ಉಸಿರಿನ ಕಸರತ್ತು
ಒತ್ತಡ ನಿವಾರಿಸಿಕೊಳ್ಳುವಲ್ಲಿ, ಹಲವು ಕಾಯಿಲೆಗಳನ್ನು ತಡೆಯುವಲ್ಲಿ ಪ್ರಾಣಯಾಮ...
ಒತ್ತಡ ನಿವಾರಿಸಿಕೊಳ್ಳುವಲ್ಲಿ, ಹಲವು ಕಾಯಿಲೆಗಳನ್ನು ತಡೆಯುವಲ್ಲಿ ಪ್ರಾಣಯಾಮದ ಲಾಭಗಳು ಹಲವು. ಪ್ರಾಣಾಯಾಮ ಮಾಡುವಾಗ ಗಮನದಲ್ಲಿರಬೇಕಾದ ಅಂಶಗಳು, ಲಾಭಗಳು ಇಲ್ಲಿವೆ;
- ಪ್ರಾಣಾಯಾಮ ಮಾಡುವಾಗ ಬ್ರಾಹ್ಮಿ ಮೂಹೂರ್ತದಲ್ಲಿ ಮಾಡಿದರೆ ಒಳಿತು.
- ವಾತಾವರಣ ಶಾಂತವಾಗಿರಬೇಕು.
- ದಿನಾಲೂ ಖಾಲಿ ಹೊಟ್ಟೆಯಲ್ಲಿ ಅಥವಾ ಆಹಾರ ಸೇವಿಸಿದ 4-5 ಗಂಟೆಗಳ ನಂತರ ಒಂದೇ ಸಮಯದಲ್ಲೇ ಅಭ್ಯಸಿಸಿದರೆ ಪ್ರಭಾವ ಹೆಚ್ಚು.
- ಸ್ನಾನ ಮಾಡಿದರೆ ಶರೀರ ಹೇಗೆ ಶುದ್ಧಿಯಾಗುತ್ತದೋ ಹಾಗೆ ದೇಹದ ಆಂತರಿಕ ಭಾಗವನ್ನು ಚುರುಕುಗೊಳಿಸುವ ಶಕ್ತಿ ಪ್ರಾಣಾಯಾಮಕ್ಕಿದೆ.
- ಇದರಿಂದ ಮನಸ್ಸು ಶುದ್ಧಗೊಂಡು, ಉದ್ವೇಗ ನಿವಾರಣೆಯಾಗುತ್ತದೆ. ಏಕಾಗ್ರತೆಯೂ ಹೆಚ್ಚುತ್ತದೆ.
- ಇದರಿಂದ ಪಿತ್ತಕೋಶ, ಹೊಟ್ಟೆ, ಮೂತ್ರಪಿಂಡಗಳು, ಕರುಳು, ರಕ್ತ ನಾಳಗಳು, ಶ್ವಾಸಕೋಶ ಸೇರಿದಂತೆ ದೇಹದ ಎಲ್ಲ ಭಾಗಗಳೂ ಚುರುಕಾಗುತ್ತವೆ.
- ನಿರಂತರ ಅಭ್ಯಾಸದಿಂದ ಅಧ್ಯಾತ್ಮಿಕವಾಗಿಯೂ ಲಾಭವಾಗಬಲ್ಲದು.
- ಪ್ರಾಣಾಯಾಮ ಹಾಗೂ ಯೋಗವನ್ನು 12 ವರ್ಷ ಮೇಲ್ಪಟ್ಟವರೆಲ್ಲರೂ ಮಾಡಬಹುದು.
ಹೇಗೆ ಆರಂಭಿಸಬೇಕು?
-ಜಯಶ್ರೀ ವಿಜಯೇಂದ್ರ