ಆರೋಗ್ಯ-ಜೀವನಶೈಲಿ

ವಿಕಾರ ಬೊಜ್ಜಿಗೆ ಬ್ಯಾರಿಯಾಟ್ರಿಕ್ ಚಿಕಿತ್ಸೆ

ಕೆಲವು ವ್ಯಕ್ತಿಗಳು ಜನ್ಮತಃ ಸ್ಥೂಲಕಾಯಕ್ಕೆ ಒಳಪಡುವ ಸಾಧ್ಯತೆಯಿರುತ್ತದೆ. ಆಹಾರದ ಶೈಲಿ, ಜೀವನ ವಿಧಾನ ...

ಕೆಲವು ವ್ಯಕ್ತಿಗಳು ಜನ್ಮತಃ ಸ್ಥೂಲಕಾಯಕ್ಕೆ ಒಳಪಡುವ ಸಾಧ್ಯತೆಯಿರುತ್ತದೆ. ಆಹಾರದ ಶೈಲಿ, ಜೀವನ ವಿಧಾನ ಮತ್ತು ಸುತ್ತಮುತ್ತಲಿನ ಪರಿಸರ ಮುಂತಾದವುಗಳು ಇದಕ್ಕೆ ಪೂರಕವಾಗಿರುತ್ತವೆ. ಇದು ವ್ಯಕ್ತಿಯೊಬ್ಬನ ವೈಯಕ್ತಿಕ ದೋಷದಿಂದಾಗಿ ವಿಕೃತ ಸ್ಥೂಲಕಾಯಕ್ಕೆ ಒಳಗಾಗಿದ್ದಾನೆ ಎಂದು ಪರಿಗಣಿಸುವುದು ತಪ್ಪಾಗುತ್ತದೆ. ಅದೇನೆ ಇರಲಿ, ಪ್ರಾರಂಭಿಕ ಹಂತದಲ್ಲಿ, ಅತಿ ಚಿಕ್ಕ ಪ್ರಾಯದಲ್ಲೇ ವ್ಯಕ್ತಿಯೊಬ್ಬನ ದೇಹದ ತೂಕ ಹೆಚ್ಚಳಕ್ಕೆ ಕಾರಣ ಪತ್ತೆಮಾಡಿದಲ್ಲಿ ಈ ರೀತಿಯ ದೈಹಿಕ ಪರಿಸ್ಥಿತಿ ನಿಯಂತ್ರಿಸಬಹುದು. ಈ ಹಂತದಲ್ಲಿ ವೈದ್ಯರೊಂದಿಗೆ ಕೈಗೊಳ್ಳಲಾಗುವ ಆಪ್ತ ಸಮಾಲೋಚನೆಯಿಂದ ಈ ಪರಿಸ್ಥಿತಿ ತಡೆಯಬಹುದು.
ಯಾವ ರೋಗಗಳ ಸಾಧ್ಯತೆ?
-    ಮಧುಮೇಹ
-    ಅಧಿಕ ರಕ್ತದೊತ್ತಡ
-    ಪಾರ್ಶ್ವವಾಯು
-    ಬಂಜೆತನ
-    ನಿದ್ರಾ ಸಮಯದಲ್ಲಿ ಶ್ವಾಸಬಂಧ
-  ಹೃದಯಾಘಾತ, ಚರ್ಮರೋಗಗಳು
ಬ್ಯಾರಿಯಾಟ್ರಿಕ್ ಸರ್ಜರಿ ದಾರಿ...
ವಿಕಾರ ಸ್ಥೂಲಕಾಯದ ವ್ಯಕ್ತಿಗಳಲ್ಲಿ ಮಧುಮೇಹ, ಅಧಿಕ ಭಾವೋದ್ವೇಗ, ನಿದ್ರಾ ಸಮಯದ ಶ್ವಾಸಭಂಗ ಮುಂತಾದ ಕೆಲವು ರೋಗಗಳು ಆಕ್ರಮಣ ಮಾಡಿದಾಗ, ಕೀಹೋಲ್ ಪ್ರಕ್ರಿಯೆ (ಲ್ಯಾಪ್ರೊಸ್ಕೋಪಿಕ್ ಸರ್ಜರಿ) ಮೂಲಕ ಹಲವು ಶಸ್ತ್ರಚಿಕಿತ್ಸೆ ಕೈಗೊಳ್ಳಬಹುದು. ಆಹಾರವನ್ನು ಸ್ವೀಕರಿಸುವ ಪ್ರಮಾಣ ಕಡಿಮೆಗೊಳಿಸುವುದು, ಈ ಶಸ್ತ್ರಚಿಕಿತ್ಸೆಯ ತತ್ವ. ಈ ಶಸ್ತ್ರಚಿಕಿತ್ಸೆಗಳಿಂದ ಹೊಟ್ಟೆಯ ಕೆಲವು ಭಾಗಗಳನ್ನು ತೆಗೆದುಹಾಕಲಾಗುತ್ತದೆ ಅಥವಾ ಆಹಾರವು ಹೊಟ್ಟೆಗೆ ಸೇರದಂತೆ ಪ್ರತ್ಯೇಕಿಸಲಾಗುತ್ತದೆ. ರೋಗಿಗಳು ಹಸಿವಿಲ್ಲದೇ ಇದ್ದರೂ ಅತಿ ಕಡಿಮೆ ಪ್ರಮಾಣದ ಆಹಾರವನ್ನು ತೆಗೆದುಕೊಳ್ಳುವಂತೆ ಮಾಡುವಲ್ಲಿ ಈ ಶಸ್ತ್ರಚಿಕಿತ್ಸೆ ನೆರವಾಗುತ್ತದೆ. ತೆಗೆದುಕೊಳ್ಳುವ ಆಹಾರದ ಪ್ರಮಾಣವು ಅತ್ಯಲ್ಪ ಪ್ರಮಾಣದ್ದಾಗಿರುತ್ತದೆ ಮತ್ತು ವ್ಯಕ್ತಿಯ ದೈನಂದಿನ ಶಕ್ತಿಯ ಅವಶ್ಯಕತೆಗೆ ಸಾಕಾಗದಂತಿರುತ್ತದೆ. ಇದರಿಂದಾಗಿ ವ್ಯಕ್ತಿಗಳ ದೇಹವು ತನ್ನಲ್ಲಿ ಬೊಜ್ಜಿನ ರೂಪದಲ್ಲಿರುವ ಶಕ್ತಿಯನ್ನು ಬಳಸಿಕೊಳ್ಳಲಾರಂಭಿಸುತ್ತದೆ.
ಪರಿಣಾಮವೇನು?
ಸ್ವಲ್ಪವೇ ಪ್ರಮಾಣದಲ್ಲಿ ಆಹಾರ ಸೇವಿಸಿದ್ದಾಗ್ಯೂ, ರೋಗಿಗೆ ಸುಸ್ತು ಅಥವಾ ನಿಶ್ಯಕ್ತಿ ಆಗುವುದಿಲ್ಲ. ತೂಕದಲ್ಲಿ ಇಳಿಕೆಯಾಗುವುದರ ಜೊತೆಗೆ ಹೆಚ್ಚಿನ ರೋಗಿಗಳಲ್ಲಿ ಮಧುಮೇಹ, ಅಧಿಕ ಭಾವೋದ್ವೇಗ, ನಿದ್ರಾ ಸಮಯದ ಶ್ವಾಸಭಂಗ ಮುಂತಾದ ಕೆಲವು ರೋಗಲಕ್ಷಣಗಳಲ್ಲಿ ಇಳಿಮುಖವಾಗಿರುವುದು ಕಂಡುಬರುತ್ತದೆ.

ವಿಶೇಷತೇನು?
ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸೆಗಳಲ್ಲಿ ಕಂಡುಬರುವಂತೆ ದೇಹದ  ಬೊಜ್ಜಿನ ಕಣಗಳನ್ನು ತೆಗೆದುಹಾಕುವ ಪ್ರಕ್ರಿಯೆಗಳನ್ನು ಈ ಶಸ್ತ್ರಚಿಕಿತ್ಸೆಗಳು ಒಳಗೊಳ್ಳುವುದಿಲ್ಲ. ಜಾಗತಿಕವಾಗಿ ಕೈಗೊಳ್ಳಲಾಗಿರುವ ಅನೇಕ ಅಧ್ಯಯನಗಳ ಪ್ರಕಾರ ವಿಕಾರ ಸ್ಥೂಲಕಾಯವು ಶಸ್ತ್ರಚಿಕಿತ್ಸಾ ರಹಿತ ಪ್ರಕ್ರಿಯೆಗಳಿಗೆ ಅಥವಾ ಚಿಕಿತ್ಸೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ವಿಫಲವಾಗುತ್ತದೆ. ಅಂಥ ಚಿಕಿತ್ಸೆಗಳ ಮೂಲಕ ವ್ಯಕ್ತಿ ಕೆಲವು ಕಿಲೋಗಳಷ್ಟು ತೂಕ ಮಾತ್ರ ಕಡಿಮೆ ಮಾಡಿಕೊಳ್ಳಬಹುದು. ಆದರೆ ಕೆಲದಿನಗಳಲ್ಲೇ ಮತ್ತೆ ತೂಕದಲ್ಲಿ ಏರಿಕೆ ಕಂಡುಬರುತ್ತದೆ. ಇದಕ್ಕಿರುವ ಒಂದೇ ಒಂದು ಪರಿಹಾರ, ಶಸ್ತ್ರಚಿಕಿತ್ಸೆ ಮಾತ್ರ. ಈ ನಿಟ್ಟಿನಲ್ಲಿ ಶಸ್ತ್ರಚಿಕಿತ್ಸೆಯ ರಿಸ್ಕು ಮತ್ತು ವಿಕೃತ ಸ್ಥೂಲಕಾಯದ ಕಾರಣಕ್ಕಾಗಿ ಜೀವಕ್ಕಿರುವ ಅಪಾಯ ತುಲನೆ ಮಾಡಿ ನೋಡಿಕೊಳ್ಳುವುದು ಅವಶ್ಯಕ.

ಎಷ್ಟು ತೂಕ ಇಳಿಯಬಹುದು?
ಸಾಧಾರಣವಾಗಿ 12 ತಿಂಗಳುಗಳಲ್ಲಿ ಶೇ.60 ಹೆಚ್ಚಿನ ತೂಕದ ಇಳಿಕೆಯಾಗುತ್ತದೆ. ತೂಕದಲ್ಲುಂಟಾದ ಈ ಕಡಿತ ಮುಂದಿನ 14 ವರ್ಷಗಳವರೆಗೂ ಸುಸ್ಥಿರವಾಗಿರುತ್ತದೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ.ಟಿ



ಏನಿದು ವಿಕಾರಸ್ಥೂಲ ಕಾಯ?
ಬಾಡಿ ಮಾಸ್ ಇಂಡೆಕ್ಸ್ (ಇಂಐ) ಪ್ರಮಾಣ 37ಕ್ಕಿಂತಲೂ ಹೆಚ್ಚಿದ್ದರೆ ಅದು ವಿಕಾರ ಸ್ಥೂಲಕಾಯ. ಸಾಮಾನ್ಯ ವ್ಯಕ್ತಿಯೊಬ್ಬರ ವಯಸ್ಸು ಮತ್ತು ಸಾಧಾರಣ ಪ್ರಮಾಣದ ತೂಕದೊಂದಿಗೆ ಹೋಲಿಸಿದಾಗ ವಿಕಾರ ಸ್ಥೂಲಕಾಯವುಳ್ಳವರಲ್ಲಿ ಉಂಟಾಗುವ ಸಾವಿನ ಪ್ರಮಾಣದ ಅಪಾಯ ಎರಡು ಪಟ್ಟು ಹೆಚ್ಚು.



ಕೀ ಹೋಲ್ ವಿಧಾನ

ಕಿಬ್ಬೊಟ್ಟೆಯ ಭಾಗದಲ್ಲಿ ಕೇವಲ ಒಂದು ಸೆಂ.ಮೀ. ಗಾತ್ರದ ರಂಧ್ರ ಮಾಡಿ, ಅದರೊಳಗೆ ಕ್ಯಾಮೆರಾ ತೂರಿಸಿ, ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಇದರಿಂದ ಹಲವು ಪ್ರಯೋಜನಗಳಿವೆ. ನೋವಂತೂ ಇಲ್ಲವೇ ಇಲ್ಲ ಎಂಬಷ್ಟು ಶೀಘ್ರ ಉಪಶಮನವಾಗುತ್ತದೆ. 2-3 ದಿನಗಳೊಳಗಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಬಹುದು. ಛೇದನದಿಂದ ಉಂಟಾಗುವ ಗಾಯವೂ ಅತಿ ಚಿಕ್ಕದಾಗಿರುತ್ತವೆ. ಕೇವಲ 3-4 ವಾರಗಳುಮಾತ್ರ ಕಣ್ಣಿಗೆ ಕಾಣುವಂತಿರುತ್ತದೆ.

- ಡಾ. ರಾಜಶೇಖರ್ ನಾಯಕ್‌ಗುಣಶೀಲ ಆಸ್ಪತ್ರೆ, ಬಸವನಗುಡಿ
    080-26673585, 2667358

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video