ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

'ಬ್ರೆಡ್'ನ್ನು ತಿನ್ನದೇ ಇರಲು ನಾಲ್ಕು ಕಾರಣ

ಆಧುನಿಕ ಜೀವನ ಶೈಲಿಯಲ್ಲಿ ಬ್ರೆಡ್ನ್ನು ದೈನಂದಿನ ಬ್ರೇಕ್ ಫಾಸ್ಟ್ ಆಗಿಬಿಟ್ಟಿದೆ. ಆದರೆ ಇದು...

Mainashree
Updated On : 23 Oct 2014, 1:32 am

ಆಧುನಿಕ ಜೀವನ ಶೈಲಿಯಲ್ಲಿ ಬ್ರೆಡ್ನ್ನು ದೈನಂದಿನ ಬ್ರೇಕ್ ಫಾಸ್ಟ್ ಆಗಿಬಿಟ್ಟಿದೆ. ಆದರೆ ಇದು ಆರೋಗ್ಯಕ್ಕೆ ಅಷ್ಟೇ ಹಾನಿಕರ!

ಪ್ರತಿನಿತ್ಯ ತಿಂಡಿಯ ಬದಲು ಅಥವಾ ಮಧ್ಯಾಹ್ನದ ಊಟದ ಬದಲು ಬ್ರೆಡ್ ಸೇವಿಸುವುದು ಸಹಜವಾಗಿದೆ. ಆದರೆ ಇದನ್ನು ತಿನ್ನದೇ ಇರಲು ನಾಲ್ಕು ಕಾರಣಗಳು ಇಂತಿವೆ.

ಬ್ರೆಡ್ ಪೌಷ್ಟಿಕಾಂಶವನ್ನು ಒಳಗೊಂಡಿಲ್ಲ:
ಬ್ರೇಡ್ ಅಥವಾ ಬ್ರೆಡ್ ಒಳಗೊಂಡಂತಹ ಯಾವುದೇ ತಿಂಡಿಗಳನ್ನು ತೆಗೆದುಕೊಳ್ಳುವುದರಿಂದ ಪೌಷ್ಟಿಕಾಂಶದ ಕೊರತೆ ಎದುರಿಸಬೇಕಾಗುತ್ತದೆ.

ಉಪ್ಪಿನ ಬಳಕೆ ಹೆಚ್ಚು:
ಸೂಪರ್ ಮಾರ್ಕೆಟ್ಗಳಲ್ಲಿ ಸಿಗುವ ಬ್ರೆಡ್ಗಳಲ್ಲಿ ಉಪ್ಪು ಹೆಚ್ಚಾಗಿ ಬಳಕೆ ಮಾಡಲಾಗಿರುತ್ತದೆ. ಇದನ್ನು ತಿನ್ನುವುದರಿಂದ ದೇಹದಲ್ಲಿರುವ ಸೋಡಿಯಂ ಅನ್ನು ಕಡಿಮೆಮಾಡುತ್ತದೆ.

ತೂಕ ಹೆಚ್ಚಿಸುತ್ತದೆ:
ಸ್ವೀಟ್ ಬ್ರೆಡ್ ಸೇರಿದಂತೆ ಮೈದಾ ಹಿಟ್ಟಿನಿಂದ ಮಾಡಿದಂತ ಬ್ರೆಡ್ನ್ನು ಸೇವಿಸುವುದರಿಂದ ದೇಹದ ತೂಕ ಹೆಚ್ಚುತ್ತದೆ.

ಆರೋಗ್ಯಕರವಲ್ಲ:
ಬೆಳಗ್ಗಿನ ತಿಂಡಿ ಸಮಯದಲ್ಲಿ ಅಥವಾ ಊಟದ ಸಮಯದಲ್ಲಿ ಬ್ರೆಡ್ನ್ನು ತಿಂದರೆ, ಹಸಿವನ್ನು ನೀಗಿಸುವುದಿಲ್ಲ. ಬ್ರೆಡ್ನ್ನು ಎಷ್ಟೇ ಸೇವಿಸಿದರು ಹಸಿವು ಹೆಚ್ಚಾಗುತ್ತದೆ. ಇದು ದೈನಂದಿನ ತಿಂಡಿಯಾದರೆ ಆರೋಗ್ಯ ಹಾನಿಕರವಾಗಲಿದೆ. ಇದು ತಕ್ಷಣಕ್ಕೆ ಹಸಿವು ನೀಗಿಸುತ್ತದೆ ಎಂದೆನಿಸಿದಾದರೂ, ಕೆಲವೇ ನಿಮಿಷಗಳಲ್ಲಿ ಮತ್ತೆ ಹಸಿವು ಉಂಟಾಗುತ್ತದೆ.

ಬ್ರೇಡ್ ತಿನ್ನಲು ಕೆಲವು ಟಿಪ್ಸ್
ಬ್ರೆಡ್ ಇಷ್ಟ ಪಡುವ ಪ್ರಿಯರು, ಧಾನ್ಯಗಳಿಂದ ತಯಾರಿಸುವಂತಹ ಅಥವಾ ಗೋಧಿ ಬ್ರೆಡ್ನ್ನು ತಿನ್ನಬಹುದು.
ಮನೆಯಲ್ಲಿ ಬ್ರೆಡ್ ತಯಾರಿಸಿ, ಸಕ್ಕರೆ ಮತ್ತು ಉಪ್ಪು ರಹಿತ ಗೋಧಿ ಹಿಟ್ಟಿನ ಬ್ರೆಡ್ ತಯಾರಿಸಿ ಬ್ರೇಕ್ ಫಾಸ್ಟ್ಗೆ ಬಳಸಬಹುದು. ಪ್ರತಿನಿತ್ಯ ಬ್ರೆಡ್ನ್ನು ಆಹಾರವನ್ನಾಗಿ ತೆಗೆದುಕೊಳ್ಳುವುದು ಆರೋಗ್ಯ ಹಾನಿಕರ. ಆದರೆ, ಅಪರೂಪಕ್ಕೆ ಬ್ರೆಡ್ನ್ನು ಸೇವಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement