ವಿಶ್ವದಾದ್ಯಂತ ಅತ್ಯಂತ ಪ್ರಬಲವಾಗಿ ಹಬ್ಬಿರುವ ದುಶ್ಚಟಗಳಲ್ಲಿ 'ಧೂಮಪಾನ' ಮೊದಲನೆಯದ್ದು. ಬೀಡಿ, ಸಿಗರೇಟ್, ಚುಟ್ಟಾ, ಹುಕ್ಕಾ... ಹೀಗೆ ಬೇರೆ ಬೇರೆ ವಿಧಗಳಲ್ಲಿ ಬಳಸುತ್ತಾರೆ. ಸಮುದಾಯ ಆರೋಗ್ಯಕ್ಕೆ ಅತ್ಯಂತ ಮಾರಕವಾದ ಧೂಮಪಾನದಿಂದ ವಾರ್ಷಿಕ 35- 40 ಲಕ್ಷ ಜನ ವಿಶ್ವದಾದ್ಯಂತ ಸಾಯುತ್ತಿದ್ದಾರೆ. ಈ ಸಂಖ್ಯೆ 2020ರ ಹೊತ್ತಿಗೆ 100 ಕೋಟಿಯಾಗುವ ಅಂದಾಜಿದೆ.
ತಂಬಾಕು ಬಳಸುವ 2ನೇ ಪ್ರಮುಖ ರಾಷ್ಟ್ರ ಭಾರತ. 15 ವರ್ಷಕ್ಕೂ ಮೇಲ್ಪಟ್ಟ ಶೇ.47 ಗಂಡಸರು, ಶೇ.14 ಹೆಂಗಸರು ಧೂಮಪಾನಿಗಳಾಗಿದ್ದಾರೆ. ಧೂಮಪಾನದಿಂದ ಶ್ವಾಸಕೋಶ - ಮಾರ್ಗದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್, ಹೃದ್ರೋಗ, ಪಾರ್ಶ್ವವಾಯುಗಳು ಬರುತ್ತವೆ. ಆದರೆ, ಶೇ.70 ಜನರು ಧೂಮಪಾನ ಬಿಡಲು ಸಿದ್ಧರಿದ್ದರೂ, ಅವರ ಮನಸ್ಸು - ದೇಹ ಸರಿಯಾಗಿ ಸ್ಪಂದಿಸುವುದಿಲ್ಲ. ಅದರಲ್ಲೂ ಶೇ.20 ಮಂದಿ ಬಿಡಲು ಯತ್ನಿಸುತ್ತಾರೆ. ಆದರೆ, ಅವರಿಗೆ ಧೂಮಪಾನ ಬಿಡುವುದು ಹೇಗೆಂಬುದೇ ಗೊತ್ತಿರುವುದಿಲ್ಲ. ಸುಮ್ಮನೆ ಒಂದೇ ಬಾರಿಗೆ ಚಟ ನಿಲ್ಲಿಸಿದರೆ ಅದರಿಂದಾಗುವ ಹಿಂತೆಗೆತದ ಲಕ್ಷಣ (ಗ್ಝಿಝಿಜ್ಠಛಢಿಛಟ ಡಣಟಠಡ್ಟಿಟಡ) ಗಳಿಂದ ವ್ಯಕ್ತಿ ಮಾನಸಿಕವಾಗಿ ದುರ್ಬಲನಾಗುತ್ತಾನೆ. ಮತ್ತೆ ಚಟಕ್ಕೆ ಮರಳುತ್ತಾನೆ. ಮತ್ತು ಚಟ ಬಿಡಲು ಹೆದರಿ ಬಿಡುತ್ತಾನೆ. ಹಾಗಾಗಿ, ಧೂಮಪಾನ ಬಿಡಲು ಏನೇನು ಮಾಡಬೇಕು ಎಂಬುದರ ಕುರಿತು ಇಲ್ಲಿದೆ ಮಾಹಿತಿ. ಟಿ
ಚಟ ಬಿಡಲು ನಿರ್ಧರಿಸಿದ ದಿನದಂದು...
- ಅತ್ಯಂತ ಶ್ರೇಷ್ಠ ಮತ್ತು ನೆನಪಿನಲ್ಲಿಡಬೇಕಾದ ದಿನದಂದೇ ನಿರ್ಧರಿಸಿ.
- ಚಟ ಬೀಳುವ 2-3 ನಿಮಿಷ ಮಾತ್ರ ತೀವ್ರ ಚಡಪಡಿಕೆ ಇರುತ್ತದೆ.
- ಈ ದಿನದಂದು ಇನ್ನಿತರ ಆರೋಗ್ಯಕಾರಿ ಚಟುವಟಿಕೆ ಪ್ರಾರಂಭಿಸಿ.
- ಅತ್ಯಂತ ಕ್ರಿಯಾಶೀಲರಾಗಿರಿ.
- ಮನಸ್ಸು ತೀವ್ರ ಚಟಕ್ಕೆ ತುಡಿದರೆ ತಕ್ಷಣಕ್ಕೆ ಚಾಕೊಲೇಟ್, ಅಡಕೆ, ಏಲಕ್ಕಿ, ಲವಂಗ, ಸೋಂಪುಕಾಳು, ಬಾಯಿಗೆ ಹಾಕಿಕೊಳ್ಳಿ.
ಇವು ಪರ್ಯಾಯ ಮದ್ದು
- ಸಿಗರೇಟ್ ಸೇವನೆಗೆ ಪರ್ಯಾಯವಾಗಿ ನಿಕೋಟಿನ್ ಬದಲಿ ವಸ್ತು ಅಥವಾ ಅದರ ವಾಸನೆ, ಅದರ ಭ್ರಮೆ ಮೂಡಿಸುವ ಚಾಕೊಲೇಟ್, ಪೇಸ್ಟ್, ಗಮ್.
- ಆಪ್ತ ಸಮಲೋಚನೆ, ಪುನಶ್ಚೇತನ ವಿಧಾನದ ಚಿಕಿತ್ಸೆ.
- ಚಟ ವಿಮುಕ್ತಿ ಕೇಂದ್ರಗಳ ಸಹಕಾರ.
- ಪ್ರತಿ ದಿನ 20ಕ್ಕಿಂತ ಜಾಸ್ತಿ - 4 ಎಂ.ಜಿ. ಗಮ್.
- ವೈದ್ಯಕೀಯ ನೆರವು- ಸಲಹೆ- ಸೂಚನೆ.
- ಬೂಪ್ರೋಪಯೋನ್, ವರೆನಿಸಿಲಿನ್‌ನಂಥ ಔಷಧಿಗಳು.
- ನಿಕೋಟಿನ್ ವಿರೋಧಿ (ಆ್ಯಂಟಿಡೋಟ್) ಔಷಧಿಗಳು.
- ಹಿಂತೆಗೆತ ಲಕ್ಷಣ ನಿಯಂತ್ರಣ, ಅದಕ್ಕೆ ತಕ್ಕುದಾದ ವಿಧಾನದಲ್ಲಿ ಚಿಕಿತ್ಸೆ.
ಇಂಥ ವೇಳೆ 'ಬೇಕು' ಅನ್ಸುತ್ತಾ?
- ಬೆಳಗ್ಗೆ ಎದ್ದ ತಕ್ಷಣ ಶೌಚಕ್ಕೆ ಹೋಗುವಾಗ.
- ಕಾಫಿ/ಟೀ ಸೇವನೆಯೊಡನೆ.
- ತಿಂಡಿ/ ಊಟದ ನಂತರ.
- ಮಧ್ಯ ಸೇವನೆಯೊಡನೆ, ಪೋನಿನಲ್ಲಿ ಮಾತನಾಡುವಾಗ.
- ಚಾಲನೆ ಮಾಡುವಾಗ.
- ಬೇರೆಯವರು ಧೂಮಪಾನ ಮಾಡುವುದನ್ನು ನೋಡಿದಾಗ.
- ಒತ್ತಡ ಚಿಂತೆ, ಬೇಜಾರು.
- ಯಾರಿಗಾದರೂ ಕಾಯುವಾಗ.
ಧೂಮಪಾನ ಬಿಟ್ಟು ಬಳಿಕ ಮತ್ತು ಪರಿಹಾರ
- ಮಲಬದ್ಧತೆ: ನಾರಿನಂಶದ ಆಹಾರ, ಹಸಿ ತರಕಾರಿ, ಹಣ್ಣು, ನೀರಿನ ಯಥೇಚ್ಛ ಸೇವನೆ.
- ಚಡಪಡಿಕೆ: ಧೂಮಪಾನ ಉತ್ತೇಸುವ ವಾತಾವರಣ ಹೊರಬನ್ನಿ.
- ದೀರ್ಘ ಉಸಿರಾಟ, ಆಳ ಉಸಿರಾಟ.
- ಕಣ್ಣು ಮುಚ್ಚಿ 1-10ರ ಎಣಿಕೆ ಮಾಡಿ.
- ತಲೆನೋವು: ಮಸಾಜ್, ಬೆಚ್ಚಗಿನ ನೀರಿನ ಸ್ನಾನ, ವಿಶ್ರಾಂತಿ, ಶಾಂತ ವಾತಾವರಣದಲ್ಲಿರಿ. ಚಿಕ್ಕ ನಡಿಗೆ, ವಾಕಿಂಗ್.
- ತೀವ್ರ ಉತ್ಕೇಟೇಚ್ಛೆ: 3-5 ನಿಮಿಷ ತಡೆದುಕೊಳ್ಳಿ, ಚಟ ನಿಲ್ಲುತ್ತದೆ. ಆ ಸಮಯದಲ್ಲಿ ಬಾಯಲ್ಲಿ ಚಾಕಲೇಟ್, ಚೂಯಿಂಗ್ ಗಮ್, ಏಲಕ್ಕಿ, ಸೋಂಪು ಇರಲಿ.
- ಸುಸ್ತು, ಬೇಜಾರು: ಸುಡೋಕು, ಪದಬಂಧ ಆಡಿರಿ, ಸಿನಿಮಾ ನೋಡಿ, ಹಗಲಿನ ಕಿರುನಿದ್ದೆ, ಹೊರ ಸಂಚಾರ, ಪ್ರವಾಸ.
- ನಿದ್ದೆ ಮಂಪರು: ಹಗಲಿನ ತೀವ್ರ ನಿದ್ದೆ ಬೇಡ. ಉತ್ಸಾಹ ಜೀವನ ಶೈಲಿ, ಹೊರ ಓಡಾಟ, ಸುಮ್ಮನೆ ಸಂಚಾರ, ಪ್ರವಾಸ.
ಮನೋವಿಕಾಸಕ್ಕೆ ಸಲಹೆಗಳು
- ನಿಮ್ಮ ದುಶ್ಚಟಗಳಿಂದ ಎಷ್ಟು ಲಾಭ, ನಷ್ಟ ನೀವೇ ತಿಳಿಯಿರಿ.
- ಧನಾತ್ಮಕ ಭಾವನೆಯಿಂದ ಎಲ್ಲವೂ ಸರಾಗ.
- ನಿಮ್ಮ ಕಷ್ಟಗಳನ್ನು ಚಟಗಳು ಪರಿಹರಿಸುವುದಿಲ್ಲ.
- ಚಟವನ್ನು ಕಲಿಯುವ ಮುಂಚೆ ನಿಮ್ಮ ಜೀವನ, ಆರೋಗ್ಯ ಭವಿಷ್ಯ, ಮನೆ, ಮಕ್ಕಳು, ಎಲ್ಲವನ್ನೂ ನೆನಪಿನ ಸಾಲಿಗೆ ತನ್ನಿ.
- ದುಶ್ಚಟಗಳಿಂದ ಸಿಗುವ ಖುಷಿ, ನೂರು ದಿನದ ಖುಷಿಯನ್ನು ಕಸಿಯುತ್ತದೆ.
- ಚಟಗಳಿಂದ ಸಮಸ್ಯೆ ಮರೆಯಬಹುದಷ್ಟೇ. ಆದರೆ, ಆರೋಗ್ಯದ ಸಮಸ್ಯೆ ಹೆಚ್ಚುತ್ತದೆ.
- ಕೀಳರಿಮೆ ಬೆಳೆಸಿಕೊಳ್ಳಬೇಡಿ. ಆತ್ಮನಂಬಿಕೆ ಹೆಚ್ಚಿರಲಿ.
- ಮನಸ್ಸಿನ ಗಮನವನ್ನು ಹಿತಕರವಾದ ವಿಚಾರಗಳತ್ತ ಹರಿಸಬೇಕು.
- ಆಗಾಗ ಹೊರ ಪ್ರವಾಸ, ಸಂಚಾರಕ್ಕೆ ಸ್ನೇಹಿತರೊಡನೆ ಹೋಗಿಬನ್ನಿ.
- ಮಾದಕ ವಸ್ತು, ಮದ್ಯ... ಇವು ಕೊಡುವುದು ಸುಖವಲ್ಲ, ಅನಾರೋಗ್ಯ.
- ಡಾ. ಕೆ.ವಿ. ಸಂತೋಷ್