ಹನಿ ಹನಿ ಕಹಾನಿ
ಆರೋಗ್ಯ ಸುಧಾರಣೆಗೆ, ಸೌಂದರ್ಯ ಹೆಚ್ಚಿಸಿಕೊಳ್ಳಲು ಜನರು ಸಾಕಷ್ಟು ಹೆಣಗುತ್ತಾರೆ. ಸಮಯ, ಹಣ ಎಲ್ಲವನ್ನೂ ಸಮುದ್ರದಲ್ಲಿ ಹುಣಸೆ ಹಣ್ಣು ತೊಳೆದಂತೆ ಖರ್ಚು ಮಾಡುತ್ತಾರೆ. ಆದರೆ, ಒಂದು ಜೇನಿನಂಥ ಮಾತನ್ನು ಕೇಳಿಸಿಕೊಳ್ಳಿ. ಸುದೀರ್ಘ ಕಾಲದವರೆಗೂ ಹಾಳಾಗದೆ ಇರುವ ಜೇನು ತುಪ್ಪವನ್ನು ದಾಲ್ಚಿನ್ನಿ ಪುಡಿಯೊಂದಿಗೆ ಬಳಸಿದಲ್ಲಿ ನಮ್ಮ ಆರೋಗ್ಯ ಮತ್ತು ಸೌಂದರ್ಯ ಸುಧಾರಿಸುತ್ತದೆ.
ಬಹಳಷ್ಟು ದೇಶಗಳಲ್ಲಿ ಬಳಕೆಯಲ್ಲಿರುವ, ಯಾವುದೇ ಅಡ್ಡ ಪರಿಣಾಮಗಳನ್ನೂ ಬೀರದ ಜೇನುತುಪ್ಪವನ್ನು ವಿಜ್ಞಾನಿಗಳೂ ಕೆಲವು ರೋಗಗಳಿಗೆ 'ರಾಮ ಬಾಣ' ಎಂದು ಒಪ್ಪಿಕೊಂಡಿದ್ದಾರೆ. ಸಿಹಿಯಾಗಿದ್ದರೂ ಮಧುಮೇಹಿಗಳು ಇದನ್ನು ಬಳಸಿದರೂ ತೊಂದರೆಯಿಲ್ಲ ಎನ್ನುವುದು ಮತ್ತೊಂದು ವಿಶೇಷ.
ಹೃದ್ರೋಗಗಳಿಗೆ
ಜೇನು ಮತ್ತು ದಾಲ್ಚಿನ್ನಿ ಪುಡಿಯನ್ನು ಮಿಶ್ರಣ ಮಾಡಿ, ಬ್ರೆಡ್ ಮತ್ತು ಜಾಮ್ನೊಂದಿಗೆ ಉಪಾಹಾರವಾಗಿ ಪ್ರತಿದಿನ ಸೇವಿಸುವುದರಿಂದ ಅಪಧಮನಿಗಳಲ್ಲಿರುವ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಹೃದ್ರೋಗವಿರುವವರೂ ಇದರ ಸೇವನೆಯಿಂದ ಉಸಿರಾಟ ಮತ್ತು ಎದೆಬಡಿತವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು. ಅಮೆರಿಕ, ಕೆನಡಾ ಸೇರಿದಂತೆ ವಿವಿಧ ದೇಶಗಳಲ್ಲಿ ಈ ಔಷಧವನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ.
ಸಂಧಿವಾತವೇ?
ಎರಡು ಚಮಚ ಜೇನು ಮತ್ತು ಒಂದು ಚಮಚ ದಾಲ್ಚಿನ್ನಿಯನ್ನು ಒಂದು ಲೋಟ ಬಿಸಿನೀರಿನೊಂದಿಗೆ ಸೇರಿಸಿ ಪ್ರತಿದಿನ (ಬೆಳಗ್ಗೆ ಮತ್ತು ಸಂಜೆ) ಸೇವಿಸುವುದರಿಂದ ದೀರ್ಘಕಾಲದ ಸಂಧಿವಾತಕ್ಕೆ ಪರಿಹಾರ ಕಂಡುಕೊಳ್ಳಬಹುದು. ಈ ಔಷಧಿ ಪ್ರಯೋಗಿಸಿದ 200ರಲ್ಲಿ 73 ಮಂದಿ ರೋಗದಿಂದ ಸಂಪೂರ್ಣವಾಗಿ ಗುಣಮುಖವಾಗಿದ್ದಾರೆ ಎನ್ನುತ್ತವೆ ಪ್ರಯೋಗಗಳು.
ಮೂತ್ರಕೋಶ ಸೋಂಕಿಗೆ
ಎರಡು ಚಮಚ ದಾಲ್ಚಿನ್ನಿ ಮತ್ತು ಒಂದು ಚಮಚ ಜೇನಿನೊಂದಿಗೆ ಸೇವಿಸಿದರೆ ಮೂತ್ರಕೋಶದಲ್ಲಿನ ಸೂಕ್ಷಾಣುಗಳನ್ನು ನಾಶವಾಗುತ್ತದೆ.
ಕೊಬ್ಬಿಗೂ ಮದ್ದು
ಎರಡು ಚಮಚ ಜೇನು ಮತ್ತು ಮೂರು ಚಮಚ ದಾಲ್ಚಿನ್ನಿಯನ್ನು ಮಿಶ್ರಣ ಮಾಡಿ 16 ಔನ್ಸ್ ಟೀ ವಾಟರ್ನೊಂದಿಗೆ ತೆಗೆದುಕೊಂಡರೆ ಎರಡು ಗಂಟೆ ಅವಧಿಯಲ್ಲಿ ರಕ್ತದಲ್ಲಿರುವ ಶೇ.10ರಷ್ಟು ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಅಲ್ಲದೆ ಶುದ್ಧ ಜೇನಿನೊಂದಿಗೆ ಪ್ರತಿದಿನ ಊಟದಲ್ಲಿ ಬಳಸುವುದರಿಂದ ದೇಹದಲ್ಲಿ ಕೊಬ್ಬಿನಂಶ ಹೆಚ್ಚುವುದಿಲ್ಲ.
ಕೆಮ್ಮು, ಶೀತ ಓಡಿಸಿ
ಶೀತದಿಂದ ಬಳಲುವವರು ಒಂದು ಚಮಚ ಜೇನು ತುಪ್ಪದೊಂದಿಗೆ ತುಸು ದಾಲ್ಚಿನ್ನಿ ಬೆರೆಸಿ ಮೂರು ದಿನಗಳು ತೆಗೆದುಕೊಂಡರೆ ಕೆಮ್ಮು, ಶೀತಕ್ಕೆ ರಾಮಬಾಣ. ಗಂಟಲಲ್ಲಿ ಕಿಚ್ ಕಿಚ್ಚಾ? ಪ್ರತಿ ಮೂರು ಗಂಟೆಗಳಿಗೊಮ್ಮೆ ಜೇನು ತುಪ್ಪವನ್ನು ಸೇವಿಸಿದರೆ ಸಮಸ್ಯೆಗೆ ಪರಿಹಾರವಾಗುತ್ತದೆ. ಉಸಿರಾಟದ ತೊಂದರೆಯನ್ನೂ ಇದು ನಿವಾರಿಸುತ್ತದೆ.
ಹೊಟ್ಟೆ ನೋವಿದ್ಯಾ?
ಭಾರತ ಮತ್ತು ಜಪಾನಿನ ಸಂಶೋಧನೆಗಳ ಪ್ರಕಾರ ಗ್ಯಾಸ್ ಸಮಸ್ಯೆಯಿದ್ದರೆ, ಹೊಟ್ಟೆ ಇರಿಸು ಮುರಿಸು ಆಗುತ್ತಿದ್ದರೆ ದಾಲ್ಚಿನ್ನಿ ಬೆರೆಸಿ ಜೇನಿನೊಂದಿಗೆ ಸೇವಿಸಿ. ಊಟಕ್ಕಿಂತ ಮೊದಲು ಎರಡು ಚಮಚಕ್ಕೆ ದಾಲ್ಚಿನ್ನಿ ಪುಡಿ ಬೆರೆಸಿ ಸೇರಿಸಿದರೆ ಆ್ಯಸಿಡಿಟಿ ಹಾಗೂ ಅಜೀರ್ಣ ಸಮಸ್ಯೆಯೂ ನಿಯಂತ್ರಣಕ್ಕೆ ಬರುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆ
ಜೇನಿನಲ್ಲಿ ವಿವಿಧ ಜೀವಸತ್ವಗಳು ಹಾಗೂ ಕಬ್ಬಿಣಾಂಶಗಳಿವೆ. ಇದನ್ನು ಪ್ರತಿದಿನ ದಾಲ್ಚಿನ್ನಿಯೊಂದಿಗೆ ಬಳಸಿದಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಶಕ್ತಿಯುತವಾಗುತ್ತದೆ. ಅಲ್ಲದೆ ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನೂ ಓಡಿಸುತ್ತದೆ.
ಮೊಡವೆ ಮಾಯ
ಪ್ರತಿದಿನ ಮಲಗುವ ಮುನ್ನ ಮುಖಕ್ಕೆ ಜೇನು ಮತ್ತು ದಾಲ್ಚಿನ್ನಿ ಪುಡಿಯನ್ನು ಪೇಸ್ಟ್ ಮಾಡಿ ಹಚ್ಚಿಕೊಳ್ಳಿ. ಬೆಳಗ್ಗೆ ಬಿಸಿನೀರಿನಿಂದ ತೊಳೆದರೆ 2-3 ವಾರಗಳಲ್ಲಿ ಮುಖದಲ್ಲಿ ಮೊಡವೆಗಳು ಕಣ್ಮರೆಯಾಗುತ್ತದೆ. ಯಾವ ಫೇರ್ನೆಸ್ ಕ್ರೀಂನಿಂದ ಆಗದ ಚಮತ್ಕಾರ ಈ ಜೇನುತುಪ್ಪ ಮಾಡುತ್ತದೆ ನೋಡಿ.
ತೂಕ ತಗ್ಗಿಸಿಕೊಳ್ಳಿ
ಬೆಳಗ್ಗಿನ ಉಪಾಹಾರಕ್ಕಿಂತ ಅರ್ಧ ಗಂಟೆ ಮುಂಚೆ ಖಾಲಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಮಲಗುವ ಮುನ್ನ ಜೇನು ಮತ್ತು ದಾಲ್ಚಿನ್ನಿ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕಾಯಿಸಿ ಕುಡಿದರೆ ಕ್ರಮೇಣ ತೂಕ ಕಡಿಮೆಯಾಗುತ್ತದೆ. ದೇಹದ ಕೊಬ್ಬೂ ಹೆಚ್ಚಾಗೋಲ್ಲ.
-ಎನ್.ಎಲ್. ಶಿವಮಾದು
shivamadhu2009@gmail.com