ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಮಕ್ಕಳಿಗೆ ಉಚಿತ ಶಸ್ತ್ರ ಚಿಕಿತ್ಸೆ

Lingaraj Badiger
Updated On : 17 Oct 2014, 12:32 pm

ಬೆಂಗಳೂರು: ಟ್ರಿನಿಟಿ ಕೇರ್ ಫೌಂಡೇಶನ್ ವತಿಯಿಂದ ಮುಖದಲ್ಲಿ ನ್ಯೂನತೆಯಿರುವ ಮಕ್ಕಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಸೀಳುತುಟಿ ಮತ್ತು ಸೀಳು ಅಂಗಳದ ಶಸ್ತ್ರ ಚಿಕಿತ್ಸೆ, ಹಿಂದಿನ ಸೀಳು ತುಟಿ ಶಸ್ತ್ರ ಚಿಕಿತ್ಸೆಯ ಪರಿಣಾಮವಾಗಿ ಉಳಿದ ತುಟಿಯ ಕಲೆಯನ್ನು ಸರಿಪಡಿಸುವ ಶಸ್ತ್ರ ಚಿಕಿತ್ಸೆ, ಹಿಂದಿನ ಸೀಳು ಅಂಗಳದ ಶಸ್ತ್ರ ಚಿಕಿತ್ಸೆಯ ಪರಿಣಾಮವಾಗಿ ಉಳಿದ ಅಂಗಳದಲ್ಲಿನ ರಂಧ್ರವನ್ನು ಮುಚ್ಚುವ ಶಸ್ತ್ರ ಚಿಕಿತ್ಸೆ, ಮೂಗಿನ ವಿಕಲಾಂಗತೆಯನ್ನು ಸರಿಪಡಿಸುವ ಶಸ್ತ್ರ ಚಿಕಿತ್ಸೆ, ಹುಟ್ಟಿನಿಂದಲೇ ಕಂಡುಬರುವ ಮುಖದ ವಿಕಲಾಂಗತೆ ಸೇರಿದಂತೆ ಹುಟ್ಟಿನಿಂದಲೇ ಅಥವಾ ಚಿಕ್ಕ ವಯಸ್ಸಿನಿಂದಲೇ ಬಾಯಿ ತೆರೆಯಲು ತೊಂದರೆ ಇದ್ದಲ್ಲಿ ಅದರ ಪರಿಣಾಮವಾಗಿ ಚಿಕ್ಕ ಕೆಳದವಡೆ ಇರುವ ಮಕ್ಕಳಿಗೆ ಟ್ರಿನಿಟಿ ಕೇರ್ ಫೌಂಡೇಶನ್ ವತಿಯಿಂದ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.

ಉಚಿತ ಶಸ್ತ್ರ ಚಿಕಿತ್ಸೆಯ ಅಗತ್ಯವಿರುವವರು ಅಕ್ಟೋಬರ್ 18 ಮತ್ತು ಅ 19 ರಂದು ಬೆಂಗಳೂರಿನ ಶಿವಾನಂದ ಸರ್ಕಲ್ನಲ್ಲಿರುವ ಮಲ್ಲಿಗೆ ಆಸ್ಪತ್ರೆಯಲ್ಲಿ ನಡೆಯಲಿರುವ ಉಚಿತ ತಪಾಸಣಾ ಶಿಬಿರದಲ್ಲಿ ಹಾಜರಿರಬೇಕು. ಅ. 20 ರ ಈ ಶಿಬಿರದ ಮೂಲಕ ಆಯ್ಕೆಯಾದ ಅಭ್ಯಥರ್ಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪಕರ್ಿಸಿ - ಡಾ. ಥೋಮಸ್ - 9880394959

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement