ಸಣ್ಣಪುಟ್ಟ ಕಾಯಿಲೆಗೆಲ್ಲಾ ಯಾಕೆ ವೈದ್ಯರ ಹತ್ತಿರ ಹೋಗಬೇಕೆಂದು ತಲೆನೋವಿಗೆ ಜ್ವರಕ್ಕೆ, ಮೈ ಕೈ ನೋವಿಗೆಂದು ಎಲ್ಲರೂ ಪ್ಯಾರಸಿಟಮಾಲ್ ಗುಳಿಗೆಯನ್ನು ತಮ್ಮ ಹತ್ತಿರ ಇಟ್ಟುಕೊಂಡಿರುತ್ತಾರೆ. ಈ ಔಷಧ ಎಷ್ಟು ಪರಿಣಾಮಕಾರಿಯೋ ಅಷ್ಟೇ ಅಪಾಯಕಾರಿ ಕೂಡಾ ಎಂಬುದು ನೆನಪಿರಲಿ.
ಯಕೃತ್ತಿನ ನಿಷ್ಕ್ರಿಯತೆಗೆ ಪ್ಯಾರಸಿಟಮಾಲ್‌ನಲ್ಲಿರುವ ವಿಷ ಪ್ರಮುಖ ಕಾರಣ. ಈ ಔಷಧಿಯಿಂದ ಮಾರಣಾಂತಿಕವಾದ ಚರ್ಮ ಕಾಯಿಲೆ ಬರಬಹುದು. ಈ ಕುರಿತು 2013ರಲ್ಲಿ ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಎಚ್ಚರಿಸಿದೆ. ಗರ್ಭಿಣಿಯರಿದ್ದಾಗ ಪ್ಯಾರಾಸಿಟಮಾಲ್ ಸೇವಿಸಿದರೆ ಮುಂದೆ ಹುಟ್ಟುವ ಮಗುವಿನ ಬಂಜೆತನಕ್ಕೆ ಕಾರಣವಾಗುತ್ತದೆ. ಮತ್ತೊಂದು ಅಧ್ಯಯನದ ಪ್ರಕಾರ ಒಂದು ವರ್ಷದೊಳಗಿನ ಮಗುವಿನ ಜ್ವರಕ್ಕೆ ನೀಡುವ ಈ ಮಾತ್ರೆಯಿಂದ ಅಸ್ತಮಾದಂಥ ಕಾಯಿಲೆಗಳು, ಮಗು ಆರೇಳು ವರ್ಷ ವಯಸ್ಸಾದಾಗ ಕಂಡುಬರುತ್ತದೆ. ಇಷ್ಟಕ್ಕೂ ಜ್ವರ ಬಂದಾಗ ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಅವಶ್ಯಕತೇ ನಿಜವಾಗಿಯೂ ಇದೆಯೆ? ಈ ಕುರಿತು ವೈದ್ಯ ಲೋಕದಲ್ಲಿಯೇ ಭಿನ್ನಭಿಪ್ರಾಯಗಳಿವೆ.
ಜ್ವರ ಒಳ್ಳೆಯದು!
ದೇಹದ ಉಷ್ಣತೆ ಹೆಚ್ಚಾದಾಗ ದೇಹದ ರೋಗ ನಿರೋಧಕ ವ್ಯವಸ್ಥೆ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ. ಕೆಲವೊಂದು ರೋಗಾಣುಗಳು ಹೆಚ್ಚಿದ ಉಷ್ಣತೆಯಲ್ಲಿ ಜೀವಿಸಲಾರವು. ರೋಗಾಣುಗಳಿಂದ ಬಿಡುಗಡೆಯಾದ ವಿಷಾಂಶದ ಪರಿಣಾಮ ಕಡಿಮೆ ಆಗುವುದು. ಜ್ವರ ಬಂದಾಗ ದೈನಂದಿನ ಚಟುವಟಿಕೆ ಮಾಡಲು ಆಗದೆ ದೇಹ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಔಷಧಿ ಇಲ್ಲದೆಯೇ ರೋಗಿಯು ಬೇಗನೆ ಗುಣಮುಖನಾಗುತ್ತಾನೆ.
ಜ್ವರ ಬಂದರೆ ಹೆದರಬೇಡಿ!
ಜ್ವರ ಬಂದ ತಕ್ಷಣ ಅದಕ್ಕೆ ಚಿಕಿತ್ಸೆ ನೀಡಬೇಕೇಂದೇನೂ ಇಲ್ಲ. ಬಹಳಷ್ಟು ಸಲ ಔಷಧಿ ಇಲ್ಲದೆಯೇ ರೋಗಿಯು ಜ್ವರಮುಕ್ತನಾಗುತ್ತಾನೆ. ಪ್ಯಾರಸಿಟಮಾಲ್ ಸೇವನೆಯಿಂದ ರೋಗಿಗೆ ಹಿತವೆನಿಸುತ್ತದೆಯೇ ಹೊರತು ಒಳಗಿನ ರೋಗ ಶಮನವಾಗುವುದಿಲ್ಲ. ನಿಜವಾದ ಕಾರಣ ತಿಳಿದು ಜ್ವರಕ್ಕೆ ಚಿಕಿತ್ಸೆ ನೀಡಬೇಕಾಗುತ್ತದೆ. ಜ್ವರ 38.5 ಡಿಗ್ರಿ ಫ್ಯಾರನ್‌ಹೀಟ್ (101 ಡಿಗ್ರಿ ಸೆಂಟಿಗ್ರೇಡ್)ಕ್ಕಿಂತ ಹೆಚ್ಚಿದ್ದರೆ ಮಾತ್ರ ಪ್ಯಾರಸಿಟಮಾಲ್ ಬಳಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಿಸಿದೆ.
ಜ್ವರ ಅಪಾಯಕಾರಿ ಮಟ್ಟಕ್ಕೆ ಹೋಗುವುದು ತೀರ ವಿರಳ. ದೇಹದ ಉಷ್ಣತೆ 42 (107.6) ತಲುಪುವವರೆಗೆ ಮಿದುಳಿಗೆ ಹಾನಿಯುಂಟಾಗುವುದಿಲ್ಲ. ಸಾಮಾನ್ಯವಾಗಿ ಚಿಕಿತ್ಸೆ ನೀಡದಿದ್ದರೂ ಜ್ವರ 40.6 (105) ತಲುಪುವ ಸಾಧ್ಯತೆ ತೀರ ಕಡಿಮೆ.
ಜ್ವರ ಬಂದಾಗ ಹೀಗೆ ಮಾಡಿ