ಆರೋಗ್ಯ-ಜೀವನಶೈಲಿ

ಹಲ್ಲುಕಟ್ಟು ವಿಷಯ

ಹಲ್ಲು ಮಾನವನ ಆಕರ್ಷಕ ಮತ್ತು ಬಹುಮುಖ್ಯ ಅಂಗ. ಹಲ್ಲುಗಳ ಅಂದದ ಕಾರಣಕ್ಕೆ ಕೆಲವರು ಸುಂದರವಾಗಿ...

ಹಲ್ಲು ಮಾನವನ ಆಕರ್ಷಕ ಮತ್ತು ಬಹುಮುಖ್ಯ ಅಂಗ. ಹಲ್ಲುಗಳ ಅಂದದ ಕಾರಣಕ್ಕೆ ಕೆಲವರು ಸುಂದರವಾಗಿ ಕಾಣುತ್ತಾರೆ. ಹಲ್ಲಿನ ಸಮಸ್ಯೆ ಇದ್ದವರಿಗೆ ಇತರರೊಡನೆ ಮುಕ್ತವಾಗಿ ಮಾತನಾಡುವುದು, ಬೆರೆಯುವುದು ಕಷ್ಟವಾಗುತ್ತದೆ. ಈ ಹಲ್ಲುನೋವನ್ನು ಬಲ್ಲವನೇ ಬಲ್ಲ! ಊಟ ಮಾಡಲು, ಮಾತನಾಡಲು ಆಗುವುದಿಲ್ಲ. ಮುಖಚರ್ಯ ಸಂಪೂರ್ಣವಾಗಿ ಬದಲಾಯಿಸಿ, ವ್ಯಕ್ತಿಯನ್ನು ಕುರೂಪಿಯನ್ನಾಗಿಸುತ್ತದೆ. ಜೊತೆಗೆ ವಯಸ್ಸಾಗಿರುವಂತೆ ಕಾಣುತ್ತದೆ. ಇಂಥ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಬೇಕಿದ್ದರೆ ಅದಕ್ಕೆ ಹಲ್ಲು ಕಟ್ಟಿಸಿಕೊಳ್ಳುವುದು ಅತ್ಯುತ್ತಮ ಪರಿಹಾರ.
ಹಲ್ಲು ಕಟ್ಟಿಸಿಕೊಳ್ಳುವುದೆಂದರೆ...
ಹಾಳಾದ ಹಲ್ಲಿನ ಜಾಗಕ್ಕೆ ಪುನಃ ಕೃತಕ ಹಲ್ಲು ಜೋಡಿಸುವುದಕ್ಕೆ ಹಲ್ಲು ಕಟ್ಟಿಸಿಕೊಳ್ಳುವುದು ಎನ್ನುತ್ತಾರೆ. ಹಲ್ಲುಗಳು ಹತ್ತಾರು ಕಾರಣಗಳಿಂದ ಹಾನಿಗೊಳಗಾಗುತ್ತವೆ. ಅಪಘಾತ, ಆಕಸ್ಮಿಕ ಹೊಡೆತ, ಹಲ್ಲೂ ಮೂಡದಿರುವುದು, ಮುರಿದಾಗ ಹುಳುಕಾಗುವುದು, ವಯೋಸಹಜ ಪ್ರಕ್ರಿಯೆ, ಮೂಳೆ ಸವೆತ, ಕಾಯಿಲೆಗಳು... ಇತ್ಯಾದಿ ಹತ್ತು ಹಲವು ಸಮಸ್ಯೆಗಳಿಂದ ಹಲ್ಲು ಕಳೆದರೂ ಯಾರೂ ಇಂದು ಚಿಂತಿಸಬೇಕಿಲ್ಲ. ಆಧುನಿಕ ತಂತ್ರಜ್ಞಾನ, ಮುಂದುವರಿದ ವೈಜ್ಞಾನಿಕ ತಂತ್ರಗಳಿಂದ ನೈಸರ್ಗಿಕವಾಗಿ ಇದ್ದ ಹಲ್ಲುಗಳಂತೆಯೇ ಹಲ್ಲುಗಳನ್ನು ಕಟ್ಟಿಕೊಡಬಹುದು.
ಹಲ್ಲುಗಳ ಆಯ್ಕೆ
ಈ ಹಲ್ಲುಗಳನ್ನು ಕೃತಕವಾಗಿ ನಿರ್ಮಿಸಲಾಗುತ್ತದೆ. ಬಹಳಷ್ಟು ಜನರ ತಪ್ಪು ನಂಬಿಕೆ ಏನೆಂದರೆ ಬೇರೊಬ್ಬರ, ಸತ್ತವರ ಹಲ್ಲು ಹಾಕುತ್ತಾರೆಂದು. ಆ ರೀತಿ ಎಂದಿಗೂ ಸಾಧ್ಯವಿಲ್ಲ. ಪ್ರತಿ ವ್ಯಕ್ತಿ ಹಲ್ಲುಗಳ ಆಯ್ಕೆ ಮಾಡುವಾಗ ವೈದ್ಯರಿಂದ ಸ್ಪಷ್ಟ ಮಾಹಿತಿ, ಬಳಕೆ ಬಗ್ಗೆ ಎಲ್ಲದರ ವಿವರ ತಿಳಿಯಬೇಕು.
ಅದರಲ್ಲಿ 3 ವಿವಿಧ ರೀತಿಯದ್ದು ಲಭ್ಯವಿದೆ.
-    ತೆಗೆದು ಹಾಕುವ ಹಲ್ಲು (ವ್ಯಕ್ತಿ ಸ್ವಯಂ ತೆಗೆದು ಪುನಃ ಅಲ್ಲೇ ಇಡುವುದು)
-    ಕಾಯಂ ಆಗಿ ಫಿಕ್ಸ್ ಮಾಡುವ ಹಲ್ಲು (ವ್ಯಕ್ತಿ ತೆಗೆಯಲು ಬಾರದು). ಇವೆರಡು ಬಗೆಯ ಹಲ್ಲನ್ನು ಮೂಳೆಯ ಮೇಲೆ ಕೂರಿಸಲಾಗುತ್ತದೆ.
-    ಇಂಪ್ಲ್ಯಾಂಟ್ ಹಲ್ಲಿಗೆ ಮೂಳೆಯೊಳಗಿನ ಆಧಾರ ಕೊಟ್ಟು ನಿಲ್ಲಿಸಬೇಕಾಗುತ್ತದೆ.
ಹಲ್ಲುಗಳ ಮೂಲ ವಸ್ತು
ಯಾವುದೇ ಹಲ್ಲನ್ನು ವ್ಯಕ್ತಿಗೆ ಜೋಡಿಸಿದಾಗ ಆತನಿಗೆ ಇದರಿಂದ ಯಾವುದೇ ತೊಂದರೆ ಆಗಬಾರದು. ಅಲರ್ಜಿಆಗಬಾರದು. ಅಂಥ ವಿಶಿಷ್ಟ ವಸ್ತುಗಳನ್ನೇ ಬಳಸಬೇಕಾಗುತ್ತದೆ. ಇದರಿಂದ ಆಕಸ್ಮಿಕವಾಗಿ ಹಲ್ಲು ಉದುರಿ ನುಂಗಿದರೂ ಯಾವುದೇ ತೊಂದರೆ ಆಗುವುದಿಲ್ಲ!
ಆ್ಯಕ್ರೇಲಿಕ್
ಕೃತಕ ಆ್ಯಕ್ರೇಲಿಕ್‌ನಿಂದ ನಿರ್ಮಿಸಲಾಗುವ ಈ ವಸ್ತುವಿನ ಹಲ್ಲುಗಳು ಸಾಂದ್ರತೆಯ ಆಧಾರದಿಂದ ಮಾಡಲಾಗುತ್ತದೆ.
ಜಪಾನಿಸ್ ಗೋಲ್ಡ್
ಚಿನ್ನ ಲೇಪನದ ಬಣ್ಣವಿರುವ ಈ ಹಲ್ಲು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಆದರೆ ಆಕರ್ಷಕವಾಗಿ ಕಾಣುತ್ತದೆ. ಚಿನ್ನದ ಹಲ್ಲು ಎಂಬ ಭಾವನೆ ಮೂಡಿಸುತ್ತದೆ. ಇದು ಲೋಹದಿಂದ ಮಾಡಲ್ಪಟ್ಟರುತ್ತದೆ. ಬಳಕೆ ಅವಧಿ 5-7 ವರ್ಷ.
ಫ್ಹೆಟ್ ಮೆಟಲ್
ಈ ವಸ್ತುವಿನಲ್ಲಿ ಟೈಟಾನಿಯಮ್, ಕ್ರೋಮಿಯಂ, ನಿಕ್ಕಲ್, ಸ್ಟೀಲ್ ಮುಂತಾದ ಲೋಹಗಳಿಂದ ಮಾಡಲಾಗಿರುತ್ತದೆ. ಸಂಯುಕ್ತ ಸ್ಟೀಲ್ ಬಣ್ಣವಿರುತ್ತದೆ.
ಸಿರಾಮಿಕ್ ಮೆಟಲ್
ಅತ್ಯಂತ ಉತ್ಕೃಷ್ಟ ಗುಣಮಟ್ಟ ಹಾಗೂ ಗರಿಷ್ಠ ತಾಳಿಕೆಯಿರುವ ಈ ವಸ್ತು ವ್ಯಾಪಕವಾಗಿ ಬಳಕೆಯಲ್ಲಿದೆ. ಶ್ರೇಷ್ಠ ಕಾರ್ಯಕ್ಷಮತೆಹಾಗೂ ಹತ್ತಾರು ವರ್ಷಗಳ ಬಳಕೆ ನಂತರವೂ ತನ್ನ ಹೊಳಪು ಕಳೆದುಕೊಳ್ಳುವುದಿಲ್ಲ.
ಇವೆಲ್ಲದರ ಜೊತೆಗೆ ಹತ್ತಾರೂ ವಿವಿಧ ಬಗೆಯ ಲೋಹದ ಹಲ್ಲುಗಳು ವ್ಯಕ್ತಿಯ ಆಯ್ಕೆಯ ಅನುಸಾರ ಮಾಡಲಾಗುತ್ತದೆ.



ಈ ರೀತಿ ಮಾಡದಿರಿ...



-   ರಸ್ತೆಯಲ್ಲಿ ಸಿಗುವ ನಕಲಿ ದಂತ ವೈದ್ಯರಿಂದ ಯಾವಾಗಲೂ ಹಲ್ಲು ಕಟ್ಟಿಸಿಕೊಳ್ಳದಿರಿ. ಇದರಿಂದ ವಸಡು, ದವಡೆ ಸುಲಭವಾಗಿ ಹಾಳಾಗುತ್ತದೆ. (ಕ್ಯಾನ್ಸರ್‌ನಂಥ ರೋಗ ಬರುವ ರಾಸಾಯನಿಕ ಅಂಶದ, ಕಡಿಮೆ ದರ್ಜೆಯ ಕರಗಿಸಿದ ಹಲ್ಲು, ಪ್ಲಾಸ್ಟಿಕ್ ಹಲ್ಲು ಮಾಡುತ್ತಾರೆ).
-    ನಿಮ್ಮದೇ ಅಲುಗಾಡುವ ಹಲ್ಲು ಬಿಗಿ ಮಾಡುತ್ತೇವೆ ಎಂದು ಹೇಳಿ ಆ್ಯಕ್ರೇಲಿಕ್ ದ್ರಾವಣ ಸುರಿದು ಬಿಗಿ ಮಾಡುತ್ತಾರೆ. ಆದರಿದು ಕೇವಲ ತಾತ್ಕಾಲಿಕ. ಇದರಿಂದ ಅಕ್ಕಪಕ್ಕದ ಆರೋಗ್ಯಕರ ಹಲ್ಲು ಹಾಳಾಗುತ್ತವೆ.
-    ಅಸಲಿ ಪ್ರಮಾಣಿಕೃತ ದಂತ ವೈದ್ಯರಿಂದ ಹಲ್ಲು ಮಾಡಿಸಿಕೊಳ್ಳಿ.
-    ಮುರಿದ, ಸೀಳಿದ ಹಲ್ಲುಗಳನ್ನು ಬಳಸಬೇಡಿ. ಇದರಿಂದ ಸೋಂಕು ತಗಲುತ್ತದೆ. ದೋಷಪೂರಿತ ಹಲ್ಲುಗಳಿಂದಾಗ ಬಾಯಿಯ ಹುಣ್ಣು, ದುರ್ವಾಸನೆ, ಬಾಯಿ ಕ್ಯಾನ್ಸರ್ ಬರಬಹುದು.
-   40 ವರ್ಷದೊಳಗಿನವರೆಲ್ಲ ಎಲ್ಲ ಹಲ್ಲು ಉದುರಿದ್ದರೆ ಇಂಪ್ಲಾಂಟ್ ಹಲ್ಲು ಮಾಡಿಸಬೇಕು.
-    ಚಿನ್ನ, ಬೆಳ್ಳಿ, ಹಿತ್ತಾಳೆ, ಸ್ಟೀಲ್, ಹೀಗೆ ಹತ್ತಾರು ಬಗೆಯ ಲೋಹದ ಹಲ್ಲು ಮಾಡುತ್ತಾರೆ. ಆದರೆ, ನಿಮಗೆ ಸರಿ ಹೋಗುವುದನ್ನೇ ಮಾಡಿಸಿ. ಶೋಕಿಗೆ ಹಲ್ಲು ಮಾಡಿಸದಿರಿ. ನೀವು ಮಾಡಿಸಿಕೊಳ್ಳುವ ಹಲ್ಲು ನಿಮಗೆ ಉಪಯೋಗಕ್ಕೆ ಬರಲಿ.


ನಿರ್ವಹಣೆ ಮತ್ತು ಖರ್ಚು


-   ಆ್ಯಕ್ರೇಲಿಕ್‌ನ ಬೆಲೆ ಎಲ್ಲಾ ಹಲ್ಲುಗಳಿಗಿಂತ ಬೆಲೆ ಕಡಿಮೆಯಾಗಿರುತ್ತದೆ. ಹಾಗಂತ ಗುಣಮಟ್ಟ ಕಳಪೆಯಾಗಿರುವುದಿಲ್ಲ. ಅದರಲ್ಲಿ ತಾಳಿಕೆ ಮಟ್ಟ ಅಷ್ಟಾಗಿರುವುದಿಲ್ಲ.
-   ತುಸು ಖರ್ಚು ಹೆಚ್ಚಾದರೂ ಹಲ್ಲಿಗೆ ಸ್ಟೀಲ್ (ಕ್ರೋಮಿಯಮ್- ನಿಕ್ಕಲ್) ಉತ್ತಮ ದೀರ್ಘಕಾಲಿನ ಬಳಕೆಬಾರುತ್ತದೆ.
-    ಆಕರ್ಷಣೆಗೆ ಸಿರಾಮಕ್ ಉತ್ತಮ. ಇದು ಎಲ್ಲಾ ಹಲ್ಲುಗಳಿಗಿಂತ ಬೆಲೆ ಹೆಚ್ಚಾಗಿದ್ದರೂ ಗುಣಮಟ್ಟದ ರಾಜಿ ಇರುವುದಿಲ್ಲ. ಜೀವನಪರ್ಯಂತವೂ ಬಳಸಬಹುದು.
-    ಇನ್ನು ಇದರ ನಿರ್ವಹಣೆ ಸಾಮಾನ್ಯ ಹಲ್ಲಿನಂತೆ ಊಟ ಮಾಡುವುದು, ಬ್ರಷ್ ಮಾಡಬಹುದು. ಈ ಹಲ್ಲು ಕಟ್ಟಿಸಿದ 2-3 ದಿನಗಳ ಬಳಿಕ ನಿಮಗೆ ಕೃತಕ ಹಲ್ಲಿದೆ ಎಂಬ ಭಾವನೆಯೇ ಬರದು.
-  ಹಾಕಿದ ಹಲ್ಲನ್ನು ಪ್ರತಿ 9-10-12 ವರ್ಷಗಳಿಗೊಮ್ಮೆ ಬದಲಾಯಿಸಬೇಕು. ಏಕೆಂದರೆ ಹಾಕಿದ ಹಲ್ಲಿನ   ಕೆಳಭಾಗದ ದವಡೆಯ ಆಕಾರ ಸವೆದು ಬದಲಾಗಿರುತ್ತದೆ.
-    ಕೀಳುವ, ಪದೇಪದೆ ಹಾಕಿದ ಹಲ್ಲು ಉದುರುತ್ತಿದ್ದರೆ ಅದಕ್ಕೆ ಬಾಹ್ಯ ಕಾರಣಗಳಿರಬಹುದು. ಅದಕ್ಕಾಗಿ ವೈದ್ಯರನ್ನು ಕಾಣಿ. ಯಾವುದೇ ಫಿಕ್ಸ್ ಮಾಡಿದ ಹಲ್ಲು ದುರ್ವಾಸನೆ ಬೀರುವುದಿಲ್ಲ. ಕೆಲವರಲ್ಲಿ ಈ ಬಗ್ಗೆ ತಪ್ಪು ನಂಬಿಕೆಯಿದೆ. ಸ್ವಚ್ಛತೆಯಿದ್ದಾಗ ವಾಸನೆ ಹೇಗೆ ಬರಲು ಸಾಧ್ಯ?

-ಡಾ. ಕೆ.ವಿ. ಸಂತೋಷ್ ಹೊಳಲ್ಕೆರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video