ಆರೋಗ್ಯ-ಜೀವನಶೈಲಿ

ಮೈ ಮಾಟಕ್ಕೆ ಜಲಮಾರ್ಗ

ಮೊನ್ನೆ ಡೈರೆಕ್ಟರ್ ಒಬ್ರು ತಮ್ಮ ಮುಂದಿನ ಸೀರಿಯಲ್ ಆಡಿಶನ್‌ಗೆ ಬಂದ ಫೋಟೋಗಳನ್ನು ತೋರಿಸ್ತಾ ಹೇಳಿದ್ದು..

ಮೊನ್ನೆ ಡೈರೆಕ್ಟರ್ ಒಬ್ರು ತಮ್ಮ ಮುಂದಿನ ಸೀರಿಯಲ್ ಆಡಿಶನ್‌ಗೆ ಬಂದ ಫೋಟೋಗಳನ್ನು ತೋರಿಸ್ತಾ ಹೇಳಿದ್ದು; ಎಲ್ಲರಿಗೂ ತಮ್ಮ ಯೋಗ್ಯತೆ ಗೊತ್ತಿರುತ್ತೆ. ಆದ್ರೆ ತಾನು ಹೀರೋ ಆಗಬೇಕು. ತಾನು ಹೀರೋಯಿನ್ ಆಗ್ಬೇಕು ಅನ್ನೋ ಆಸೆ ಎಲ್ರಿಗೂ. ಇಂಥವ್ರನ್ನೆಲ್ಲ ಹಾಕಿ ಶೂಟ್ ಮಾಡಿದ್ರೆ, ಟೆಲಿಕಾಸ್ಟ್ ಅಲ್ಲ, ಮಾಡಿದ ತಪ್ಪಿಗೆ ಮನೆ ಟಿವಿಯಲ್ಲಿ ಡಿವಿಡಿ ಹಾಕ್ಕೊಂಡು ನೋಡ್ಬೇಕಷ್ಟೇ... ಇಂಥ ಮಾತುಗಳು ಸಾಮಾನ್ಯ. ಯಾಕೆಂದರೆ, ನಾವು ಸ್ಲಿಮ್ ಆದ್ರೆ ಈ ಜಗತ್ತು ನಮ್ಮನ್ನ ಸ್ಮಾರ್ಟ್ ಎಂದು ಭಾವಿಸುತ್ತದೆ.
ಸ್ಲಿಮ್ ಮತ್ತು ಫಿಟ್ ಆಗುವುದಕ್ಕೆ ಈಗಿನ ಹುಡುಗ- ಹುಡುಗಿಯರು ನಡೆಸುವ ಕಸರತ್ತು ಒಂದೆರಡಲ್ಲ. ಆದರೆ, ನೀರಾಟದಿಂದ ನಿಮ್ಮ ಮೈಮಾಟ ಹದಗೊಳ್ಳುತ್ತದೆಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ದೇಹದ ಆಕಾರ, ವಿಕಾರ ತಿದ್ದಿ ತೀಡಲು ನೀರಾಟವೇ ಮದ್ದು ಅಂತಾರೆ ಅಮೆರಿಕದ ಜಲವ್ಯಾಯಾಮ ತಜ್ಞೆ ಕ್ರಿಸ್ತಿಯಾನಾ ಪಿಪೋಲಿ. ಆಕ್ವಾ ಎರೋಬಿಕ್ಸ್‌ನಿಂದ ದೇಹಸ್ಥಿತಿಯನ್ನು ಉತ್ತಮಗೊಳಿಸುವುದಲ್ಲದೆ, ಸಾಕಷ್ಟು ಕಾಯಿಲೆಗಳೂ ಹತ್ತಿರ ಸುಳಿಯದಂತೆ ತಡೆಯಬಹುದು ಎಂಬುದು ಅವರ ಅಭಿಪ್ರಾಯ.
ಕ್ರಾಸ್ ಕಂಟ್ರೀ ಸ್ಕೈ, ಬ್ಯಾಕ್ ಕರ್ಲ್, ನೀಸ್, ಎಲ್ಬೋ ಟ್ವಿಸ್ಟ್ ಮುಂತಾದ ನೀರಿನಲ್ಲಿ ಮಾಡಬಹುದಾದ ವ್ಯಾಯಾಮಗಳಿಂದ ಸ್ನಾಯುಗಳು ಶಕ್ತಿ ಪಡೆಯುತ್ತವೆ. ಬೊಜ್ಜು, ಭಾರ ಎರಡೂ ಕಳೆದು ದೇಹ ಹೊಸ ತಾಜಾತನದಿಂದ ಕೂಡಿರುತ್ತದೆ. ಮಾಮೂಲಿ ಎರೋಬಿಕ್ಸ್‌ಗಿಂತ ಈ ವ್ಯಾಯಾಮ ಪರಿಣಾಮಕಾರಿ ಎಂಬುದು ಕ್ರಿಸ್ತಿಯಾನಾರ ಅನುಭವಾಮೃತ. ಈ ವ್ಯಾಯಾಮದ ಇನ್ನೊಂದು ಲಾಭ ಏನ್ ಗೊತ್ತಾ? ಇಲ್ಲಿ ಗಾಯಗಳಾಗೋದು ಕಡಿಮೆ. ಯಾವುದೇ ವಯಸ್ಸಿನವರೂ ಪಾಲ್ಗೊಳ್ಳಬಹುದು. ನೀರೊಳಗೆ ಆಡುತ್ತ ಮಾಡುವ ವ್ಯಾಯಾಮ ನೀಡುವ ಖುಷಿ ಕಾಸು ಕೊಟ್ಟರೂ ಮತ್ತೆಲ್ಲೂ ಸಿಗಲಿಕ್ಕಿಲ್ಲ ಎಂಬುದು ಅವರೇ ಬರೆದಿಟ್ಟ ಟಿಪ್ಪಣಿ.



ಯಾವ ಯಾವ ನೀರಾಟ?
ಕ್ರಾಸ್ ಕಂಟ್ರೀ ಸ್ಕೈ: ಇದು ಹೃದಯ ಮತ್ತು ಕೈ ಕಾಲುಗಳ ಸ್ನಾಯುಗಳ ಆರೋಗ್ಯಕ್ಕೆ ಸಹಕಾರಿ.
ಬ್ಯಾಕ್ ಕರ್ಲ್: ಬೆನ್ನು ಹುರಿ, ಸೊಂಟಕ್ಕೆ ಉತ್ತಮ ವ್ಯಾಯಾಮ.
ಸೈಡ್‌ಲೆಗ್ ಲೆಫ್ಟ್:  ಕಾಲುಗಳ ಆರೋಗ್ಯಕ್ಕೆ ಸಹಕಾರಿ.
ಫ್ರಾಗ್ ಲಿಫ್ಟ್: ದೇಹದೊಳಗಿನ ಭಾಗಗಳಿಗೆ ಪ್ರಯೋಜನಕಾರಿ. ನೀರಿನಲ್ಲಿ ಮಾತ್ರ ಮಾಡಲು ಸಾಧ್ಯವಾಗುವ ವ್ಯಾಯಾಮ ಇದು.
ಎಲ್ಬೋ ಟ್ವಿಸ್ಟ್: ಸೊಂಟ ಹಾಗೂ ಗಂಟುಗಳನ್ನು ಬಲಪಡಿಸುತ್ತದೆ.

- ನಾಗರಾಜ ವೈದ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video