ಇಂಟರ್ನೆಟ್ ಬಳಕೆ (ಸಾಂದರ್ಭಿಕ ಚಿತ್ರ) 
ಆರೋಗ್ಯ-ಜೀವನಶೈಲಿ

ಇಂಟರ್ನೆಟ್ ಗೀಳಿನಿಂದ ಶೇ. 6ರಷ್ಟು ಜನ ಜೀವನ ದುಸ್ತರ

ಜಗತ್ತಿನಾದ್ಯಂತ ಶೇ.6 ರಷ್ಟು ಜನರು ಇಂಟರ್ನೆಟ್ ದುರ್ವ್ಯಸನಕ್ಕೊಳಗಾಗಿದ್ದು, ಇದರಿಂದ ವ್ಯಕ್ತಿ ಜೀವನದಲ್ಲಿ ಸಂಕಷ್ಟ ...

ವಾಷಿಂಗ್ಟನ್: ಜಗತ್ತಿನಾದ್ಯಂತ ಶೇ.6 ರಷ್ಟು ಜನರು ಇಂಟರ್ನೆಟ್ ದುರ್ವ್ಯಸನಕ್ಕೊಳಗಾಗಿದ್ದು, ಇದರಿಂದ ವ್ಯಕ್ತಿ ಜೀವನದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಅತಿಯಾದ ಇಂಟರ್ನೆಟ್ ಬಳಕೆಯಿಂದಾಗಿ ಬದುಕು ಮಾತ್ರವಲ್ಲ ಮಾನವೀಯ ಸಂಬಂಧಗಳು, ಆರೋಗ್ಯ ಕೂಡಾ ಹಾಳಾಗುತ್ತಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಪ್ರತಿಯೊಂದು ಪ್ರದೇಶಕ್ಕನುಗುಣವಾಗಿ ಇಂಟರ್ನೆಟ್ ಬಳಕೆದಾರರ ಜನ ಜೀವನದಲ್ಲಿ ಬದಲಾವಣೆಗಳು ಕಾಣಿಸಿಕೊಂಡಿವೆ. 31 ರಾಷ್ಟ್ರಗಳ 89,000 ಜನರ ಜೀವನ ಶೈಲಿಯ ಮೇಲೆ ನಿಗಾ ವಹಿಸಿ ಈ ಅಧ್ಯಯನ ವರದಿ ತಯಾರಿಸಲಾಗಿದೆ.

ಈ ಬಗ್ಗೆ ಅಧ್ಯಯನ ನಡೆಸಿದ ಹಾಂಗ್ ಕಾಂಗ್ ವಿಶ್ವ ವಿದ್ಯಾನಿಲಯದ ಸಿಸಿಲಿಯಾ ಚೆಂಗ್ ಮತ್ತು ಏಂಜಲ್ ಯೀ ಲಮ್ ಲೀ ಇಂಟರ್ನೆಟ್‌ನ ಮಿತಿ ಮೀರಿದ ಬಳಕೆ ಶೇ. 6 ಜನರ ಜೀವನವನ್ನು ಬಾಧಿಸಿದೆ ಎಂದಿದ್ದಾರೆ.

ಏಷ್ಯಾದಲ್ಲಿ ಚೈನಾ, ಹಾಂಗ್ ಕಾಂಗ್, ಇಂಡಿಯಾ, ದಕ್ಷಿಣ ಕೊರಿಯಾ, ತೈವಾನ್ ದೇಶಗಳಲ್ಲಿ ಶೇ. 7.1 ಜನರು ಇಂಟರ್ನೆಟ್ ಗೀಳು ಉಳ್ಳವರಾಗಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!

'ದೇಶಕ್ಕೆ ಬೇಕಿರುವುದು ಸಾಕ್ಷ್ಯವೇ ಹೊರತು ಆರೋಪಗಳಲ್ಲ; ರಾಹುಲ್ ಗಾಂಧಿಯದ್ದು 'ಪೊಳ್ಳು' ಪ್ರತಿಭಟನೆ, ಆರೋಪ: ಬಿಜೆಪಿ ವಾಗ್ದಾಳಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!

'ಬೆಂಗಳೂರಿನಲ್ಲಿ ಬ್ಲಿಂಕಿಟ್ ರೀತಿ ಕೆಲವೇ ನಿಮಿಷದಲ್ಲಿ ಗುಂಡಿ ಮುಚ್ಚುತ್ತೇವೆ': GBA ಮುಖ್ಯ ಆಯುಕ್ತ ಮಹೇಶ್ವರ ರಾವ್