ನಮ್ಮ ರಕ್ತದಲ್ಲಿರುವ ಹಿಮೋಗ್ಲೋಬಿನ್ (ಎಚ್‌ಬಿ) ಪ್ರಮಾಣದಿಂದ ನಾವೆಷ್ಟು ಆರೋಗ್ಯವಾಗಿದ್ದೇವೆ ಎಂಬುದನ್ನು ಕಂಡುಕೊಳ್ಳಬಹುದು. ಸಾಮಾನ್ಯವಾಗಿ ಕಾಡುವ ಸುಸ್ತು, ತಲೆ ಸುತ್ತು ಎಲ್ಲವೂ ಎಚ್‌ಬಿ ಲೆವೆಲ್ ಸೂಕ್ತ ಪ್ರಮಾಣದಲ್ಲಿದ್ದರೆ ಕಾಡುವುದಿಲ್ಲ. ಅಲ್ಲದೇ ಐರನ್, ವಿಟಮಿನ್ ಬಿ 12 ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಹಲವು ರೋಗಗಳಿಗೆ ಎಡೆ ಮಾಡಿಕೊಡುತ್ತದೆ.
ಪುರುಷರಲ್ಲಿ ಎಚ್‌ಬಿ ಪ್ರಮಾಣ 13.5 ಗ್ರಾಂನಿಂದ 17.5 ಗ್ರಾಂವರೆಗೆ ಹಾಗೂ ಮಹಿಳೆಯರಲ್ಲಿ ಈ ಪ್ರಮಾಣ ಲೀಟರ್‌ಗೆ 12 ಗ್ರಾಂನಿಂದ 15.5 ಗ್ರಾಂವರೆಗೆ ಇದ್ದರೆ ಒಳ್ಳೆಯದು. ಇದಕ್ಕಿಂತ ಕಡಿಮೆಯಾದಲ್ಲಿ ಬ್ಲೀಡಿಂಗ್, ಲ್ಯುಕೇಮಿಯಾ, ಲಿವರ್‌ಗೆ ಸಂಬಂಧಿಸಿದ ರೋಗಗಳು, ಹೈಪೋಥೈರಾಯ್ಡ್, ಕಿಡ್ನಿಗೆ ಸಂಬಂಧಿಸಿದ ರೋಗಗಳು ಕಾಡಬಹುದು.
ಎಚ್‌ಬಿ ಹೆಚ್ಚಾಗಲು...
ಆಹಾರದಲ್ಲಿ ಪಾಲಕ್, ಬೀಟ್‌ರೂಟ್, ಸಿಹಿಗೆಣಸು, ಸೇಮ (ಒಂದು ಅವರೆ ಜಾತಿಯ ತರಕಾರಿ), ಟೊಮೆಟೋ, ಕೋಸು, ಶಿಮ್ಲಾ ಮೆಣಸು, ಕುಂಬಳಕಾಯಿ, ಹೂಕೋಸು ಮತ್ತು ರಾಜ್ಮಾ ಕಾಳುಗಳ ಬಳಕೆ ಹೆಚ್ಚಾಗಿರಲಿ.
ಪಪ್ಪಾಯಿ, ಸೇಬು, ಪೇರಲೆ, ಸ್ಟ್ರಾಬರ್ರಿ, ದ್ರಾಕ್ಷಿ ಮತ್ತು ಕರಬೂಜ ಸೇವನೆಯಿಂದಲೂ ತ್ವರಿತಗತಿಯಲ್ಲಿ ಎಚ್‌ಬಿ ಪ್ರಮಾಣ ಹೆಚ್ಚುತ್ತದೆ.
ಒಣದ್ರಾಕ್ಷಿ, ಆಕ್ರೂಟ್, ಬಾದಾಮಿಯಂಥ ಡ್ರೈಫ್ರೂಟ್ಸ್ ಸೇವನೆ.
ಕಡ್ಲೆಬೀಜ (ಶೇಂಗಾ)ವೂ ದೇಹದಲ್ಲಿ ಐರನ್ ಪ್ರಮಾಣ ಹೆಚ್ಚಿಸಲು ಸಹಕರಿಸುತ್ತದೆ.
ಊಟದಲ್ಲಿ ಗೋದಿ ಮತ್ತು ರವೆಯನ್ನು ಬಳಸಿ.
ಡೈರಿ ಉತ್ಪನ್ನಗಳೂ ಒಳ್ಳೆಯದು.
ಊಟ, ತಿಂಡಿ ಬಗ್ಗೆ ಹೆಚ್ಚು ಗಮನ ಹರಿಸಿ. ನಿಯಮಿತ ವ್ಯಾಯಾಮ ಮಾಡಿದರೂ ಎಚ್‌ಬಿ ಲೆವೆಲ್ ಹೆಚ್ಚುತ್ತದೆ.
-ಎಂ.ಬಿ. ನಾಯಕ ಹಾಸನ