ಗಂಡ ಸೋಮಾರಿ, ಮಲ್ಕೊಂಡ್ರೆ ಏಳೋದೇ ಇಲ್ಲ ಅನ್ನೋ ಕಂಪ್ಲೇಂಟುಗಳನ್ನೆಲ್ಲ ಇನ್ನು ಹೆಂಡ್ತಿಯರು ಡಸ್ಟ್‌ಬಿನ್‌ಗೆ ಬಿಸಾಕಬಹುದು. ಯಾಕೆ ಗೊತ್ತಾ? ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ನಿದ್ದೆ ಬೇಕೆಂಬ ಸತ್ಯವನ್ನು ಒಂದು ಸಮೀಕ್ಷೆ ಹೇಳಿದೆ.
ಈ ಲೆಕ್ಕದಲ್ಲಿ ಮಹಿಳೆಯರು ವರ್ಷದಲ್ಲಿ 15 ದಿನ ಹೆಚ್ಚು ನಿದ್ದೆ ಮಾಡುತ್ತಾರಂತೆ. ಸುಮಾರು 2,000 ಮಹಿಳೆಯರು ಪಾಲ್ಗೊಂಡಿದ್ದ ಸಮೀಕ್ಷೆಯನ್ನು ಯಾರು ಒಪ್ಪಿಕೊಳ್ಳುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ, ಪುರುಷರಂತೂ ಒಪ್ಪುತ್ತಾರೆ.
ಬ್ರಿಟನ್ನಿನ ಮಹಿಳೆಯರು ಈ ಅಭಿಪ್ರಾಯವನ್ನು ಮಂಡಿಸಿದ್ದಾರೆ. ನಿದ್ದೆಯಿಲ್ಲದ ಹದಗೆಟ್ಟಿದ್ದೇವೆ. ನಮಗೆ ಕನಿಷ್ಠ ಏಳೂವರೆ ಗಂಟೆ ನಿದ್ದೆ ಅವಶ್ಯ. ಆದರೆ ಕೇವಲ ಸರಾಸರಿ 6 ಗಂಟೆ 40 ನಿಮಿಷ ಮಾತ್ರ ನಿದ್ದೆ ಸಾಧ್ಯವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಿದ್ದೆ ಕೊರತೆಯಿಂದಾಗಿ ಸ್ಥೂಲಕಾಯ, ಮಧಮೇಹ, ಕ್ಯಾನ್ಸರ್ ಮತ್ತು ರೋಗನಿರೋಧಕ ಶಕ್ತಿ ಕುಂದುವಂಥ ಗಂಭೀರ ಸಮಸ್ಯೆಗಳಿಗೆ ಮಹಿಳೆಯರು ಕಾರಣರಾಗುತ್ತಿದ್ದಾರೆ ಎನ್ನುವುದು ಮತ್ತೊಂದು ಆತಂಕದ ಸಂಗತಿ. ಸರಿಯಾಗಿ ನಿದ್ದೆ ಇಲ್ಲಿದಿರುವುದು ಚರ್ಮದ ವಯಸ್ಸನ್ನು ಹೆಚ್ಚಾಗಿಸುತ್ತದೆ. ಸುಕ್ಕಾಗುವುದು ಮುಂತಾದವುಗಳಿಗೆ ಕಾರಣವಾಗುತ್ತದೆ.
ಸಮೀಕ್ಷೆಯ ಹೈಲೈಟ್ ಇಷ್ಟೇ...
- ಪುರುಷರು ಸರಾಸರಿ ನಿತ್ಯ 6 ಗಂಟೆ 3 ನಿಮಿಷ ನಿದ್ರಿಸುತ್ತಾರಂತೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರು 40 ನಿಮಿಷ ಕಡಿಮೆ ನಿದ್ದೆ ಮಾಡುತ್ತಾರೆ.
- ಮಹಿಳೆಯರಿಗೆ ವಾಸ್ತವವಾಗಿ ಬೇಕಿರುವುದು 7 ಗಂಟೆ 23 ನಿಮಿಷ ನಿದ್ದೆ. ಒಟ್ಟಾರೆ 1 ಗಂಟೆ 2 ನಿಮಿಷಗಳ ಕೊರತೆ ಅನುಭವಿಸುತ್ತಿದ್ದಾರಿವರು.
- ಬ್ರಿಟನ್ನಿನ ಅರ್ಧಕ್ಕಿಂತಲೂ ಕಡಿಮೆ ಜನ ಫೋನ್ ಅಲಾರ್ಮ್‌ಗೆ ಎಚ್ಚೆತ್ತುಕೊಳ್ಳುತ್ತಾರಂತೆ. 5ನೇ 1 ಭಾಗದಷ್ಟು ಜನ ತಾವಾಗಿಯೇ ಎದ್ದೇಳುತ್ತಾರಂತೆ. ಉಳಿದವರನ್ನು ಸಂಗಾತಿ, ಸಾಕುಪ್ರಾಣಿಗಳು ಅಥವಾ ಮಕ್ಕಳು ಎಬ್ಬಿಸುತ್ತಾರಂತೆ
- ಮಹಿಳೆಯರಿಗಿಂತಲೂ ಪುರುಷರು, ತಮ್ಮ ಸಂಗಾತಿ ಎಚ್ಚರಿಸಿದಾಗ ಏಳುತ್ತಾರಂತೆ. ಶೇ.11.5 ಪುರುಷರು ಮತ್ತು ಶೇ.9 ಮಹಿಳೆಯರು ಈ ಗುಂಪಿಗೆ ಸೇರಿದ್ದಾರೆ. ಮಕ್ಕಳ ಕಾರಣದಿಂದಾಗಿ ಎಚ್ಚರಗೊಳ್ಳುವ ಮಹಿಳೆಯರ ಪ್ರಮಾಣ ಪುರುಷರಿಗಿಂತ ದುಪ್ಪಟ್ಟು.
- ಸಂಗಾತಿಯ ಗೊರಕೆ ಕಾರಣ ಹತ್ತರಲ್ಲಿ ಒಬ್ಬರು ನಿದ್ದೆಗೆ ದೂರವಾಗಿದ್ದಾರೆ. ಶೇ.7 ಮದಿ ತಮ್ಮ ಸ್ವಂತ ಗೊರಕೆ ಕಾರಣ, ನಿದ್ದೆಯಲ್ಲಿ ಉಸಿರು ಗಟ್ಟಿದಂತಾಗಿ ಎಚ್ಚರದಿಂದ ಇದ್ದದ್ದು ಕಂಡುಬಂದಿದೆ. ಆದರೆ ಸಂಗಾತಿಯ ಗೊರಕೆ ಕಾರಣ ನಿದ್ದೆ ಬಾರದೆ ಹಿಂಸೆ ಅನುಭವಿಸುವವರಲ್ಲಿ ಮಹಿಳೆಯರೇ ಮುಂದಿದ್ದಾರೆ. ಶೇ.15.5 ಮಹಿಳೆಯರು ಈ ಗುಂಪಿಗೆ ಸೇರಿದ್ದಾರೆ. ಈ ಗುಂಪಿನಲ್ಲಿ ಪುರುಷರ ಪ್ರಮಾಣ ಶೇ.6 ಮಾತ್ರ!
- ಬೆಳಗ್ಗೆ ಎದ್ದು ಶೌಚಾಲಯಕ್ಕೆ ದೌಡಾಯಿಸಬೇಕಲ್ಲ. ಆ ಕಾರಣದಿಂದಾಗಿ ನಿದ್ದೆಯಿಂದ ಎಚ್ಚರವಾಗುತ್ತದೆ ಎಂದು ನಾಲ್ವರಲ್ಲಿ ಒಬ್ಬರು ಹೇಳಿದ್ದಾರೆ.
-ಪ್ರೇಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics