ಆರೋಗ್ಯ-ಜೀವನಶೈಲಿ

ನೆರಳು ಕೊಡು ಸೂರ್ಯ!

ಅಂದದ ಕೂದಲಿದ್ದರೆ, ತಲೆಮೇಲೇನೋ ಕಿರೀಟ ಹೊತ್ತಂತೆ. ಮೈಯನ್ನೇ ಕರಗಿಸಿಬಿಡುವ ಈ ಬೇಸಿಗೆಯ ತಾಪದ ಕೆಂಗಣ್ಣು ಕೂದಲಿನ ಮೇಲೆ ಬಿದ್ದರೆ ಗತಿಯೇನು? ಎಂಬುದು ಸದ್ಯದ ಚಿಂತೆ. 'ನನ್ನ ತಲೆಗೆ ಮಾತ್ರ ನೆರಳು ಕೊಡಯ್ಯಾ' ಅಂತ ಸೂರ್ಯನನ್ನು ಬೇಡಿದರೂ ಪ್ರಯೋಜನವಾಗದು. ತಾಪ, ಬೆವರಿನಿಂದಾಗಿ ಕೂದಲು ಕಂಗೆಟ್ಟು ಹೋಗಿಯೋ ಹೋಗುತ್ತದೆ. ಈ ರುದ್ರ ತಾಪದಿಂದ ಪಾರಾಗಲು ಕ್ಲೋರಿನ್ ಮಿಶ್ರಿತ ನೀರಿಗೆ ಇಳಿದಲ್ಲಿ ಕೂದಲು ಮತ್ತಷ್ಟು ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಕೆಲ ಕ್ರಮ ಅನುಸರಿಸಬೇಕಾಗಿದೆ.
ಹೆಲ್ಮೆಟ್ ಶುದ್ಧಗೊಳಿಸಿ
ಹೆಲ್ಮೆಟ್ ಬಳಸುವವರು, ಅದರ ಒಳಭಾಗವನ್ನು ಶುದ್ಧವಿಟ್ಟುಕೊಳ್ಳಬೇಕು. ಏಕೆಂದರೆ ಬೆವರಿನಂಶ ತಲೆ ಭಾಗದಲ್ಲಿ ಉಳಿದುಕೊಳ್ಳುವುದರಿಂದ ತುರಿಕೆ ಹಾಗೂ ಸ್ಕಾಲ್ಪ್ ಇನ್ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಸನ್ ಪ್ರೊಟೆಕ್ಷನ್
ಬಿಸಿಲಿಗೆ ಹೋಗುವ ಮುನ್ನ ಕೂದಲನ್ನು ಸೂರ್ಯನ ಕಿರಣಗಳಿಗೆ ನೇರವಾಗಿ ಒಡ್ಡುವುದನ್ನು ತಪ್ಪಿಸಬೇಕು. ಇದರಿಂದ ಕೂದಲಿನ ಬಣ್ಣಗುಂದುವುದನ್ನು ತಪ್ಪಿಸಬಹುದು. ಕ್ಯಾಪ್, ಹ್ಯಾಟ್, ಸ್ಕಾರ್ಫ್ ಹಾಗೂ ಸ್ಟೋಲ್ ಬಳಸಿ ಕೂದಲನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಬಹುದು.
ಸ್ವಿಮ್ಮಿಂಗ್ ಪೂಲ್‌ನಲ್ಲಿ...
ಕ್ಲೋರಿನ್ ಹಾಗೂ ಈಜುಕೊಳದಲ್ಲಿನ ಇತರೆ ರಾಸಾಯನಿಕ ಪದಾರ್ಥಗಳಿಂದ ಕೂದಲಿನ ಆರೋಗ್ಯ ಕೆಡುತ್ತದೆ. ಇದರಿಂದಾಗಿ ಕೂದಲು ಒಣಗುವುದಲ್ಲದೆ, ಒಡೆದುಕೊಳ್ಳುತ್ತದೆ. ಹೀಗಾಗಿ ಈಜುಕೊಳಕ್ಕೆ ಇಳಿಯುವ ಮುನ್ನ ಸ್ವಿಮ್ಮಿಂಗ್ ಕ್ಯಾಪ್ ಧರಿಸಿ. ಅಲ್ಲದೆ ನೀರಿಗಿಳಿಯುವುದಕ್ಕೂ ಮೊದಲು ನಲ್ಲಿ ನೀರಿನಿಂದ ಕೂದಲನ್ನು ನೆನೆಸಿ, ಲಿವ್ ಇನ್ ಕಂಡೀಷನರ್‌ಗಳನ್ನು ಬಳಸಬೇಕು. ಇದರಿಂದ ಈಜುಕೊಳದಲ್ಲಿನ ರಾಸಾಯನಿಕಗಳನ್ನು ನಿಮ್ಮ ಕೂದಲು ಸಂಪೂರ್ಣ ಹೀರಿಕೊಳ್ಳದು. ಈಜುಕೊಳದಿಂದ ಆಚೆ ಬಂದ ನಂತರ ಸ್ವಚ್ಛ ನೀರಿನಿಂದ ಹಾಗೂ ಶಾಂಪೂವಿನಿಂದ ತಲೆಗೂದಲು ತೊಳೆದುಕೊಳ್ಳಿ.
ಅನಗತ್ಯ ಉಷ್ಣಾಂಶದಿಂದ ದೂರ
ಬೇಸಿಗೆಯಲ್ಲಿ ಹೇರ್ ಬ್ಲೋವರ್ ಹಾಗೂ ಡ್ರೈಯರ್‌ಗಳ ಬಳಕೆ ಸೂಕ್ತವಲ್ಲ. ಇದರಿಂದ ನಿಮ್ಮ ಕೂದಲು ಹಾನಿಗೊಳಗಾಗುತ್ತದೆ. ಅಲ್ಲದೆ ಹೊಟ್ಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಹೇರ್ ಆಯಿಲ್ ಬಳಕೆ ಬೇಡ
ಬೇಸಿಗೆ ಕಾಲದಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದನ್ನು ಕಡಿಮೆ ಮಾಡಬೇಕು. ಅದರಲ್ಲಿಯೂ ನಿಮ್ಮದು ಎಣ್ಣೆ ಅಂಶದಿಂದ ಕೂಡಿದ ಸ್ಕಾಲ್ಪ್ ಆಗಿದ್ದಲ್ಲಿ ಎಣ್ಣೆ ಹಚ್ಚುವುದನ್ನು ನಿಲ್ಲಿಸಬೇಕು. ಒಂದು ವೇಳೆ ಎಣ್ಣೆ ಹಚ್ಚಿದಲ್ಲಿ ಕೆಲ ರೀತಿಯ ಫಂಗಸ್ ಬೆಳೆಯಲು ಕಾರಣವಾಗಿ ಕೂದಲು ಉದುರಲಾರಂಭಿಸುತ್ತದೆ.
ಅಗತ್ಯದ ನೀರಿನಂಶ ಒದಗಿಸಿ...
ಹವಾನಿಯಂತ್ರಣ ಹಾಗೂ ಕೆಫೇನ್‌ನಂಥ ಅಂಶಗಳು ಶರೀರದಲ್ಲಿನ ಹಾಗೂ ಕೂದಲಿನಲ್ಲಿನ ನೀರಿನಂಶಗಳನ್ನು ಹೀರಿಬಿಡುತ್ತದೆ. ಇದರಿಂದಾಗಿ ಕೂದಲು ಸತ್ವ ಕಳೆದುಕೊಂಡಂತೆ ಕಾಣುತ್ತದೆ. ಹೀಗಾಗಿ ನಿಮ್ಮ ಶರೀರಕ್ಕೆ ಅಗತ್ಯ ನೀರಿನಂಶ ಒದಗಿಸುವುದನ್ನು ಮರೆಯಬೇಡಿ.
ತಂಪು ಆಹಾರ ಸೇವನೆ
ಸೌತೇಕಾಯಿ, ಕಲ್ಲಂಗಡಿ, ಕರ್ಬೂಜ, ಎಳನೀರು, ಪುದೀನಾ ಹಾಗೂ ಮೂಲಂಗಿ ಹೆಚ್ಚಿನ ತಂಪಿನಂಶ ಹೊಂದಿರುತ್ತವೆ. ಈ ರೀತಿಯ ಆಹಾರ ಪದಾರ್ಥಗಳ ಸೇವನೆಯಿಂದಾಗಿ ಶರೀರದ ತಾಪಮಾನ ಕಡಿಮೆ ಮಾಡಲು ಸಾಧ್ಯ.
ನೈಸರ್ಗಿಕ ಮಾರ್ಗ
ಕಲ್ಲಂಗಡಿ ರಸದಿಂದ ಕೂದಲನ್ನು ಒಂದು ಗಂಟೆ ನೆನೆಸಿಟ್ಟು ನಂತರ ತೊಳೆಯಿರಿ. ಆಗ ನುಣುಪಾದ ಕೂದಲು ಪ್ರಾಪ್ತಿಯಾಗುತ್ತದೆ. ಅಲ್ಲದೆ, ಇದು ತಲೆಗೆ ತಂಪು ಕೂಡ.



= ಡಾ. ಶಾಹಿದ್ ಶಂಶೀರ್
      (ಡಾ. ಹೆಲ್ತ್‌ನ ವೈದ್ಯರು:        080- 23568290)


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್