ಇದರ ಬಗ್ಗೆ ಹಾಗೆ ಹಾಗೆಲ್ಲಾ ಬಹಿರಂಗವಾಗಿ ಹೇಳುವಂತಿಲ್ಲ ನೋಡಿ. ಆದರೆ ಹೇಳದಿದ್ದರೆ ಗೊತ್ತಾಗುವುದು ಹೇಗೆ? ಕಲಿಸಿಕೊಡದೇ ಬರುವ ವಿದ್ಯೆ ಇದೊಂದೇ ಆದ್ರೂ, ಹೇಳಿ ಕಲಿಸಿದರೆ ಅದರಲ್ಲಿ ಮತ್ತಷ್ಟು ಪರಿಪೂರ್ಣವಾಗಬಹುದು ಅಲ್ವಾ. ತಗೊಳಿ, ಅಗ್ದೀ ರಸಮಯ ಸಲ್ಲಾಪಕ್ಕೆ ಒಂದಿಷ್ಟು ನಾಟೀ ಟಿಪ್ಸು...
- ಸಂಗಾತಿಯನ್ನು ನಿಮ್ಮ ಹಿಡಿತಕ್ಕೆ ಸಿಗುವಂತೆ ಕೆಳಗೆ ಮಲಗಿಸಿ, ಪೂರ್ತಿ ಅವಳ ಮೈ ಆವರಿಸಿ. ದೇಹವನ್ನು ಹಿತವಾಗಿ ಸ್ಪರ್ಶಿಸುತ್ತ, ಚುಂಬಿಸಿ. ಅವಳಲ್ಲಿನ ಭಾವಪ್ರಾಪ್ತಿಯ ತೀವ್ರತೆ ಹಿಂದೆಂದಿಗಿಂತಲೂ ಹೆಚ್ಚಾಗುತ್ತದೆ.
- ಪ್ರಾರಂಭದಲ್ಲಿ ಇಬ್ಬರೂ ಪ್ರತ್ಯೇಕವಾಗಿ ನಿಮ್ಮ ನಿಮ್ಮ ದೇಹವನ್ನು ಮೋಹಿಸಿಕೊಳ್ಳಿ. ಸುಖದ ಪುಸ್ತಕದಲ್ಲಿ ಆವತ್ತಿನದು ಸುವರ್ಣ ಅಧ್ಯಾಯ.
- ಇದು ತುಂಬ್ ತುಂಬಾ ಸ್ವೀಟ್ ಹಾರ್ಟ್ ಉಳ್ಳವರಿಗೆ. ಬೆಡ್‌ರೂಮಿಗೆ ಹೋಗುವಾಗ ಹಾಲು ಹಣ್ಣು ತಾಂಬೂಲಗಳ ಜತೆ ಚಾಕಲೇಟ್, ಸಾಸ್ ಅನ್ನೂ ಒಯ್ದು ಸ್ಪರ್ಶಸುಖಕ್ಕೆ ಲೇಪನದ ರಂಗನ್ನೂ ಸೇರಿಸಿಕೊಳ್ಳಬಹುದು.
- ಸಲ್ಲಾಪಕ್ಕೆ ಬೆಡ್‌ರೂಮೇ ಆಗ್ಬೇಕು ಅಂತ ಯಾವ್ದಾರಾ ರೂಲ್ಸ್ ಇದ್ಯಾ? ಅಡುಗೆ ಮನೆಯನ್ನೂ ಬಳಸಿಕೊಳ್ಳಬಹುದು. ನಿಮಗೆ ಹಿತಾನುಭವ ನೀಡುವ ಸ್ಥಳಗಳಲ್ಲಿ ನಿಮ್ಮದೇ ಲೋಕದಲ್ಲಿ ತೇಲಾಡಬಹುದು.
- ಚೇಂಜ್ ಬೇಕು ಅಂತೀವಲ್ಲಾ, ದೇಹದಾಟವೂ ಬೋರ್ ಅನ್ನಿಸೋ ವಿಪರ್ಯಾಸ ಸಂಭವಿಸೋಕೂ ಮುನ್ನವೇ ಎಚ್ಚೆತ್ತು, ಸ್ವಲ್ಪ ಕ್ರಿಯೇಟಿವ್ ಆಗಿ ಇಬ್ಬರೂ ಯೋಚಿಸಬಹುದು. ಮೇಲು- ಕೆಳಗುಗಳ ಹಂಗು ತೊರೆದು ಹೊಸತಾವುದೋ ಆಸನವನ್ನು ಕಂಡು ಹಿಡಿದು ವಾತ್ಸಾಯನನಿಗೆ ಪತ್ರ ಬರೆಯಬಹುದು!
- ಕಾಮಕ್ಕೂ ಮನಸ್ಸಿನ ಒತ್ತಡಕ್ಕೂ ಆಗಿ ಬರೋದಿಲ್ಲ. ಹಾಗಾಗಿ ಪರಸ್ಪರ ಇಬ್ಬರೂ ಆತ್ಮೀಯವಾಗಿ, ಮನಸಾರೆ ಬೆರೆತಷ್ಟೂ ಒಳ್ಳೆಯದು. ಸೇರುವುದಕ್ಕೂ ಮುನ್ನ ಒಂದಿಷ್ಟು ಲೈಕು, ಕಮೆಂಟುಗಳ ವಿನಿಮಯವಾದರೆ ನೆಕ್ಸ್ಟ್ ಸ್ಟಾಪಿನಲ್ಲೇ ಖುಷಿ ನಿಮ್ಮ ಕೈ ಹಿಡಿಯಬಹುದು.
- ಎಣಿಸಿಕೊಂಡಂತೆ ಇದು ಬರೆ ದೇಹದಾಟವಷ್ಟೇ ಅಲ್ಲ. ಸೌಂದರ್ಯ ಸಮರವೂ ಹೌದು. ನೀಟ್ ಅನ್ನಿಸುವಂತೆ ಇಬ್ಬರೂ ಇದ್ದಷ್ಟೂ ಗಾಢ ನಂಟು ನಿಮ್ಮದಾಗುತ್ತದೆ. ದೇಹಕ್ಕಿಂತ ಮೊದಲು ಹಾಗೂ ಮಿಗಿಲು ಮನಸುಗಳು ಬೆರೆಯುವುದು. ಸೋ, ಇಬ್ಬರ ಗಮನವೂ ಮನಸಿನೆಡೆಗಿರುವುದೊಳಿತು.
- ಈ ಸಲಹೆ, ಪುರುಷರಿಗೆ ಮಾತ್ರ. ಅವಳ ಕತ್ತು, ಕತ್ತಿನ ಹಿಂಭಾಗ, ಕಿಬ್ಬೊಟ್ಟೆಗಳೆಲ್ಲ ಸ್ಪರ್ಶಸುಖದ ತುರೀಯ ಸ್ಥಾನಗಳು.
- ಇವತ್ತಿಗೆ, ಈ ಹೊತ್ತಿಗೆ ಅವಳೇ ಸರ್ವಾಧಿಕಾರಿಣಿ ಗಂಡಸರೇ, ನಿಮ್ಮ ದೇಹವನ್ನು ಸಂಪೂರ್ಣ ನಿಮ್ಮ ಸಂಗಾತಿಯ ವಶಕ್ಕೆ ಬಿಟ್ಟುಬಿಡಿ. ಚಿಂತೆ ಬೇಡ, ಇವತ್ತಿನ ಗೆಲುವನ್ನು ನೀವು ಯಾವತ್ತೂ ಮರೆಯಲಾರಿರಿ
- ಇನ್ನು ಡ್ರೆಸ್ಸು, ತಿಂಡಿ, ತೀರ್ಥದ ವಿಚಾರವನ್ನೆಲ್ಲಾ ಇಲ್ಲಿ ಹೇಳಿಲ್ಲ. ಒಟ್ಟಿನಲ್ಲಿ ನಿಮ್ಮಿಷ್ಟದ, ಇಬ್ಬರ ಮನಸಿಗೂ ಮುದ ನೀಡುವ ವಾತಾವರಣ, ಜಾಗ ಅಲ್ಲಿರಲಿ. ಕಾಮ ತನ್ನಿಂತಾನೇ ಸಂಭವಿಸಲಿ. ಪರಸ್ಪರರು ಅರಿತು, ಬೆರೆತು ಜಗವನ್ನೇ ಮರೆತು ಬಿಡಿ. ಇದನ್ನೇ ತಾನೇ ಕಾಮವೆನ್ನುವುದು, ಭಾವ ಪ್ರಾಪ್ತಿಯೆನ್ನುವುದು.
ಒಂದು ಡಿಸ್ಕ್ಲೈಮರು:
-ಡಾ. ರವೀಂದ್ರ ಮಾಥುರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics