ನೀವು ನೈಟ್ ಶಿಫ್ಟ್‌ಗಳಲ್ಲಿ ಕೆಲಸ ಮಾಡ್ತೀರಾ? ಹಾಗಾದರೆ ನಿಮ್ಮ ಮೆದುಳು ನಿಮ್ಮ ವಯಸ್ಸಿಗಿಂತ 6 ವರ್ಷ ಹೆಚ್ಚು ವಯಸ್ಸಾದಂತೆ ಕಾರ್ಯವೆಸಗಿ ಮೆದುಳನ್ನು ಮಂಕಾಗಿಸುವ ಸಾಧ್ಯತೆಯಿದೆ ಎಂದು ಅಕ್ಯಿಪೇಷನಲ್ ಆ್ಯಂಡ್ ಎನ್‌ವಿರಾನ್‌ಮೆಂಟಲ್ ಮೆಡಿಸಿನ್ ಜರ್ನಲ್ ತಮ್ಮ ಕಲಿಕಾ ವರದಿಯಲ್ಲಿ ಉಲ್ಲೇಖಿಸಿದೆ.
ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವವರು ಅದನ್ನು ನಿಲ್ಲಿಸಿ ನಂತರ ಸಾಮಾನ್ಯ ಪಾಳಿಯಲ್ಲಿ ಕೆಲಸ ಮಾಡಲು ತೊಡಗಿದರೂ, ದೇಹ ಸಮತೋಲನಕ್ಕೆ ಬರು 5 ವರ್ಷಗಳೇ ಬೇಕಾಗುತ್ತದೆ.
ಹೀಗೆ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವವರಿಗೆ ನಿದ್ರಾಹೀನತೆ ಸಮಸ್ಯೆ ಇದ್ದು, ಬುದ್ಧಿಮಾಂದ್ಯತೆಯಿಂದ ಬಳಲುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ.
ದೇಹದ ಗಡಿಯಾರಕ್ಕೆ ವಿರುದ್ಧವಾಗಿ ಕೆಲಸ ಮಾಡುವುದರಿಂದ ಸ್ತನ ಕ್ಯಾನ್ಸರ್ ಮತ್ತು ಬೊಜ್ಜು ಬರುತ್ತದೆ. ಮಾತ್ರವಲ್ಲದೆ ರಾತ್ರಿ ಪಾಳಿಯ ದುಡಿತ ಮನಸ್ಸಿನ ಮೇಲೆ ಘಾಸಿಯನ್ನುಂಟುಮಾಡುತ್ತದೆ ಎಂದು ಸ್ವಾನ್ಸಿಯಾ ಮತ್ತು ಟೌಲೋಸ್ ವಿಶ್ವವಿದ್ಯಾನಿಲಯದ ಅಧ್ಯಯನ ತಂಡ ಹೇಳಿದೆ.