ಆರೋಗ್ಯ-ಜೀವನಶೈಲಿ

ನೋ ಟೆನ್ಶನ್, ನೋ ಬಿಪಿ

ಆಧುನಿಕ ಬದುಕಿನಲ್ಲಿ ಎಲ್ಲರಿಗೂ ಕಾಡಬಹುದಾದ ಸಾಮಾನ್ಯ ಸಮಸ್ಯೆ ಎಂದರೆ ಅಧಿಕ ರಕ್ತದೊತ್ತಡ.
ಇದಕ್ಕೆ ವ್ಯಕ್ತಿಯ ವಯಸ್ಸು, ಕೌಟಂಬಿಕ ಹಿನ್ನಲೆ, ಲಿಂಗ, ದೈಹಿಕ ಮತ್ತು ಮಾನಸಿಕ ಸ್ಥಿತಿ, ಆಹಾರಕ್ರಮ, ಹವ್ಯಾಸಗಳು, ಉದ್ಯೋಗ ಇನ್ನಿತರ ಕಾರಣಗಳು ನೇರವಾಗಿ ಅಥವಾ ಅಥವಾ ಪರೋಕ್ಷವಾಗಿ ಪರಿಣಾಮ ಬೀರುತ್ತಿವೆ. ಮನುಷ್ಯನ ಶರೀರದ ರಕ್ತನಾಳಗಳು ಕಿರಿದಾಗುವುದರಿಂದ ರಕ್ತಸಂಚಾರಕ್ಕೆ ಅಡಚಣೆಯಾಗಿ ಆ ರಕ್ತನಾಳಗಳ ಪದರಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ ಮತ್ತು ಹೃದಯವು ರಕ್ತವನ್ನು ಪೂರೈಸುವ ಕಾರ್ಯವನ್ನು ಒತ್ತಡದಿಂದ ಮಾಡುವಂತಾದಾಗಲೂ ಅಧಿಕ ರಕ್ತದೊತ್ತಡ ಕಂಡುಬರುತ್ತದೆ.  

ಕಾರಣಗಳೇನು?
ಅಧಿಕ ಉಪ್ಪು ಸೇವನೆ: ಆಹಾರದಲ್ಲಿ ಅಗತ್ಯಕ್ಕಿಂತ ಅತಿಯಾದ ಉಪ್ಪಿನ (ಸೋಡಿಯಂ) ಬಳಕೆಯಿಂದ ದೇಹದಲ್ಲಿ ದ್ರವಾಂಶವು ಉಳಿಯುತ್ತದೆ.
ಅನಿಯಮಿತ ಆಹಾರಕ್ರಮ: ಸಮತೋಲನವಿಲ್ಲದ ಆಹಾರ ಕ್ರಮವು ಕಾರಣವಾಗುತ್ತದೆ. ಉದಾಹರಣೆಗೆ ಸಮಯ ಮೀರಿ ಊಟ ಮಾಡುವುದು, ಆಹಾರದಲ್ಲಿ ಅತಿಯಾದ ಮಸಾಲೆ, ಕರಿದ ಉಪ್ಪಿನ ಪದಾರ್ಥಗಳು, ಮಾಂಸಾಹಾರ ಸೇವನೆಯಿಂದಲೂ ರಕ್ತದೊತ್ತಡ ಹೆಚ್ಚಾಗುತ್ತದೆ.

ದೈಹಿಕಶ್ರಮದ ಕೊರತೆ: ಆಧುನಿಕ ಶೈಲಿಯ ಜೀವನ ಪದ್ಧತಿಯಿಂದ ಶಾರೀರಿಕ ಚಟುವಟಿಕೆಗಳು ಅಂದರೆ ದೈಹಿಕ ಕೆಲಸಗಳು, ಯೋಗ, ವ್ಯಾಯಾಮ, ವಾಕಿಂಗ್ ಮಾಡದೇ ಇರುವುದರಿಂದ ಬೊಜ್ಜು ಇನ್ನಿತರ ಸಮಸ್ಯೆಗಳ ಜೊತೆ ರಕ್ತದೊತ್ತಡಕ್ಕೆ ಕಾರಣವಾಗುತ್ತವೆ.

ಮಾನಸಿಕ ಒತ್ತಡ: ಮಾನಸಿಕವಾಗಿ ಖಿನ್ನತೆ, ಒತ್ತಡ, ಅತಿಯಾದ ದುಃಖ, ಚಿಂತೆ, ಉದ್ಯೋಗದ ಒತ್ತಡ, ಮಾನಸಿಕವಾಗಿ ನಿರಂತರ ಪರಿಶ್ರಮವೂ ಕಾರಣವಾಗುತ್ತದೆ.
ಮದ್ಯಪಾನ ಹಾಗೂ ತಂಬಾಕು ಸೇವನೆ: ಅತಿಯಾದ ಮದ್ಯಪಾನ, ತಂಬಾಕು ಸೇನೆಯಿಂದಲೂ ರಕ್ತದೊತ್ತಡ ಜತೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ.
ಇಷ್ಟೇ ಅಲ್ಲದೆ, ದೀರ್ಘಕಾಲೀನ ರೋಗಗಳಾದ ಮಧುಮೇಹ, ಮೂತ್ರ ಸಂಬಂಧಿ ಕಾಯಿಲೆಗಳು, ನಿದ್ರಾಹೀನತೆ, ಬೊಜ್ಜು ಇತ್ಯಾದಿ ಕಾರಣಗಳು ರಕ್ತದೊತ್ತಡ ಹೆಚ್ಚಾಗಲು ಕಾರಣವಾಗುತ್ತವೆ.

ಲಕ್ಷಣಗಳೇನು?
ತಲೆನೋವು, ತಲೆಸುತ್ತು, ಕಣ್ಣಿಗೆ ಕತ್ತಲು ಕವಿಯುವುದು, ಮೂಗಿನಲ್ಲಿ ರಕ್ತಸ್ರಾವ, ಹೃದಯಬಡಿತದಲ್ಲಿ ಹೆಚ್ಚಳ, ಎದೆನೋವು. ಮಾನಸಿಕವಾಗಿ ಗಾಬರಿ, ಆಯಾಸ, ನಿದ್ರಾಹೀನತೆ.

ತೊಂದರೆಗಳೇನು?

  • ರಕ್ತದೊತ್ತಡವನ್ನು ಶೀಘ್ರವಾಗಿ ಗುರುತಿಸಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಹೃದಯ ವೈಫಲ್ಯತೆ, ಪಾರ್ಶ್ವವಾಯು, ಹೃದಯ ಮತ್ತು ಮೂತ್ರಪಿಂಡ ಸಂಬಂಧಿ ಕಾಯಿಲೆಗಳು ಬರುತ್ತವೆ.

ತಡೆಗಟ್ಟುವುದು ಹೇಗೆ?

  •     ನಿಯಮಿತವಾಗಿ ವೈದ್ಯರ ಬಳಿ ರಕ್ತದೊತ್ತಡದ ಪರಿಕ್ಷೆ ಮಾಡಿಸಿಕೊಂಡು ಸಹಜವಾಗಿದೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು. ಅವಶ್ಯವಿದ್ದರೆ ವೈದ್ಯರ ಸಲಹೆ ಮೇರೆಗೆ ಔಷಧಿ ತೆಗೆದುಕೊಳ್ಳಿ.
  •     ರಕ್ತದೊತ್ತಡ ಬರುವುದಕ್ಕೆ ಮೊದಲೇ ಶಿಸ್ತುಬದ್ಧ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಿ.
  •     ಸಮತೋಲನ ಆಹಾರ ಸೇವಿಸಿ, ಕರಿದ ಮಸಾಲೆಯುಕ್ತ, ಮಾಂಸಹಾರ, ಫಾಸ್ಟ್‌ಪುಡ್ ಬೇಡ.
  •     ನಿಯಮಿತವಾಗಿ ಯೋಗ, ವ್ಯಾಯಮ, ವಾಕಿಂಗ್ ಮಾಡಿ.
  •     ಡಯಾಬಿಟಿಕ್ ರೋಗಿಗಳಾಗಿದ್ದರೆ ಕ್ರಮಬದ್ಧ ಆಹಾರ, ವಿಹಾರ, ಔಷಧಗಳಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಗದಿತ ಪ್ರಮಾಣದಲ್ಲಿ ಇರಿಸಿಕೊಳ್ಳಿ.
  •     ಸೋಡಿಯಂ ದಿನಚರಿ ಪಾಲಿಸಿ. ಅಂದರೆ ದೇಹಕ್ಕೆ ದಿನನಿತ್ಯ ಅಗತ್ಯ ಪ್ರಮಾಣದಲ್ಲಿ ಮಾತ್ರ ಉಪ್ಪು ಸೇವಿಸಬೇಕು.
  •     ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ.
  •     ದೇಹದ ತೂಕ ಸಮ ಪ್ರಮಾಣದಲ್ಲಿರಲಿ.
  •     ನಿಯಮಿತ ಪ್ರಮಾಣದಲ್ಲಿ ನಿದ್ರೆ ಮಾಡಿ. ದಿನಕ್ಕೆ 7 ರಿಂದ 8 ಗಂಟೆ ನಿದ್ದೆ ಮಾಡಿ.
  •     ಹೈ ಬ್ಲಡ್‌ಪ್ರೆಶರ್‌ರಿಂದ ಬಳಲುತ್ತಿದ್ದರೆ ವೈದ್ಯರು ಸೂಚಿಸಿದ ಔಷಧಿಗಳನ್ನು ತಪ್ಪದೇ ಸೇವಿಸಬೇಕು.
ರಕ್ತದೊತ್ತಡ ಪ್ರಮಾಣ
  • ಸಾಮಾನ್ಯ ರಕ್ತದೊತ್ತಡ ಪ್ರಮಾಣ 120/80 mm/Hg120/80 ರಿಂದ 140/90 ನಡುವಿನ ರಕ್ತದೊತ್ತಡವನ್ನು ಪ್ರಿ-ಹೈಪರ್‌ಟೆನ್ಷನ್ ಎನ್ನುತ್ತಾರೆ.
  • 140/90 ಅಥಾವ ಅದಕ್ಕಿಂತ ಹೆಚ್ಚಿನ ರಕ್ತದೊತ್ತಡವನ್ನು ಅಧಿಕ ರಕ್ತದೊತ್ತಡವನ್ನು ಹೈ-ಬ್ಲಡ್‌ಪ್ರೆಶರ್ ಎನ್ನುತ್ತಾರೆ.
- ಡಾ. ಸಿದ್ದಲಿಂಗಸ್ವಾಮಿ ಜಿ.ಸಿ, ದಾವಣಗೆರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ