'ಅದೆಂಥದ್ದೋ ಬಿಐಎ ಮಷಿನ್ ಅಂತೆ! ನನ್ನ ವಯಸ್ಸು 55 ಅಂತ ತೋರಿಸ್ತಿದೆ. ಆದರೆ ನಂಗೀಗ ಹುಟ್ಟಿದ ದಿನಾಂಕದ ಪ್ರಕಾರ 43 ವರ್ಷ!' ಇಂಥ ಅಚ್ಚರಿ ಬಹುತೇಕ ನಗರವಾಸಿಗಳದ್ದಾಗಿದೆ. ವಾಸ್ತವದಲ್ಲಿ ಆ ವ್ಯಕ್ತಿಗೆ 43 ವರ್ಷ. ಆದರೆ ವೈದ್ಯಕೀಯವಾಗಿ ಆತನ ದೇಹ ಮತ್ತು ಮನಸ್ಸು 12 ವರ್ಷ ವೃದ್ಧಿಸಿದೆ. ಅಂದಹಾಗೆ, ಬಿಐಎ ಮಷಿನ್ ಎಂಬುದು ಆರೋಗ್ಯಕರ ದೇಹದ ಪ್ರಮಾಣವನ್ನು ಗುರುತಿಸುವ ವೈಜ್ಞಾನಿಕ ಯಂತ್ರ.
ಇಂದು ನಗರಗಳಲ್ಲಿ ಕೆಲಸವೇ ಮುಖ್ಯವಾಗಿರುವುದರಿಂದ ಆರೋಗ್ಯ ನಿರ್ಲಕ್ಷ್ಯಕ್ಕೊಳಗಾಗಿದೆ. ಜೀವಿತಾವಧಿ ಕಡಿಮೆಯಾಗುತ್ತಿದೆ. ಇದೊಂದು ರೀತಿಯಲ್ಲಿ ಅಪಾಯಕಾರಿ ಬೆಳವಣಿಗೆ. ಪೂರ್ವಜರು ನೂರು ವರ್ಷ ಗಟ್ಟಿಮುಟ್ಟಾಗಿ ಬದುಕುತ್ತಿದ್ದರು. ಆದರೆ, ಈಗಿನವರು 60 ವರ್ಷಕ್ಕೇ ಮುದುಕರಾಗುತ್ತಿದ್ದಾರೆ. ಇಂಥ ಬೆಳವಣಿಗೆಗೆ ತಡೆಯೊಡ್ಡುವ ನಿಟ್ಟಿನಲ್ಲಿ ಬೆಂಗಳೂರಿನ ಜಯನಗರ ನಾಲ್ಕನೇ ಹಂತದಲ್ಲಿರುವ 'ವಿದಾಲ್ ಹೆಲ್ತ್' ಶ್ರಮಿಸುತ್ತಿದೆ.
ಈಗಾಗಲೇ 2 ವರ್ಷ ಪೂರೈಸಿರುವ ವಿದಾಲ್ ಹೆಲ್ತ್ ರೋಗ ಬಾರದಂತೆ ತಡೆಗಟ್ಟುವ ನಿಚ್ಚಳ ನಿಲುವು ಹೊಂದಿದೆ. ಜಾಗತಿಕ ಆರೋಗ್ಯ ಸುಧಾರಣಾ ನಿಟ್ಟಿನಲ್ಲಿ ಮಹತ್ವ ಹೆಜ್ಜೆ ಇರಿಸಿರುವ ಶ್ರೀವತ್ಸನ್ ಅಪರಾಜಿತನ್ 'ವಿದಾಲ್ ಹೆಲ್ತ್' ಸಂಸ್ಥೆಯ ಅಡಿಪಾಯ. ಸಂಸ್ಥೆಯ ಸಿಇಒ ಆಗಿರುವ ಶ್ರೀವತ್ಸನ್ ದೇಶದಲ್ಲಿ ಮನುಷ್ಯರ ಆಯುಸ್ಸನ್ನು ಹೆಚ್ಚಿಸಬಹುದಾದ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾದ ವ್ಯವಸ್ಥೆಯನ್ನು ಕಟ್ಟಿಬೆಳೆಸುವ ಉದ್ದೇಶ ಹೊಂದಿದ್ದಾರೆ.
= ಮಂಜು