ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಗೂಗಲ್ ಡೂಡಲ್: ಪೋಲಿಯೋ ಲಸಿಕೆ ರೂವಾರಿ ಜೋನಸ್ ಸಾಲ್ಕ್ ಅವರ ೧೦೦ನೆ ಜನ್ಮ ದಿನಾಚರಣೆ

ತನ್ನ ಮುಖಪುಟದ ಡೂಡಲ್ ನೊಂದಿಗೆ ಗೂಗಲ್, ಮೊದಲ ಯಶಸ್ವಿ ಪೋಲಿಯೊ ಲಸಿಕೆ ಕಂಡು ಹಿಡಿದ ಜೋನಸ್ ಸಾಲ್ಕ್ ...

Updated On : 28 Oct 2014, 10:16 am

ತನ್ನ ಮುಖಪುಟದ ಡೂಡಲ್ ನೊಂದಿಗೆ ಗೂಗಲ್, ಮೊದಲ ಯಶಸ್ವಿ ಪೋಲಿಯೊ ಲಸಿಕೆ ಕಂಡು ಹಿಡಿದ ಜೋನಸ್ ಸಾಲ್ಕ್ ಅವರು ಜನಿಸಿದ ೧೦೦ ನೆ ವರ್ಷದ ಸಂಭ್ರಮ ಹಂಚಿಕೊಂಡಿದೆ.

ಈ ಹೃದಯ ಮಿಡಿಯುವ ಚಿತ್ರದಲ್ಲಿ ಮಕ್ಕಳು "ಧನ್ಯವಾದ ಡಾ. ಸಾಲ್ಕ್" ಎಂಬ ಹಲ ಗೆಯನ್ನು ಹಿಡಿದು ಸಂಭ್ರಮಿಸುತ್ತಿರುವ ಚಿತ್ರ ಇದೆ.

ಅವರು ಲಸಿಕೆ ಕಂಡು ಹಿಡಿಯುವ ಮುಂಚೆ ಅಮೆರಿಕಾದಲ್ಲಿದ್ದ ಪೋಲಿಯೋ ಪೀಡಿತರ ಸಂಖ್ಯೆ ೪೫ ಸಾವಿರ. ೧೯೬೨ ರಲ್ಲಿ ಈ ಸಂಖ್ಯೆ ೯೧೦ ಕ್ಕೆ ಕುಸಿದಿತ್ತು.

ಭಾರತದಲ್ಲೂ ಪೋಲಿಯೊ ಪೀಡಿತರ ಸಂಖ್ಯೆ ಅಸಂಖ್ಯಾತವಾಗಿತ್ತು. ಆದರೆ ಸರ್ಕಾರಗಳು ನಡೆಸಿದ ಪೋಲಿಯೊ ಲಸಿಕೆ ಕಾರ್ಯಕ್ರಮಗಳಿಂದ ಅದು ಗಣನೀಯವಾಗಿ ಇಳಿಮುಖ ಕಂಡು ಇತ್ತೀಚೆಗಷ್ಟೆ ಭಾರತ ದೇಶವನ್ನು ಪೋಲಿಯೋ ಮುಕ್ತ ದೇಶವಾಗಿ ಘೋಷಿಸಲಾಗಿದೆ.

ಎಷ್ಟೋ ಮಕ್ಕಳ ಅಂಗವಿಕಲತೆಯನ್ನು ತಡೆಗಟ್ಟಿದ ಈ ಲಸಿಕೆಯನ್ನು ಎಂದಿಗೂ ಪೇಟೆಂಟ್ ಮಾಡಿಕೊಳ್ಳದ ಸಾಲ್ಕ್, ಇದು ಹೆಚ್ಚೆಚ್ಚು ವಿತರಣೆಯಾಗಲು ಸಹಾಯ ಮಾಡಿದರು. ಇವರಿಗೆ ಒಂದು ಸಲಾಂ!

ಸಾಲ್ಕ್ ೨೩ ಜೂನ್ ೧೯೯೫ ರಲ್ಲಿ ತಮ್ಮ ೮೦ ನೆ ವಯಸ್ಸಿನಲ್ಲಿ ದಿವಂಗತರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement