ರಾತ್ರಿ ವಿಶ್ರಾಂತಿದಾಯಕ, ಸುಖಕರವಾದ ನಿದ್ರೆ ಮಾಡಿದರೆ ಮರುದಿನದ ಅರ್ಥಪೂರ್ಣ ಕ್ರಿಯೆಗಳಿಗೆ ಉಲ್ಲಾಸ, ಉತ್ತೇಜನ ಲಭಿಸುತ್ತದೆ. ಒಬ್ಬ ವ್ಯಕ್ತಿ ಇಂತಿಷ್ಟೇ ನಿದ್ರೆ ಮಾಡಬೇಕೆಂಬ ಕಟ್ಟುಬದ್ಧ ನಿಯಮವೇನೂ ಇಲ್ಲ. ಅವರವರ ಅನುಕೂಲ, ಸಮಯಕ್ಕೆ ತಕ್ಕಂತೆ ನಿದ್ರೆ ಮಾಡುತ್ತಾರೆ. ಆದರೆ, ಕಡಿಮೆ ನಿದ್ರೆ ಮಾಡಿದರೆ ಆರೋಗ್ಯ ಕೈ ಕೊಡುವುದಲ್ಲದೇ ಅದರ ಹಿಂದೆಯೇ ಹತ್ತಾರು ಕಾಯಿಲೆಗಳು ವಕ್ಕರಿಸಿಕೊಳ್ಳುತ್ತವೆ.
ವಯಸ್ಸು, ವೃತ್ತಿಯ ಸ್ವರೂಪ, ದೈಹಿಕ ಶ್ರಮ ಹಾಗೂ ಮಾನಸಿಕ ಸ್ಥಿತಿಗತಿ ಅವಲಂಬಿಸಿ ನಿದ್ರೆಯ ಅವಧಿ ನಿಗದಿತವಾಗುತ್ತದೆ. ಮಗುವೊಂದು ದಿನದಲ್ಲಿ 16ರಿಂದ 18 ಗಂಟೆ ನಿದ್ರೆ ಮಾಡಿದರೆ ವಯಸ್ಕರು ಸರಿಸುಮಾರು 4ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುತ್ತಾರೆ. ಕೆಲವು ಕುಂಭಕರ್ಣರು ಎಚ್ಚರ ಇರುವುದ್ದಕ್ಕಿಂತ ಮಲಗುವುದೇ ಹೆಚ್ಚು!
ವೇಳೆ ತಪ್ಪಿಸಬೇಡಿ
'ಬೇಗ ಮಲಗಿ ಬೇಗ ಏಳು' ಎಂಬುದು ನಾಣ್ಣುಡಿ. ಮಲಗುವ ವೇಳೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೆಲವರಿಗೆ ನಿದ್ರೆ ಬರುವುದಿಲ್ಲ. ಅಷ್ಟೇ ಏಕೆ? ಜಾಗ ಬದಲಾದರೂ ಮಗ್ಗಲು ಬದಲಿಸುವುದು ಕಷ್ಟವಾಗುತ್ತದೆ. ಹೀಗಾಗಿ ಮಲಗುವ ಸ್ಥಳ ಹಾಗೂ ಸಮಯ ಸರಿಯಾಗಿರಲಿ. ಮಧ್ಯಾಹ್ನದ ನಿದ್ರೆ ಹೆಚ್ಚಾದರೂ ರಾತ್ರಿ ಮಲಗಲು ಪರದಾಡಬೇಕಾಗುತ್ತದೆ. ಹೀಗಾಗಿ ಮಧ್ಯಾಹ್ನದ ಕೋಳಿ ನಿದ್ರೆ ಸಮಯ ಮೀರದಿರಲಿ.
ಹಾಲು ಕುಡಿದು ಮಲಗಿ
ಮಲಗುವ ಮುನ್ನ ಅಂದರೆ ಊಟದ ಬಳಿಕ ಒಂದು ಲೋಟ ಬಿಸಿ ಹಾಲು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. 'ಅಮೈನೋ ಆಮ್ಲ'ಗಳು ಹಾಲಿನಲ್ಲಿ ಹೆಚ್ಚಾಗಿರುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಅಲ್ಲದೇ ಮಧ್ಯದಲ್ಲಿ ಎಚ್ಚರವಾಗುವ ದುಸ್ಥಿತಿಯೂ ತಪ್ಪುತ್ತದೆ. ಮದ್ಯಪಾನ, ಧೂಮಪಾನ ಮಾಡುವುದರಿಂದ ನಿದ್ರಾಭಂಗವಾಗುತ್ತದೆ. ನಶೆಯ ಕ್ಷಣದಲ್ಲಿ ನಿದ್ರೆ ಅಮಲು ಬಂದರೂ ಎಚ್ಚರವಾದ ಬಳಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆ ಮಾತ್ರೆಯ ಸುದ್ದಿಗೆ ಹೋಗಲೇ ಬೇಡಿ.
ಹೆಚ್ಚು ನಿದ್ರೆ ಅಪಾಯಕಾರಿ
ಸಮಯ ಸಿಕ್ಕದೆ ಎಂದು ಹಾಸಿಗೆಯಲ್ಲಿ ಬಿದ್ದುಕೊಳ್ಳುವುದು ಸರಿಯಲ್ಲ. 6ರಿಂದ 8 ಗಂಟೆ ಆರೋಗ್ಯಕರ ನಿದ್ರೆ. ದೈಹಿಕವಾಗಿಯೂ ಹಿತ. ಆದರೆ, ಹೆಚ್ಚು ನಿದ್ರೆ ಮಾಡಿದರೆ ಸ್ನಾಯುಗಳಲ್ಲಿ ಪೌಷ್ಟಿಕಾಂಶ ಕೊರತೆ ಉಂಟಾಗುತ್ತದೆ. ಬೆನ್ನು ನೋವು, ಮಂಡಿ ನೋವು ಸೇರಿದಂತೆ ಇತರೆ ಕಾಯಿಲೆಗಳು ಅಮರಿಕೊಳ್ಳುತ್ತವೆ.
ಅಷ್ಟ ಸೂತ್ರ