ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಥೈರಾಯ್ಡ್ ಬಾಲ್ಡ್

Vishwanath S
Updated On : 13 Jun 2014, 2:10 am

ಕಳೆದ ಒಂದೂವರೆ ದಶಕದಿಂದ ಥೈರಾಯ್ಡ್ ಅಸಮತೋಲನದ ಸಮಸ್ಯೆ ಹೆಚ್ಚಾಗುತ್ತಿದೆ. ಶರೀರದ ಚಯಾಪಚಯ ಕ್ರಿಯೆಯ ನಿರ್ವಹಣೆಯಲ್ಲಿ ಥೈರಾಯ್ಡ್‌ಗಳು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಹೀಗಾಗಿ ಥೈರಾಯ್ಡ್ ಅಸಮತೋಲನ ಕಂಡುಬಂದಲ್ಲಿ ಖಿನ್ನತೆ, ಕೂದಲಿನ ಬದಲಾವಣೆ, ಒಣ ಚರ್ಮ, ಒರಟಾಗುವಿಕೆ ಹಾಗೂ ಮಾಂಸ ಖಂಡಗಳಲ್ಲಿನ ಶಕ್ತಿ ಹೀನತೆ ಮೊದಲಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿಯೂ ಥೈರಾಯ್ಡ್ ಸಮಸ್ಯೆ ಎದುರಿಸುತ್ತಿರುವ ರೋಗಿಗಳಲ್ಲಿ ಕೂದಲಿನ ಸಮಸ್ಯೆಯೇ ಹೆಚ್ಚು.
ಬೊಕ್ಕತನ ಮತ್ತು ಟೆಲೊಗಾನ್
ಥೈರಾಯ್‌ಡ್ ಅಸಮತೋಲನದಿಂದಾಗಿ ಎರಡು ರೀತಿಯಲ್ಲಿ ಕೂದಲುದುರುವಿಕೆಯಾಗುತ್ತದೆ. ಅದರಲ್ಲಿ ಮೊದಲನೆಯದು ಅತ್ಯಂತ ಪರಿಣಾಮಕಾರಿಯಾದುದ್ದಾದರೂ ಕೆಲವೇ ಕಾಲ ಉಳಿಯುವಂತದ್ದು. ಇದನ್ನು ಟೆಲೊಗಾನ್ ಎಫ್ಲುವಿಮ್ ಎಂದು ಕರೆಯಲಾಗುತ್ತದೆ. ಮತ್ತೊಂದು ಸಾಮಾನ್ಯ ರೀತಿಯ ಬೊಕ್ಕತನ. ಟೆಲೊಗಾನ್ನಲ್ಲಿ ಥೈರಾಯ್‌ಡ್ಸ್‌ಮಸ್ಯೆಗೆ ಚಿಕಿತ್ಸೆ ನೀಡಿದ ಬಳಿಕ ಕೂದಲುದುರುವಿಕೆಯನ್ನು ನಿಯಂತ್ರಣಕ್ಕೆ ತರಬಹುದಾಗಿದೆ. ಆದರೆ, ಈ ವಿಧಾನಕ್ಕೆ ಪ್ರತ್ಯೇಕ ರೀತಿಯ  ಕೂದಲಿನ ಚಿಕಿತ್ಸೆ ಪಡೆದುಕೊಳ್ಳುಬೇಕಾಗುತ್ತದೆ.
ಮತ್ತೊಂದೆಡೆ ಸಾಮಾನ್ಯ ರೀತಿಯ ಬೊಕ್ಕತಲೆ ಸಮಸ್ಯೆಯು ಥೈರಾಯ್ಡ್ ಸಮಸ್ಯೆಯಿಂದಲೇ ಆರಂಭವಾಗುತ್ತದೆ. ಆದರೆ, ಥೈರಾಯ್ಡ್ ಸಮಸ್ಯೆಯಿಂದ ಪರಿಹಾರ ಕಂಡುಕೊಂಡರೂ ಕೂದಲುದುರುವಿಕೆ ಮಾತ್ರ ನಿಲ್ಲುವುದಿಲ್ಲ. ಕಿಣ್ವಗಳಲ್ಲಿ ಟೆಸ್ಟ್ರೋನ್ ಹಾರ್ಮೊನ್‌ಗಳ ಉತ್ಪಾದನೆ ಆರಂಭವಾದಾಗ ತಲೆ ಭಾಗದಲ್ಲಿ ಪರಿಣಾಮ ಬೀರಿ ಡಿಹೈಡ್ರೋಟೆಸ್ಟೋಸ್ಟೆರೋನ್(ಡಿಎಚಿಟಿ) ಉತ್ಪತ್ತಿಯಿಂದಾಗಿ ಈ ಸಮಸ್ಯೆ ಶುರುವಾಗುತ್ತದೆ. ಸಾಮಾನ್ಯವಾಗಿ ಹೈಪರ್ ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಈ ರೀತಿಯ ಬೊಕ್ಕತಲೆ ಸಮಸ್ಯೆ ಕಾಡುತ್ತದೆ. ಸಾಮಾನ್ಯ ರೀತಿಯಲ್ಲಿ ಕಾಣಿಸಿಕೊಳ್ಳುವ ಬೊಕ್ಕತಲೆ ಸಮಸ್ಯೆಯಲ್ಲಿ ಕೂದಲು ನಿಧನವಾಗಿ ತೆಳುವಾಗುವ ಮೂಲಕ ತಲೆಯ ಎರಡೂ ಬದಿ ಹಾಗೂ ಹಿಂಬದಿಯಲ್ಲಿ ಕೂದಲುಗಳು ಉದುರಿ ಹೋಗುತ್ತವೆ. ಇಂಥ ಸಮಸ್ಯೆಗಳಿಗೆ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರಿಂದ ಮತ್ತಷ್ಟು ಕೂದಲು ಉದುರುವಿಕೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ನಿರ್ಲಕ್ಷ್ಯ ತೋರಿದರೆ ಸಂಪೂರ್ಣ ಕೂದಲನ್ನು ಕಳೆದು ಕೊಳ್ಳುವಂತಾಗುತ್ತದೆ ಹುಷಾರ್!
ಪುರುಷರಲ್ಲೇ ಹೆಚ್ಚು
ಬೊಕ್ಕತಲೆ ಸಮಸ್ಯೆಯು ಸಾಮಾನ್ಯವಾಗಿ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದನ್ನು ಸಾಮಾನ್ಯವಾಗಿ ಪುರುಷ ಬೊಕ್ಕತಲೆ ಸಮಸ್ಯೆ ಎಂದೇ ಕರೆಯಲಾಗುತ್ತದೆ. ಅಂದ ಹಾಗೆ ಮಹಿಳೆಯರಲ್ಲಿಯೂ ಈ ರೀತಿಯ ಬೊಕ್ಕತಲೆ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ವಂಶವಾಹಿಯಾಗಿಯೂ ಈ ರೀತಿಯ ಸಮಸ್ಯೆಗಳು ಕಾಡುತ್ತವೆ. ಇನ್ನು ಕೆಲ ಪ್ರಕರಣಗಳಲ್ಲಿ ಥೈರಾಯ್ಡ್ ಸಮಸ್ಯೆಗಳ ಸಲುವಾಗಿ ದೀರ್ಘ ಕಾಲದಿಂದ ಔಷಧಗಳನ್ನು ಪಡೆದುಕೊಳ್ಳುತ್ತಿರುವುದರಿಂದಲೂ ಕೂಲು ಉದುರುವಿಕೆ ಕಂಡು ಬಂದಿದೆ. ಲೆಮೊಥೈರಾಕ್ಸಿನ್ ಔಷಧವನ್ನು ಸಾಮಾನ್ಯವಾಗಿ ಹೈಪೋಥೈರಾಯ್ಡ್ ಸಮಸ್ಯೆಗಳಿಗೆ ನೀಡಲಾಗುತ್ತದೆ. ಈ ರೀತಿಯ ಔಷಧಗಳಿಂದಲೂ ಕೂದಲುದುರುವಿಕೆ ಆರಂಭವಾಗುತ್ತದೆ.
ಪೋಷಕಾಂಶ ಕೊರತೆ ಕಾರಣ
ಥೈರಾಯ್ಡ್ ಸಮಸ್ಯೆ ಎದುರಿಸುತ್ತಿರುವ ಕೆಲವರಲ್ಲಿ ಕಬ್ಬಿಣದ ಅಂಶ ಪ್ರೊಟಿನ್, ಜಿಂಕ್ ಹಾಗೂ ವಿಟಮಿನ್ ಬಿನಂಥ ಮೊದಲಾದ ಪೋಶಕಾಂಶಗಳ ಕೊರತೆ ಕಂಡು ಬರುತ್ತದೆ. ಹೀಗಾಗಿ ಕೂದಲಿನ ಸಮಸ್ಯೆಗೆ ಚಿಕಿತ್ಸೆ ನೀಡುವ ಟ್ರೈಕೊಲಾಜಿಸ್ಟ್ ಅವರು, ಈ ರೀತಿಯ ಪೋಷಕಾಂಶಗಳ ಕೊರತೆ ಎದುರಿಸುತ್ತಿದ್ದಾರೆಯೇ ಎಂಬುದನ್ನು ತಿಳಿಯಲು ಕೆಲ ಪರೀಕ್ಷೆಗಳನ್ನು ಮಾಡಲು ತಿಳಿಸುತ್ತಾರೆ. ಈ ಮೂಲಕ ನಿಮ್ಮಲ್ಲಿನ ಸಮಸ್ಯೆ ಕುರಿತಾಗಿ ಸ್ಪಷ್ಟ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ ಕಬ್ಬಿಣದ ಅಂಶದ ಕೊರತೆ ಹೆಚ್ಚು. ಇದನ್ನು ಸರಿಪಡಿಸಲು ವಿಟಮಿನ್ ಸಿ ಹಾಗೂ ಕಬ್ಬಿಣದ ಅಂಶವಿರುವ ಆಹಾರ ಪದಾರ್ಥ ಹೆಚ್ಚಾಗಿ ಸೇವಿಸಬೇಕು. ತೂಕ ಇಳಿಸಿಕೊಳ್ಳಲು ಚಿಕಿತ್ಸೆ ಪಡೆದುಕೊಳ್ಳುತ್ತಿರುವವರಲ್ಲಿ ಹಾಗೂ ತೂಕ ಇಳಿಸಲು ಶರೀರವನ್ನು ಹೆಚಾಗಿ ದಂಡಿಸುತ್ತಿರುವವರಲ್ಲಿ ಪ್ರೊಟೀನ್ ಅಂಶದ ಕೊರತೆ ಹೆಚ್ಚು. ವಿಟಮಿನ್ ಬಿ ಹಾಗೂ ಜಿಂಕ್ ಅಂಶ ಹೊಂದಿರುವ ಆಹಾರ ಪದಾರ್ಥ ಸೇವಿಸಬೇಕು.
ಒತ್ತಡದಿಂದಲೂ ಬೊಕ್ಕತಲೆ ಸಮಸ್ಯೆ ಎದುರಾಗುತ್ತದೆ. ಅದರಲ್ಲಿಯೂ ಮೊದಲಿಗೆ ಹೆಚ್ಚು ಗಾಢವಾದ ಕೂದಲನ್ನು ಪಡೆದಿದ್ದ ಮಹಿಳೆಯರಿಗೆ ಕೂದಲುದುರುವಿಕೆ ಹೆಚ್ಚಾದಲ್ಲಿ ಮಾನಸಿಕ ಖಿನ್ನತೆಗೊಳಗಾಗುತ್ತಾರೆ. ಆಗ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಹಾಗಾಗಿ ಇಂಥ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಸಲಹೆ ಪಡೆದುಕೊಳ್ಳುವ ಅಗತ್ಯವಿರುತ್ತದೆ.
-ಡಾ. ಶಾಹಿದ್ ಶಂಶೇರ್, ದೂ: 08023568290

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement