇ ದೇಹದ ಎಲ್ಲ ಭಾಗಗಳಿಗೂ ಏಕಕಾಲಕ್ಕೆ ವ್ಯಾಯಮ ಸಿಕ್ಕಿ, ದೈಹಿಕ ಸಾಮರ್ಥ್ಯ ವೃದ್ಧಿಸುತ್ತದೆ.
= ಅತಿಯಾದ ಕ್ಯಾಲೋರಿ ದಹಿಸಬಲ್ಲ ಸ್ವಿಮ್ಮಿಂಗ್ ಕೊಲೆಸ್ಟ್ರಾಲ್ ಅನ್ನು ಸಮ ಪ್ರಮಾಣದಲ್ಲಿಡುತ್ತದೆ. ದೇಹದ ತೂಕವನ್ನು ಸಮತೋಲನದಲ್ಲಿಡುತ್ತದೆ.
= ಸುಸೂತ್ರ ರಕ್ತ ಪರಿಚಲನೆಗೆ ಸಹಕರಿಸುವ ಈಜಿನಿಂದ ಮಧಮೇಹವೂ ದೂರವಾಗುತ್ತದೆ. ಒತ್ತಡ, ಆಯಾಸವನ್ನು ಇದು ದೂರ ಮಾಡುತ್ತದೆ.
    ಉಸಿರಾಟದ ಕ್ರಿಯೆ ದೀರ್ಘವಾಗಿ ದೇಹಕ್ಕೆ ಹೆಚ್ಚಿನ ಆಮ್ಲಜನಕ ಸಿಗುತ್ತದೆ. ಶ್ವಾಸಕೋಶದ ಕ್ಷಮತೆಯನ್ನು ಹೆಚ್ಚಿಸುವ ಇದು ಅಸ್ತಮಾವನ್ನು ಕಡಿಮೆ ಮಾಡುತ್ತದೆ.
    ದಿನಕ್ಕೆ 30 ನಿಮಿಷ ಈಜಿದರೂ ಹೃದ್ರೋಗದಿಂದ ಮುಕ್ತರಾಗಬಹುದು ಎನ್ನುತ್ತದೆ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ವರದಿ.


ಜೀವಕ್ಕೆ ರಕ್ಷಣೆ
ಈಜು ಮನುಷ್ಯನ ದೇಹದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿರುವುದರೊಂದಿಗೆ ಜೀವರಕ್ಷಣೆಯನ್ನೂ ಮಾಡುತ್ತದೆ. ಭಾರತದಲ್ಲಿ ವರ್ಷಕ್ಕೆ 106,000 ಮಂದಿ ನೀರಿನಲ್ಲಿ ಮುಳುಗಿ ಮೃತಪಡುತ್ತಾರೆ. ಇದರಲ್ಲಿ ಶೇ.80ರಷ್ಟು 18 ವರ್ಷದೊಳಗಿನವರು. ಅದಕ್ಕೆ ಬಾಲ್ಯದಲ್ಲಿಯೇ ಈಜನ್ನು ಕಲಿಸಿಬಿಟ್ಟರೆ ಒಳಿತು.

= ಮೇಘಾ ಕುಕ್ಕುಜೆ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು