ಆರೋಗ್ಯ-ಜೀವನಶೈಲಿ

ಮೆದುಳು ಧೋರಣೆ

ಮೆದುಳು ನರಮಂಡಲದ ಕೇಂದ್ರ ಅಂಗವಾಗಿ ಸೇವೆ ಸಲ್ಲಿಸುತ್ತದೆ. ಮೆದುಳಿನ ಕಾರ್ಯ ದೇಹದ ಇತರೆ ಅಂಗಗಳ...

ಮೆದುಳು ನರಮಂಡಲದ ಕೇಂದ್ರ ಅಂಗವಾಗಿ ಸೇವೆ ಸಲ್ಲಿಸುತ್ತದೆ. ಮೆದುಳಿನ ಕಾರ್ಯ ದೇಹದ ಇತರೆ ಅಂಗಗಳ ಮೇಲೂ ಕೇಂದ್ರೀಕೃತ ಪರಿಣಾಮ ಬೀರುತ್ತದೆ. ದೇಹದ ಪ್ರತಿಯೊಂದು ಅಂಗಗಳ ಕಾರ್ಯಕ್ಷಮತೆಗೆ ಮೆದುಳು ಮುಖ್ಯ. ಮೆದುಳಿನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲೆಂದು ಸಾವಿರಾರು ಜಾಹೀರಾತುಗಳು ಬರುತ್ತಲೇ ಇರುತ್ತವೆ. ಆದರೆ, ಕೆಲವು ಗಿಡ ಮೂಲಿಕೆಗಳು ಹಾಗೂ ಮಸಾಲಾ ಪದಾರ್ಥಗಳೂ ಈ ಅಂಗವನ್ನು ಚುರುಕುಗೊಳಿಸಬಹುದು. ಇವುಗಳ ನಿರಂತರ ಬಳಕೆ ಖಿನ್ನತೆ, ಮಾನಸಿಕ ಆಯಾಸ ಮತ್ತು ಒತ್ತಡವೂ ನಿವಾರಣೆಯಾಗುತ್ತವೆ.
ಗ್ರೀನ್ ಟೀ
ಗ್ರೀನ್ ಟೀ ಒಬ್ಬ ವ್ಯಕ್ತಿಯ ಒಟ್ಟಾರೆ ಆರೋಗ್ಯಕ್ಕೆ ಉತ್ತಮ. ಇದರಲ್ಲಿರುವ ಹೆಚ್ಚು ಪ್ರಮಾಣದ ಆ್ಯಂಟಿಅಕ್ಸಿಡೆಂಟ್‌ಗಳು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ದೇಹದ ಪ್ರೊಟೀನ್ ಮತ್ತು ಮೆದಸ್ಸನ್ನು ರಕ್ಷಿಸುತ್ತದೆ. ಮೆದುಳಿನ ನರಗಳ ಅಕಾಲಿಕ ಮುಪ್ಪಿನ ತಡೆಗೂ ಸಹಕಾರಿ. ದಿನಕ್ಕೆ 2-3 ಕಪ್ ಟೀ ಕುಡಿದರೆ ಮೆದುಳು ಚುರುಕಾಗುತ್ತದೆ.
ಅರಿಶಿನ
ಅರಿಶಿನ ಅಡುಗೆಗೆ ಉತ್ತಮ ಬಣ್ಣ ನೀಡಿ, ರುಚಿ ಹೆಚ್ಚಿಸುವ ಜೊತೆಗೆ ಮೆದುಳನ್ನು ಸಂತೋಷವಾಗಿಡಲೂ ನೆರವಾಗುತ್ತದೆ. ಇದರಲ್ಲಿರುವ ಕರ್ಕ್ಯುಮಿನ್ ಎಂಬ ರಾಸಾಯನಿಕ ಅಂಶ ಆಲ್ಝೃಮರ್‌ನಂಥ ಕಾಯಿಲೆಯೂ ಬರದಂತೆ ತಡೆಯುತ್ತದೆ. ನೆನಪಿನ ಶಕ್ತಿ ಸುಧಾರಿಸುವುದರೊಂದಿಗೆ, ಖಿನ್ನತೆಯನ್ನು ದೂರ ಮಾಡುತ್ತದೆ. ಮದ್ಯಪಾನದಿಂದ ಮೆದುಳಿಗುಂಟಾದ ಹಾನಿಯ ಚಿಕ್ಸಿತೆಗೂ ಇದು ಸಹಕಾರಿ.
ಓರೆಗಾನೊ
ಹೆಚ್ಚು ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿರುವ ಈ ಗಿಡ ಮೂಲಿಕೆ ಅಡುಗೆಗೆ ಸ್ವಾದಿಷ್ಟ ರುಚಿ ನೀಡುವ ಜೊತೆಗೆ, ದೇಹದಲ್ಲಿರುವ ಫ್ರೀರಾಡಿಕಲ್‌ಗಳನ್ನು ನಾಶ ಮಾಡುತ್ತದೆ. ಓರೆಗಾನೊನ ಔಷಧಿ ಅಂಶಗಳು ಕೇವಲ ಮಾನಸಿಕ ಆರೋಗ್ಯವನ್ನಷ್ಟೇ ವೃದ್ಧಿಸುವುದಿಲ್ಲ, ಖಿನ್ನತೆಯನ್ನೂ ಕಡಿಮೆ ಮಾಡಿ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇದನ್ನು ಸುಗಂಧ ಚಿಕಿತ್ಸೆಯಲ್ಲಿ ನರಗಳನ್ನು ಶಾಂತಗೊಳಿಸಲು ಬಳಸಲಾಗುತ್ತದೆ.
ಕರಿಮೆಣಸು
ಪಿಪರೈನ್ ಎಂಬ ರಾಸಾಯನಿಕ ಅಂಶ ಬೀಟಾ ಎಂಡಾರ್ಪಿನ್‌ಗಳನ್ನು ಉದ್ದೀಪನಗೊಳಿಸಿ, ನಮ್ಮ ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ದೇಹ ಮತ್ತು ಮನಸ್ಸನ್ನು ಸಡಿಲಿಸಲೂ ಸಹಕರಿಸುತ್ತದೆ. ಕರಿಮೆಣಸನ್ನು ಮಾನಸಿಕ ಅಸ್ವಸ್ಥತೆಯನ್ನೂ ಗುಣಪಡಿಸಲೂ ಬಳಸಲಾಗುತ್ತದೆ.
ಗಿನ್‌ಸೆಂಗ್
ಇದು ಚೀನಾ, ನೇಪಾಳ, ಕೆನಡಾ, ಉತ್ತರ ಅಮೆರಿಕಗಳಲ್ಲಿ ಬೆಳೆಯುವ ಒಂದು ಔಷಧೀಯ ಸಸ್ಯದ ಬೇರು. ಮಾನಸಿಕ ದುರ್ಬಲತೆಗೆ ಚಿಕಿತ್ಸೆ ನೀಡಲು ಬಳಸಬಹುದು. ಇದನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಿದಲ್ಲಿ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.
ದಾಲ್ಚಿನ್ನಿ
ಆಲ್ಝೃಮರ್ ಮಾನಸಿಕ ಅಸ್ವಸ್ಥತೆ ಮತ್ತು ಬುದ್ಧಿಮಾಂದ್ಯತೆಯ ಅತ್ಯಂತ ಸಾಮಾನ್ಯ ರೂಪ. ಆದರೆ ಈ ಕಾಯಿಲೆಗೆ ಯಾವುದೇ ಪೂರ್ಣ ಯಶಸ್ವಿ ಚಿಕಿತ್ಸೆಯೂ ಇಲ್ಲ. ತಡೆಗಟ್ಟುವಿಕೆ ಮಾತ್ರ ಏಕೃಕ ಮಾರ್ಗ. ದಾಲ್ಚಿನ್ನಿಯಲ್ಲಿರುವ ಅಂಶಗಳು ಈ ಕಾಯಿಲೆಯನ್ನು ದೂರವಿಡುತ್ತದೆ. ಇದು ಅಗತ್ಯ ಪ್ರೊಟೀನ್‌ಗಳನ್ನು ಸಕ್ರಿಯಗೊಳಿಸಿ, ಸೂಕ್ಷ್ಮನಾಲಗೆಗಳ ಸ್ಥಿರೀಕರಣಕ್ಕೆ ಸಹಕರಿಸುತ್ತದೆ. ಮೆದುಳಿನ ಆರೋಗ್ಯ ಕಾಪಾಡುವುದರೊಂದಿಗೆ ಇದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಜಾಯಿಪತ್ರೆ
ಇದರಲ್ಲಿರುವ ಮೈರೆಸ್ಟನ್ ಎಂಬ ಒಂದಂಶ ಮೆದುಳಿನ ಶಕ್ತಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸಿ, ಆಯಾಸ ಹಾಗೂ ಒತ್ತಡವನ್ನು ತಗ್ಗಿಸುತ್ತದೆ.
ತುಳಸಿ
ಔಷಧಿಗಳ ಆಗರವೆಂದೇ ತುಳಸಿಯನ್ನು ಮನೆ ಮುಂದೆ ನೆಡುವುದು. ಇದರಲ್ಲಿರುವ ಮೆಥಾನಲ್ ಮೆದುಳಿಗಾದ ಎಲ್ಲ ಹಾನಿಗಳನ್ನೂ ಕಡಿಮೆ ಮಾಡುತ್ತದೆ. ಸುಗಂಧ ಚಿಕಿತ್ಸೆಯಲ್ಲಿ ಬಳಸುವ ಇದರ ತೈಲ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಕೇಸರಿ
ಖಿನ್ನತೆ ಶಮನಕ್ಕೆ ಮಾತ್ರೆಗಳಿಗಿಂತ ಕೇಸರಿ ಹೆಚ್ಚು ಪ್ರಭಾವಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಮೆದುಳನ್ನು ತೀಕ್ಷ್ಣವಾಗಿಟ್ಟು, ಮೆದುಳನ್ನು ಚುರುಕುಗೊಳಿಸುತ್ತದೆ.

- ರಶ್ಮಿ ಕಾರ್ಗಲ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ