ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಕೆಂದುಟಿ ಚೆಲುವೆಯಾ ನೋಡಿದೆಯಾ?

Vishwanath S
Updated On : 30 May 2014, 3:49 am

ಜೇನು ತುಪ್ಪ -ಲಿಂಬೆರಸ: ದಿನದಲ್ಲಿ 2 ರಿಂದ 3 ಬಾರಿ ಇವೆರಡನ್ನು ಮಿಶ್ರಣ ಮಾಡಿ 1 ಗಂಟೆಯ ಕಾಲ ಹಚ್ಚಿ ನಂತರ ತೊಳೆಯುವುದರಿಂದ ನಿಮ್ಮ ತುಟಿ ಹೊಳಪನ್ನು ಪಡೆಯುತ್ತದೆ. ಜೇನು ತುಟಿಯನ್ನು 'ಪಿಂಕಿ' ಯನ್ನಾಗಿಸುತ್ತದೆ.
ನೀರು ಕುಡಿಯರಿ: ದೇಹದಲ್ಲಿ ನೀರಿನ ಕೊರತೆ ಕಪ್ಪುತುಟಿಗೆ ಕಾರಣ! ಆದ್ದರಿಂದ ಹೆಚ್ಚಿನ ನೀರಿನ ಸೇವನೆ ಇದನ್ನ ತಡೆಯುತ್ತದೆ.
ಬೀಟ್‌ರೂಟ್: ಇದೊಂದು ಉತ್ತಮವಾದ ಮನೆಯಲ್ಲಿ ದೊರೆಯುವ ಸೌಂದರ್ಯವರ್ಧಕ. ಬೀಟ್‌ರೂಟ್‌ನ ಒಂದು ತುಂಡನ್ನು  ತುಟಿಯ ಮೇಲೆ ಉಜ್ಜುವುದರಿಂದ ನಿಮ್ಮ ತುಟಿ ಪಿಂಕೀಶ್ ಆಗುತ್ತದೆ.
ಬಾದಾಮಿ ಎಣ್ಣೆ: ಪ್ರತಿ ದಿನ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ಬಳಸುವುದರಿಂದ ತುಟಿ ಕೋಮಲವಾಗುತ್ತದೆ.
ಸೌತೇಕಾಯಿ: ಇದು ಕಪ್ಪು ತುಟಿಗೆ ಅತ್ಯುತ್ತಮ ಪರಿಹಾರ. ತುಟಿಯ ಹೊಳಪನ್ನು ನೀಡುವುದರ ಜೊತೆಗೆ ಬಣ್ಣವನ್ನ ಬದಲಾಯಿಸುತ್ತದೆ.
ಲಿಂಬೆಹಣ್ಣು: ಇದು ನೈಸರ್ಗಿಕವಾದ ಕಾಂತಿಯನ್ನ ನೀಡುವುದಲ್ಲದೆ, ಕಪ್ಪು ತುಟಿಗೆ ಪರಿಣಾಮಕಾರಿ. ಚರ್ಮದ ಹೊಳಪು , ಸುಕ್ಕು, ಕಪ್ಪು ಚುಕ್ಕೆ, ಕಲೆಗಳನ್ನ ಹೊಗಲಾಡಿಸಲು ಲಿಂಬೆಯನ್ನು ಬಳಸಲಾಗುತ್ತದೆ. ವಾರದಲ್ಲಿ ಎರಡ್ಮೂರು ಬಾರಿ ಸಕ್ಕರೆಯೊಂದಿಗೆ ಲಿಂಬೆ ತುಂಡನ್ನು ಬೆರೆಸಿ ಉಜ್ಜುವುದರಿಂದ ಅಧಿಕ ಪರಿಣಾಮ ಬೀರುತ್ತದೆ.
ಗುಲಾಬಿ: ಇದು ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ಗುಲಾಬಿಯ ಪಕಳೆಯನ್ನು ಜೇನು ಮತ್ತು ಬೆಣ್ಣೆಯೊಂದಿಗೆ ಪೇಸ್ಟ್ ಮಾಡಿ ವಾರದಲ್ಲಿ ಎರಡ್ಮರೂ ಬಾರಿ ಬಳಸಿ.
ಸಾಸಿವೆ ಎಣ್ಣೆ: ಪ್ರತಿರಾತ್ರಿ ಸಾಸಿವೆ ಎಣ್ಣೆಯಿಂದ ತುಟಿಗಳನ್ನು ಮಸಾಜ್ ಮಾಡುವುದು ಹಾಗೆಯೇ ವಾರದಲ್ಲಿ ಒಮ್ಮೆ, ತಿಂಗಳಿಗೆ ಎರಡು ಬಾರಿ ಈ ಎಣ್ಣೆಯನ್ನು ಸಕ್ಕರೆಯೊಂದಿಗೆ ಬೆರೆಸಿ ತುಟಿಗಳಿಗೆ ಬಳಸುವುದರಿಂದ ತುಟಿಗಳು ಕೋಮಲವಾಗಿರುತ್ತದೆ.
ಸಕ್ಕರೆ: ತುಟಿಗಳಲ್ಲಿನ ಸತ್ತ ಜೀವಕೋಶಗಳನ್ನ ಹೊರ ತೆಗೆಯಲು ಸಹಾಯಕ. ವಾರದಲ್ಲಿ 1 ಬಾರಿ ಸಕ್ಕರೆ ಮತ್ತು ಬೆಣ್ಣೆ ಮಿಶ್ರಣ ಅಥವಾ ಸಕ್ಕರೆ ಜೊತೆ ಜೇನು, ಬಾದಾಮಿ ಎಣ್ಣೆಯನ್ನು ಬೆರೆಸಿ ವಾರಕ್ಕೊಮ್ಮೆ ಮಸಾಜ್ ಮಾಡುವುದರಿಂದ ತುಟಿ ಕೋಮಲ ಮತ್ತು ಹೊಳಪನ್ನ ಹೊಂದುತ್ತದೆ.
ದಾಳಿಂಬೆ: ದಾಳಿಂಬೆ ಬೀಜ, ರೋಜ್‌ವಾಟರ್, ಹಾಲಿನ ಮಿಶ್ರಣ ಪೇಸ್ಟ್ ಮಾಡಿ 2ರಿಂದ 3 ನಿಮಿಷ ಮಸಾಜ್ ಮಾಡಿ, ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಜೊತೆಗೆ ಆಗಾಗ ದಾಳಿಂಬೆ ರಸ, ಕ್ಯಾರೆಟ್, ಬೀಟ್‌ರೂಟ್ ರಸದಿಂದ ಮಸಾಜ್ ಮಾಡುವುದರಿಂದ ತುಟಿ ಪಿಂಕಿಶ್ ಆಗುತ್ತದೆ.
ಜೇನು ಮತ್ತು ಬಾದಾಮಿ ಎಣ್ಣೆ: ಒಂದು ಚಮಚ ಜೇನು, ಒಂದು ಚಮಚ ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿ ತುಟಿಗಳಿಗೆ ಹಚ್ಚಿ ಅರ್ಧ ಗಂಟೆ ನಂತರ ತೊಳೆಯುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಕಪ್ಪು ತುಟಿ ಹಲವರ ಸಮಸ್ಯೆ. ಮಹಿಳೆಯರು ತಮ್ಮ ತುಟಿಗಳ ಸೌಂದರ್ಯದ ಕಾಳಜಿಗೆ ಅನೇಕ ಕಾಸ್ಮೆಟಿಕ್‌ಗಳನ್ನು ಬಳಸುತ್ತಾರೆ. ಆದರೆ, ಇವುಗಳಿಂದ ಅಡ್ಡಪರಿಣಾಮಗಳೇ ಹೆಚ್ಚು. 'ಲಿಪ್‌ಸ್ಟೀಕ್‌' ಮತ್ತು 'ಲಿಪ್‌ಗ್ಲಾಸ್‌'ಗಳು ತುಟಿಯನ್ನ ಒಣಗಿಸಿ ಕಪ್ಪಾಗಿಸುತ್ತವೆ. ಯಾವುದೇ ಅಡ್ಡಪರಿಣಾವಿಲ್ಲದೆಯೇ ಮಹಿಳೆಯರು ತಮ್ಮ ಕಪ್ಪು ತುಟಿಗಳನ್ನು ಕೆಂದುಟಿಗಳನ್ನಾಗಿ ರೂಪಿಸಿಕೊಳ್ಳಬಹುದು. ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನು ಬಳಸಿಕೊಂಡು ಚಂದನೆ ತುಟಿಯ ಚೆಲುವೆಯಾರಾಗಬಹುದು.

- ಕುಸುಮಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement