ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಎಂಆರ್‌ಐ ಸ್ಕ್ಯಾನಿಂಗ್

Mainashree
Updated On : 10 Jan 2014, 3:47 am

ರೋಗಗಳ ಕ್ಲಿಷ್ಟಕರ ಪರಿಸ್ಥಿತಿಯನ್ನು ಕರಾರುವಕ್ಕಾಗಿ ಪತ್ತೆ ಹಚ್ಚಲು ಎಂಆರ್‌ಐ ಸ್ಕ್ಯಾನಿಂಗ್ ಪ್ರಮುಖ ಪಾತ್ರವಹಿಸುತ್ತದೆ. 'ಮ್ಯಾಗ್ನಿಟಿಕ್ ರೆಸೊನೆನ್ಸ್ ಇಮೇಜಿಂಗ್‌' ಅನ್ನು ಸಂಕ್ಷಿಪ್ತವಾಗಿ 'ಎಂಆರ್‌ಐ' ಸ್ಕ್ಯಾನ್ ಎಂದು ಕರೆಯಲಾಗುತ್ತದೆ. ಸಿ.ಟಿ. ಸ್ಕ್ಯಾನಿಂಗ್‌ನಲ್ಲಿ ಬಳಸುವಂತೆ ಕ್ಷ ಕಿರಣವನ್ನು ಬಳಸದೇ ಆಯಸ್ಕಾಂತದ ಶಕ್ತಿಯನ್ನು ಬಳಸಿಕೊಳ್ಳಲಾಗುತ್ತಿದೆ. ಶಕ್ತಿಯುತ ಆಯಸ್ಕಾಂತವು ದೇಹದಲ್ಲಿನ ಅಣುಗಳ ಗುಂಪನ್ನು ಸ್ಥಾನಪಲ್ಲಟಗೊಳಿಸುತ್ತದೆ. ಹೀಗೆ ಆದ ಬಳಿಕ ಅಣುಗಳ ಗುಂಪು ಮೊದಲಿನ ಸ್ಥಳಕ್ಕೆ ಬಂದಾಗ ಆಯಸ್ಕಾಂತದ ಸಂಜ್ಞೆ ಹೊರಹೊಮ್ಮುತ್ತದೆ. ಇಂಥ ಸಂಜ್ಞೆಗಳನ್ನು ಕಂಪ್ಯೂಟರ್ ಸಹಾಯದಿಂದ ವಿಶ್ಲೇಷಿಸಿದಾಗ ರೋಗ ಯಾವುದೆಂದು ನಿಖರವಾಗಿ ಹೇಳಬಹುದು. ವಿಶೇಷವಾಗಿ ಮೆದುಳು ಮತ್ತು ಬೆನ್ನು ಹುರಿಯ ರೋಗಗಳನ್ನು ಕಂಡು ಹಿಡಿಯಲು ಎಂಆರ್‌ಐ ಸ್ಕ್ಯಾನಿಂಗ್ ಪ್ರಮುಖ ಪಾತ್ರವಹಿಸುತ್ತದೆ. ಹಾಗೆ ನೋಡಿದರೆ, ಇದು ಸಿ.ಟಿ.ಸ್ಕ್ಯಾನಿಂಗ್‌ಗಿಂತಲೂ ದುಬಾರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement