ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

Sunತಾಪ!

Vishwanath S
Updated On : 24 May 2014, 5:07 am

ಬೇಸಿಗೆ ಬಂತೆಂದರೆ ಪ್ರತಿಯೊಬ್ಬರು ಚರ್ಮ ರಕ್ಷಣೆ ಕುರಿತು ಆಲೋಚಿಸುತ್ತಾರೆ. ಬಿರು ಬಿಸಿಲಿನ ಬೇಗೆಯಿಂದಾಗುವ ಸನ್ ಬರ್ನ್ ಹಾಗೂ ಟ್ಯಾನ್‌ನಂಥ ಸಮಸ್ಯೆಗಳು ಕೇವಲ ಮಹಿಳೆಯರನ್ನು ಮಾತ್ರವಲ್ಲ ಪುರುಷರನ್ನೂ ಕಾಡುತ್ತವೆ. ಮೊಡವೆಗಳು, ವರ್ಣದ್ರವ್ಯಗಳ ಬದಲಾವಣೆ, ಚರ್ಮದ ಆಯುಸ್ಸು ಕುಗ್ಗಾವುದು ಹಾಗೂ ಸುಕ್ಕಿನಂಥ ಮೊದಲಾದ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಮುನ್ನೆಚ್ಚರಿಕೆ ಅನುಸರಿಸುವುದು ಅಗತ್ಯ.
ಸೂಕ್ತ ಉಡುಗೆ ತೊಡುವುದು, ಅದರಲ್ಲೂ ಮೊದಲಿಗೆ ಶೇ.100ರಷ್ಟು ಕಾಟನ್ ಬಟ್ಟೆಗಳನ್ನು ಧರಿಸಿ. ಬೆವರುವ ಸಮಸ್ಯೆಯಿಂದ ನಿರಾಳವಾಗಬಹುದು. ಮೊಡವೆಗಳು, ವರ್ಣದ್ರವ್ಯಗಳು, ಬ್ಲ್ಯಾಕ್ ಹೆಡ್ ಹಾಗೂ ವೈಡ್ ಹೆಡ್ ಬೇಸಿಗೆಯ ದಿನಗಳಲ್ಲಿ ಹೆಚ್ಚುತ್ತದೆ. ಏಕೆಂದರೆ, ಎಣ್ಣೆಯ ಅಂಶ ಹಾಗೂ ಹೊರಬರಲಾಗದೆ ಉಳಿದಂಥ ಬೆವರಿನ ಅಂಶಗಳಿಂದಾಗಿ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬೇಸಿಗೆಯಲ್ಲಿ ಎರಡು ಬಾರಿ ಸ್ನಾನ ಮಾಡುವುದರಿಂದ ಈ ರೀತಿಯ ಸಮಸ್ಯೆಗಳಿಂದ ಪಾರಾಗಲು ಸಾಧ್ಯ.
ಬಿಸಿಲಿಗೆ ಆಚೆ ಹೋಗುವ ಮುನ್ನ...
ಬಿಸಿಲಲ್ಲಿ ಆಚೆ ಹೋಗುವುದಾದರೆ, ಮುಂಜಾಗೃತವಾಗಿ 20 ನಿಮಿಷಗಳ ಮೊದಲೇ ಸೂಕ್ತ ಸನ್‌ಸ್ಕ್ರೀನ್ ಲೋಷನ್ ಬಳಸಬೇಕು. ಇದಕ್ಕೆ ಬಳಸುವ ಸನ್‌ಸ್ಕ್ರೀನ್ ಲೋಷನ್ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ ಅಥವಾ ಎಸ್ಟಿಎಫ್ 25ರಿಂದ 50ರ ಒಳಗಿದ್ದಲ್ಲಿ ಸೂಕ್ತವಾಗಿರುತ್ತದೆ. ಇದರಿಂದ ಶೇ.95-99ರಷ್ಟು ಅತಿನೇರಳೆ ಕಿರಣಗಳಿಂದ (ಸನ್‌ಬರ್ನ್‌ಗೆ ಕಾರಣವಾಗುವ ಸೂರ್ಯನ ತೀಕ್ಷ್ಣ ಕಿರಣಗಳು) ತ್ವಚೆಯನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಅಲ್ಲದೆ ಪ್ರತಿ 1 ತಾಸಿನ ನಂತರ ಈ ರೀತಿ ಸನ್‌ಸ್ಕ್ರೀನ್ ಲೋಷನ್ ನಿಮ್ಮ ತ್ವಚೆಗೆ ಹಚ್ಚಬೇಕಾಗುತ್ತದೆ.
ಮೋಡಗಳು ಹೆಚ್ಚಿದ್ದರೂ ಶೇ.40ರಷ್ಟು ಅತಿ ನೇರಳೆ ಕಿರಣಗಳು ಭೂಮಿಯನ್ನು ತಲುಪುತ್ತವೆ. ಹೀಗಾಗಿ ಮೋಡವಿದ್ದ ಸಂದರ್ಭದಲ್ಲೂ ಸನ್‌ಸ್ಕ್ರೀನ್ ಬಳಸುವುದೊಳಿತು. ಅಂದಹಾಗೆ ಸನ್‌ಸ್ಕ್ರೀನ್ ಬಳಸುವುದರಿಂದ ಕೇವಲ ಸನ್‌ಬರ್ನ್‌ನಿಂದ ತಪ್ಪಿಸಿಕೊಳ್ಳಬಹುದು.
ಹೀಗಾಗಿ ಸ್ಕಾಫ್ಸರ್, ಸ್ಟ್ರಾಲ್ಸ್, ಕ್ಯಾಪ್, ಹ್ಯಾಟ್, ಗ್ಲೌ, ಜಾಕೆಟ್, ಉದ್ದ ತೋಳಿನ ಶರ್ಟ್ಸ್ ಹಾಗೂ ಛತ್ರಿಗಳನ್ನು ಬಳಸುವುದರ ಮೂಲಕವೂ ಬೇಸಿಗೆಯ ಝಳದಿಂದ ಪಾರಾಗಬಹುದು. ಸೂರ್ಯನ ಕಿರಣಗಳಿಂದ ಕಣ್ಣಿನ ಸುತ್ತಮುತ್ತ ಇರುವಂಥ ಚರ್ಮ ಭಾಗಕ್ಕೂ ಹಾನಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಲ್ಲದೆ ಅತಿನೇರಳೆ ಕಿರಣಗಳಿಂದಾಗಿ ಕಣ್ಣಿನ ಅಂಗಾಂಶಗಳ ಮೇಲೂ ಪ್ರಭಾವ ಬೀರುವಂತಾಗುತ್ತದೆ. ಸನ್‌ಗ್ಲಾಸರ್‌ಗಳನ್ನು ಬಳಸುವುದೊಳಿತು.
ಮನೆಯಲ್ಲೇ ಇದೆ ಮದ್ದು!
ನಿಮ್ಮ ತ್ವಚೆ ಸನ್ ಬರ್ನ್‌ಗೆ ತುತ್ತಾದಲ್ಲಿ ಕಡಲೆ ಹಿಟ್ಟು, ಮೊಸರು ಹಾಗೂ ಅರಿಶಿಣ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದು. ಜ್ಯೂಸ್, ಸೌತೇಕಾಯಿ, ಪರಂಗಿ, ನಿಂಬೆ ಹಾಗೂ ಅಲೂಗಡ್ಡೆ ಪೇಸ್ ಹಚ್ಚುವುದರಿಂದಲೂ ಚರ್ಮದ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. ಈ ಎಲ್ಲ ಪದಾರ್ಥಗಳ ಆ್ಯಂಟಿ ಟ್ಯಾನ್ ಅಂಶಗಳನ್ನು ಹೊಂದಿದ್ದು, ನೈಸರ್ಗಿಕ ಬ್ಲೀಚ್ ಗುಣ ಲಕ್ಷಣ ಹೊಂದಿವೆ. ಅತಿ ಸೂಕ್ಷ್ಮ ಚರ್ಮವನ್ನು ಹೊಂದಿರುವವರು ಈ ರೀತಿಯ ಪದಾರ್ಥಗಳನ್ನು ಬಳಸುವಾಗ ಎಚ್ಚರ ವಹಿಸಬೇಕಾಗುತ್ತದೆ. ದಿನಕ್ಕೆ 12- 15 ಲೋಟ ನೀರು ಕುಡಿಯುವುದರಿಂದ ಚರ್ಮದ ಕೋಮಲತೆ ಕಾಪಾಡಬಹುದು. ಫ್ರೂಟ್‌ಸಲಾಡ್, ಕಿತ್ತಳೆ, ಸೌತೇಕಾಯಿ, ಟೊಮೇಟೊ, ಕ್ಯಾರೆಟ್ ಹಾಗೂ ಮತ್ತಿತರ ತಂಪಿನಂಶ ಹೆಚ್ಚಿರುವ ಹಣ್ಣು, ತರಕಾರಿ ಸೇವಿಸಬೇಕು. ಚರ್ಮದ ಆರೋಗ್ಯ ವೃದ್ಧಿಸುತ್ತದೆ.



- ಡಾ. ಪ್ರಂಜಲ್ ಶಂಶೀರ್, 08023568290

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement