ಆರೋಗ್ಯ-ಜೀವನಶೈಲಿ

ಗರ್ಭಿಣಿಗೆ ಸಮ್ಮರ್ ಆಹಾರ!

ಈ ಬಿರುಬಿಸಿಲಿನಲ್ಲಿ ದೂರ ಪ್ರಯಾಣದ ಮಾತಿರಲಿ, ಹತ್ತಿರದ ಸ್ಥಳಕ್ಕೆ ಹೋಗುವುದೂ ಕಷ್ಟ. ಬಿಸಿಲಿನ ತಾಪ ದೇಹದಲ್ಲಿನ ನೀರಿನಂಶವನ್ನು ಪೂರ್ಣ ಹೀರುತ್ತದೆ. ಅದರಲ್ಲೂ ಗರ್ಭಿಣಿಯರ ಪಾಲಿಗಂತೂ ಈ ಸುಡುಬಿಸಿಲು ಕಡುಕಷ್ಟ. ಈ ವೇಳೆ ದೇಹವನ್ನು ರಕ್ಷಿಸಿಕೊಳ್ಳಲು ಹಲವು ಮಾರ್ಗಗಳಿವೆ. ಈ ಕೆಳಗೆ ನೀಡಲಾಗಿರುವ ಐದು ಆಹಾರಗಳು ಬಿಸಿಲ ತಾಪವನ್ನು ಕಡಿಮೆಮಾಡಿಕೊಳ್ಳಲು ಸಹಾಯಕ.
ಎಳನೀರು
ಇದು ಪ್ರಕೃತಿದತ್ತ ಲಭ್ಯವಾಗಿರುವ ಅತ್ಯುತ್ತಮ, ಅತ್ಯಂತ ಆರೋಗ್ಯಪೂರ್ಣ ಪಾನೀಯ. ಸೇವಿಸಿದ ತಕ್ಷಣದಲ್ಲೇ ಸಹಜವಾಗಿಯೇ ದೇಹವನ್ನು ತಂಪುಗೊಳಿಸುವ ಎಳನೀರು, ಅಷ್ಟೇ ಸಹಜ ಸ್ವರೂಪದಲ್ಲಿ ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಮೂತ್ರ ನಾಳದಲ್ಲಿ ಸೋಂಕಿನ ಸಾಧ್ಯತೆಗಳನ್ನು ತಗ್ಗಿಸುತ್ತದೆ. ಮೂತ್ರಕೋಶದಲ್ಲಿ ಕಲ್ಲು ಸೃಷ್ಟಿಯಾಗುವುದನ್ನು ತಗ್ಗಿಸುತ್ತದೆ. ಗರ್ಭಾವಸ್ಥೆಯಲ್ಲಿರುವಾಗ ಪದೇಪದೆ ಕಾಣಿಸಿಕೊಳ್ಳುವ ಎದೆಯುರಿಗೆ ಎಳನೀರೇ ಪರಿಹಾರ. ಎಳನೀರಿನಲ್ಲಿ ಕೊಬ್ಬಿನಂಶ ಶೂನ್ಯ ಪ್ರಮಾಣದಲ್ಲಿದೆ.
ಒಮ್ಮೆ ಪ್ರಯತ್ನಿಸಿ
ತೆಳುವಾದ ಗಂಜಿಯಂಥ ಕಾಯಿಯ ಪದರ ಇರದೇ ಇರುವ ಎಳೆಯ ಕಾಯಿಯಿಂದ ತೆಗೆದ ತಾಜಾ ಎಳನೀರಿಗೆ ಅರ್ಧ ಹೋಳು ನಿಂಬೆಹಣ್ಣು ಹಿಂಡಿ. ಜತೆಗೆ ಒಂದೆರೆಡು ಎಸಳು ಪುದೀನಾ ಸೇರಿಸಿ. ಕಾಲು ಟೀ ಚಮದಷ್ಟು ಏಲಕ್ಕಿ ಮಿಶ್ರ ಮಾಡಿ. ಈ ಮಿಶ್ರಣದ ಎಳನೀರನ್ನು ಈ ಬೇಸಿಗೆಯಲ್ಲಿ ಸೇವಿಸುತ್ತಾ ಬಿರುಬಿಸಿಲ ತಾಪವನ್ನೂ ಕ್ಷಣಮಾತ್ರದಲ್ಲಿ ಹೊಡೆದೋಡಿಸಿರಿ.
ಮಜ್ಜಿಗೆ
ಜನಪ್ರಿಯ ಪೇಯ. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಮಜ್ಜಿಗೆಗೆ ಇನ್ನಷ್ಟು ನೀರು ಸೇರಿಸುವ ಮೂಲಕ ಸಾಕಷ್ಟು ತೆಳುವಾಗಿಸಿಕೊಂಡು ಸೇವಿಸುವುದು ಬಹಳ ಒಳ್ಳೆಯದು. ಇಂಥ ಸಂದರ್ಭಗಳಲ್ಲಿ ನೀರು ಉತ್ತಮ ಔಷಧ.
ಒಮ್ಮೆ ಪ್ರಯತ್ನಿಸಿ
ಅರ್ಧ ಟೀ ಚಮಚದಷ್ಟು ಮೆಂತ್ಯದ ಕಾಳುಗಳನ್ನು ರಾತ್ರಿ ಮಜ್ಜಿಗೆಯಲ್ಲಿ ನೆನೆಹಾಕಿ, ಬೆಳಗ್ಗೆ ಮುಖಮಾರ್ಜನ ನಂತರ ಸೇವಿಸಿದರೆ ಅಜೀರ್ಣ ಅಥವಾ ಹೊಟ್ಟೆನೋವು, ಭೇದಿ ಇದ್ದರೆ ತಕ್ಷಣ ನಿವಾರಣೆಯಾಗುತ್ತದೆ.
ಮಜ್ಜಿಗೆಯನ್ನು ದೋಸೆ, ರವೆ ಇಡ್ಲಿಯನ್ನು ಮಾಡುವಾಗಲೂ ಬಳಸಲಾಗುತ್ತದೆ. ಖಡೀಸ್ ತಯಾರಿಕೆಯಲ್ಲೂ ಬಳಸುವುದಿದೆ. ದೋಸೆಯನ್ನು ಬಹಳ ಮೃದುವಾಗಿಸಬೇಕಾದರೆ ಮಜ್ಜಿಗೆಯನ್ನು ದೋಸೆ ಹಿಟ್ಟಿಗೆ ಮಿಶ್ರಣ ಮಾಡಿಕೊಳ್ಳಬಹುದು. ರವೆ ಇಡ್ಲಿಯೂ ಮೃದುವಾಗಿ, ರುಚಿ ಹೆಚ್ಚುವಂತಾಗಲು ಮಜ್ಜಿಗೆ ಮಿಶ್ರಣ ಸಹಕಾರಿ.
ಅರ್ಧ ಕಪ್‌ನಷ್ಟು ಗಟ್ಟಿಯಾದ ತಾಜಾ ಮೊಸರಿಗೆ ನೀರು ಮಿಶ್ರಣ ಮಾಡಿ. ಮುಷ್ಟಿಯಷ್ಟು ಪುದೀನ ಎಲೆ, ಕರಿಬೇವು, ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಅದಿಷ್ಟನ್ನೂ ಕಡೆದು ನೀರು ಬೆರೆಸಿದ ಮೊಸರಿಗೆ ಮಿಶ್ರಣ ಮಾಡಿ. ನಂತರ ಚಿಟಿಕೆಯಷ್ಟು ಇಂಗು ಬೆರೆಸಿ ಸೇವಿಸಿರಿ.
ಒಮ್ಮೆ ಪ್ರಯತ್ನಿಸಿ
ಬೀಜವನ್ನು ತೆಗೆದಿರುವ ಕಲ್ಲಂಗಡಿ ಹಣ್ಣಿನ 3 ಹೋಳುಗಳು, 1 ಸಣ್ಣ ಟೊಮೇಟೊವನ್ನು ಬಿಸಿನೀರಿನಲ್ಲಿಟ್ಟು ಅದರ ಸಿಪ್ಪೆಯ ಎಳೆಯನ್ನು ತೆಗೆದು, ಬೀಜವನ್ನೂ ತೆಗೆದು ಚೆನ್ನಾಗಿ ಹಿಚುಕಿ ರಸತೆಗೆದಿಟ್ಟುಕೊಳ್ಳಿ. 4 ತುಳಸಿ ಎಲೆಗಳು, ಸ್ವಲ್ಪ ಕತ್ತರಿಸಿದ ಶುಂಠಿ, ಅರ್ಧ ಟೀ ಚಮಚ ಜೇನುತುಪ್ಪ ತೆಗೆದುಕೊಂಡು ಮಿಶ್ರಣ ಮಾಡಿ ಸೇವಿಸಿ.
ಜೀರಿಗೆ ಕಾಳುಗಳು
ಸಾಂಪ್ರದಾಯಿಕ ಶೈಲಿಯ ಅಡುಗೆಯಲ್ಲಿ ಜೀರಿಗೆಯನ್ನು ಹೆಚ್ಚು ಬಳಸುತ್ತಾರೆ. ಅರ್ಧ ಟೀ ಚಮಚೆಯಷ್ಟು ಜೀರಿಗೆ ಕಾಳುಗಳನ್ನು ಒಂದು ಲೋಟ ನೀರಿನಲ್ಲಿ ನೆನೆಹಾಕಿ. ಸ್ವಲ್ಪ ಸಮಯದ ನಂತರ ಈ ಜೀರಿಗೆ ಕಾಳು ನೆನೆಸಿದ ನೀರನ್ನು ಸೇವಿಸಿ. ಇದು ಹೊಟ್ಟೆ ಉರಿ, ಉದರದಲ್ಲಿ ಆಮ್ಲೀಯ ಸಮಸ್ಯೆಗೆ (ಅಸಿಡಿಟಿ) ತಕ್ಷಣ ಪರಿಹಾರ ಒದಗಿಸುತ್ತದೆ. ಅಷ್ಟೇ ಅಲ್ಲ, ದೇಹದ ತಾಪವನ್ನೂ ತಗ್ಗಿಸಲು ಸಹಕರಿಸುತ್ತದೆ.
ಜೀರಿಗೆ ಕಾಳುಗಳನ್ನು ಸಾಂಬಾರು, ಪಲ್ಯಗಳನ್ನು ಸಿದ್ಧಪಡಿಸುವಾಗಲಷ್ಟೇ ಅಲ್ಲ, ಚಪಾತಿ, ರೊಟ್ಟಿಯನ್ನು ತಯಾರಿಸುವಾಗಲೂ ಬಳಸಬಹುದು. ಊಟವಾದ ನಂತರ ಅರ್ಧ ಟೀ ಚಮಚೆಯಷ್ಟು ಜೀರಿಗೆಯನ್ನು ಲಘುವಾಗಿ ಹುರಿದು ಚೆನ್ನಾಗಿ ಜಗಿದು ತಿಂದರೆ ಬಹಳ ಒಳ್ಳೆಯದು.
ಪ್ರಯತ್ನಿಸಿ ನೋಡಿ
2 ಟೀ ಚಮಚ ನನ್ನಾರಿ ಶರಬತ್, 2 ಟೀ ಚಮಚ ಪುದೀನಾ ಎಲೆಗಳು, ಅರ್ಧ ನಿಂಬೆ ಹೋಳು, ಜೀರಿಗೆ ನೆನೆಸಿದ ಒಂದು ಲೋಟ ನೀರಿನಲ್ಲಿ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ ಸೋಸದೆ ಕುಡಿಯಿರಿ.


ಕಲ್ಲಂಗಡಿ ಹಣ್ಣು
ತಮಾಷೆ ಎಂದರೆ ಈ ಹಣ್ಣು ಅದರ ಹೆಸರಿಗೆ ತದ್ವಿರುದ್ಧ. ಮೇಲೆ ಗಟ್ಟಿಯಾದ ಹಸಿರಿನ ಸಿಪ್ಪೆ, ಒಳಗಂತೂ ಕೆಂಪು ಅಥವಾ ಗುಲಾಬಿ ಬಣ್ಣದ ಮೃದುವಾದ ಅಷ್ಟೇ ಸಿಹಿಸಿಹಿ ತಿರುಳು. ಈ ಹಣ್ಣನ್ನು ಕತ್ತರಿಸಿ ನೇರವಾಗಿಯೂ ಸೇವಿಸಬಹುದು, ಹಣ್ಣಿನ ರಸವಾಗಿಯೂ ಕುಡಿಯಬಹುದು. ಯಾವುದೇ ಬಗೆಯಲ್ಲಿ ಸೇವಿಸಿದರೂ ಕಲ್ಲಂಗಡಿ ಹಣ್ಣು ದೇಹವನ್ನು ಬಹಳ ವೇಗವಾಗಿ ತಂಪುಗೊಳಿಸುತ್ತದೆ. ಕುಕುರ್‌ಬಿಡೇಸಿಯಾ ಗುಂಪಿಗೆ (ಸೌತೆಕಾಯಿಗಳಂಥವು) ಈ ಅದ್ಭುತ ಹಣ್ಣು ಅದರ ತೂಕಕ್ಕೆ ಹೋಲಿಸಿದರೆ ಶೇ. 6ರಷ್ಟು ಸಿಹಿ ಅಂಶವನ್ನೂ, ತಾಂತ್ರಿಕವಾಗಿ ಶೇ.91ರಷ್ಟು ನೀರಿನಂಶವನ್ನೂ ಒಳಗೊಂಡಿದೆ. ವ್ಯಾಯಾಮ ಮಾಡಿದ ನಂತರ ಮಾಂಸಖಂಡಗಳಲ್ಲಿ ಬಿಗಿತ ಕಾಣಿಸಿಕೊಂಡರೆ, ರಕ್ತನಾಳಗಳಲ್ಲಿ ಒತ್ತಡ ಉಂಟಾದರೆ ದೇಹದಲ್ಲಿ ಸಮಸ್ಯೆ ಇರುವ ಭಾಗಕ್ಕೆ ಕಲ್ಲಂಗಡಿ ಹಣ್ಣಿನ ಹೋಳುಗಳನ್ನು ಒತ್ತರಿಸಿಟ್ಟರೆ ಪರಿಹಾರ ದೊರೆಯುತ್ತದೆ. ಜತೆಗೆ ರಕ್ತದ ಒತ್ತಡವನ್ನು ತಗ್ಗಿಸಲು ಈ ಹಣ್ಣು ಸಹಕಾರಿ.


ಪುದೀನಾ ಎಲೆಗಳು
ಹಸಿರಾಗಿರುವ ತಾಜಾ ಪುದೀನಾ ಎಲೆಗಳನ್ನು ಭಾರತೀಯ ಪದ್ಧತಿಯ ಆಹಾರ ಸಿದ್ಧತೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಬಳಸಲಾಗುತ್ತದೆ. ಪುದೀನಾ ಅದರ ಘಮಘಮಿಸುವ ಸುವಾಸನೆಗಷ್ಟೇ ಪ್ರಸಿದ್ಧವಲ್ಲ. ಎದೆಯುರಿ, ಅಜೀರ್ಣ, ಜಠರದಲ್ಲಿನ ಆಮ್ಲೀಯ ಸಮಸ್ಯೆಯನ್ನು ಥಟ್ಟನೆ ನಿವಾರಿಸುತ್ತದೆ. ಉದರಕ್ಕೆ ತಣ್ಣನೆಯ ಭಾವ ತಂದುಕೊಡುತ್ತದೆ. ನೈಸರ್ಗಿಕವಾಗಿಯೇ ಪುದೀನಾ ವಿಟಮಿನ್ ಸಿ ಯನ್ನು ಅತ್ಯಧಿಕ ಪ್ರಮಾಣದಲ್ಲಿ ಒಳಗೊಂಡಿದೆ. ಪುದೀನಾ ಪ್ರಯೋಗ: ಮೂರು ಕರಬೂಜಾ ಹಣ್ಣಿನ ಹೋಳು, ಅರ್ಧ ಹೋಳು ಸೇಬು ಹಣ್ಣು, ಬೀಜ ತೆಗೆದ ಅರ್ಧ  ಹೋಳು ಸೌತೆಕಾಯಿ, ಒರೆಗಾನೋ, ರುಚಿಗೆ ತಕ್ಕಷ್ಟು ಹರಳುಪ್ಪ ಜೊತೆ ಮುಷ್ಟಿಯಷ್ಟು ಪುದೀನಾ ಎಲೆಗಳನ್ನು ಮಿಶ್ರಣ ಮಾಡಿ ತಿನ್ನಿ.


= ವಿದ್ಯಾ, ಆಹಾರ ತಜ್ಞೆ,   
   ಕ್ಲೌಡ್‌ಲೈನ್ ಹೆಲ್ತ್‌ಕೇರ್ ಫೆಸಿಲಿಟಿ ಸಂಸ್ಥೆ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ