ಫಿಟ್ಟಾಗಿರಿ ನೀವು ಗೆಲ್ಲಬಲ್ಲಿರಿ!
ಫಿಟ್ಸ್ ಇಂದು ಸಾಮಾನ್ಯ ಜನರಿಗೆಲ್ಲ ಅರಿವಿರುವ ತೊಂದರೆ. ಐಸಾಕ್ ನ್ಯೂಟನ್, ಲೆನಿನ್, ಲಿಯೊನಾರ್ಡೋ ಡಾವಿಂಚಿ, ನೆಪೋಲಿಯನ್, ಜ್ಯೂಲಿಯಸ್ ಸೀಜರ್, ಅಲೆಕ್ಸಾಂಡರ್, ಸಾಕ್ರೆಟಿಸ್, ಜೋನ್ ಆಫ್ ಆರ್ಕ್, ಚಾರ್ಲ್ಸ್ ಡಿಕನ್ಸ್, ಬೈರನ್, ಮೊಪಾಸಾ, ಮೈಕೆಲ್ಯಾಂಜಲೋ, ವ್ಯಾನ್ಗೋ, ನೋಬಲ್, ದಾಸ್ತೋವಸ್ಕಿ, ಅಗಾಥ ಕ್ರಿಸ್ಟಿ, ಪೈತಾಗರಸ್, ಅರಿಸ್ಟಾಟಲ್ ಇವರೆಲ್ಲರನ್ನ್ನೂ ಕಾಡಿತ್ತು. ಆದರೆ ಅವರೆಲ್ಲರೂ ಅಪಸ್ಮಾರವನ್ನ್ನು ಗೆದ್ದವರು. ಯಾವುದೇ ರೋಗಕ್ಕೂ ಹೆದರಬೇಕಾಗಿಲ್ಲವೆಂದು ಸಾರಿ ಹೇಳುವ ಸಾಧನೆ ಮಾಡಿದವರು. ಹೆದರುವುದರಿಂದ ರೋಗ ವಾಸಿಯಾಗದು. 'ಜೋ ಡರ್ ಗಯಾ, ಸಮ್ಜೋ ವೋ ಮರ್ ಗಯಾ!'.
ಅಪಸ್ಮಾರವೆಂದರೆ ನರಮಂಡಲದಲ್ಲಿನ ಕೆಲವು ಬದಲಾವಣೆಗಳಿಂದ ಆಗುವ ತೊಂದರೆ. ಸಾಮಾನ್ಯವಾಗಿ ಎರಡು ಬಾರಿ ಅಟ್ಯಾಕ್ ಆದ ನಂತರ ಇದನ್ನ್ನು ಗುರುತಿಸಲಾಗುತ್ತದೆ. ಇದಕ್ಕೆ ಯಾವುದೇ ಪಕ್ಕಾ ಕಾರಣಗಳು ತಿಳಿದಿಲ್ಲ. ಹೆಚ್ಚಿನ ವೇಳೆ ಮೆದುಳಿಗೆ ಆಗಿರುವ ಪೆಟ್ಟು ಅಥವಾ ಕೌಟುಂಬಿಕ ಹಿನ್ನ್ನೆಲೆಯಿಂದ ಉಂಟಾಗಿರಬಹುದು. ಇದು ಮಾರಣಾಂತಿಕ ತೊಂದರೆಯಲ್ಲ. ವಾಸಿ ಮಾಡಬಹುದು. ಅಪಸ್ಮಾರ ಶಿಶುವಿನಿಂದ ಹಿಡಿದು ವಯಸ್ಕರವರೆಗೆ ಯಾರನ್ನಾದರೂ ಕಾಡಬಹುದು.
ಮನುಷ್ಯನ ಮೆದುಳಿನ ತಂತುಗಳ ನಡುವೆ ಒಂದು ಸೂಕ್ಷ್ಮ ಸಮತೋಲನವಿರುತ್ತದೆ. ಮತ್ತು ಅದನ್ನ್ನು ಸೀಮಿತಗೊಳಿಸುವ ಜಾಗಗಳೂ ಇರುತ್ತವೆ. ಆಘಾತದ ಸಮಯದಲ್ಲಿ ಈ ಸೀಮೆಗಳು ಮುರಿದು ಬೀಳುತ್ತವೆ. ಅಸಹಜತೆ ಕಂಡು ಬಂದಾಗ, ಇದು ಎರಡು ಮೂರು ಬಾರಿ ಆದಾಗ ಅಪಸ್ಮಾರವೆಂದು ಗುರುತಿಸಬಹುದು.
ರೋಗಪತ್ತೆ ಇ ಇ ಜಿ (ಎಲೆಕ್ಟ್ರೋ ಎನ್ಸೆಫಲೋಗ್ರಾಮ್)
ಈ ಪರೀಕ್ಷೆಯಲ್ಲಿ ಕೆಲವು ವೈರುಗಳನ್ನು ತಲೆಯ ಬುರುಡೆಗೆ ಹಚ್ಚಿ ಮೆದುಳಿನ ಅಲೆಗಳ ಪರೀಕ್ಷೆ ಮಾಡಲಾಗುತ್ತದೆ. ಇದರಿಂದ ಮತ್ತೆ ಫಿಟ್ಸ್ ಬರಬಹುದಾದ ಸಾಧ್ಯತೆ ಮತ್ತು ಮೆದುಳಿನ ಯಾವ ಭಾಗದಲ್ಲಿ ತೊಂದರೆಯಿರಬಹುದೆಂದು ಪತ್ತೆಯಾಗುತ್ತದೆ.
ಕೆಲವು ಕಾರಣಗಳು ಅಪಸ್ಮಾರದ ಅವಕಾಶವನ್ನು ಹೆಚ್ಚು ಮಾಡುತ್ತವೆ.
ಜ್ವರ
ಹುಟ್ಟಿನಿಂದ ನ್ಯೂನತೆ (ಪ್ರಸವದಲ್ಲಿ ತೊಂದರೆ)
ಮೆದುಳಿನ ನ್ಯೂನತೆಗಳು, ಮೆದುಳು ಗಡ್ಡೆ
ಸೋಂಕುಗಳು (ಮೆನಿಂಜೈಟಿಸ್)
ತಲೆಗೆ ಪೆಟ್ಟಾಗುವುದು (ಬೀಳುವಿಕೆ, ಅಪಘಾತ)
ತೀವ್ರವಾಗಿ ಮಿಣುಕುವ ಬೆಳಕು / ಬಣ್ಣಗಳು (ಟಿವಿಯಲ್ಲಿ)
ಬಿಸಿನೀರಿನಿಂದ ತಲೆಗೆ ಸ್ನ್ನಾನ
ಔಷಧಗಳ ಪರಸ್ಪರ ಬೆರೆಯುವಿಕೆ
ಅತಿಯಾದ ಮದ್ಯಪಾನ
ನಿದ್ದೆ ಕಡಿಮೆಯಾಗುವುದು
ಉಪವಾಸವಿರುವುದು
ಯಾವುದು ಸತ್ಯ ಯಾವುದು ಸುಳ್ಳು?
ಸುಳ್ಳು: ಅಪಸ್ಮಾರವು ಸಾಂಕ್ರಾಮಿಕ.
ಸತ್ಯ: ಗಾಳಿ, ನೀರು, ಆಹಾರ, ಸ್ಪರ್ಶ ಅಥವಾ ಬೇರಾವುದೇ ಮಾರ್ಗದ ಮೂಲಕ ಇನ್ನ್ನೊಂದು ವ್ಯಕ್ತಿಗೆ ಹರಡುವುದಿಲ್ಲ.
ಸುಳ್ಳು: ಆಘಾತ ಆಗಿರುವ ವ್ಯಕ್ತಿಯನ್ನು ಹಿಡಿದಿರಬೇಕು.
ಸತ್ಯ: ವ್ಯಕ್ತಿಯನ್ನು ತಡೆಯುವ ಪ್ರಯತ್ನ ಮಾಡಬಾರದು. ಅದರಿಂದ ಗಾಯಗಳಾಗಬಹುದು. ಗಟ್ಟಿ ಮತ್ತು ಹರಿತವಾದ ವಸ್ತುಗಳಿಂದ ಅವರನ್ನ್ನು ದೂರವಿಡಬೇಕು. ಮೃದುವಾದ ವಸ್ತುವನ್ನ್ನು ವ್ಯಕ್ತಿಯ ತಲೆಯಡಿ ಇರಿಸಬೇಕು.
ಸುಳ್ಳು: ಅಪಸ್ಮಾರವು ಕಡಿಮೆ ಬುದ್ಧಿಶಕ್ತಿಯ ಸೂಚನೆಯಾಗಿದೆ.
ಸತ್ಯ: ಅಪಸ್ಮಾರ ಒಂದು ದೈಹಿಕ ಸ್ಥಿತಿ. ಅದು ಮಾನಸಿಕ ರೋಗ ಅಥವಾ ಅಂಗವಿಕಲತೆಯಲ್ಲ. ಅಪರಿಮಿತಬುದ್ಧಿಶಕ್ತಿಯಿದ್ದ ಮೇಧಾವಿಗಳಿಗೆಅಪಸ್ಮಾರವಿದ್ದ ಉದಾಹರಣೆಗಳಿವೆ.
ಸುಳ್ಳು: ದೇವರು ಬಂದಿದೆ, ಅವರನ್ನು ಪೂಜಿಸಬೇಕು.
ಸತ್ಯ: ಅಪಸ್ಮಾರದಿಂದ ಬಳಲುವವರು ಅನಿಯಂತ್ರಿತ ವರ್ತನೆ ಮಾಡುತ್ತಾರೆ. ಆದರೆ ಅದು ದೈವೀಚಮತ್ಕಾರದ ತೋರ್ಪಡಿಕೆಯಲ್ಲ. ಅವರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು.
ಸುಳ್ಳು: ಕುಟುಂಬದಲ್ಲಿರುವ ವ್ಯಕ್ತಿಗೆಅಪಸ್ಮಾರವಿದ್ದರೆ ಅದೊಂದು ಕಳಂಕ. ಆದ್ದರಿಂದ ಸತ್ಯವನ್ನ್ನು ಮರೆಮಾಚಬೇಕು.
ಸತ್ಯ: ದುರದೃಷ್ಟವಶಾತ್ ಅಪಸ್ಮಾರವಿರುವ ವ್ಯಕ್ತಿಗೆ ಮತ್ತು ಕುಟುಂಬಕ್ಕೆ ಇದು ಕಳಂಕ ಎಂದು ವ್ಯಾಪಕವಾಗಿ ಭಾವಿಸಲಾಗುತ್ತಿದೆ. ಶಿಕ್ಷಣ ನೀಡುವ ಮೂಲಕ ಇದನ್ನು ಕಡಿಮೆ ಮಾಡಬಹುದು.
ಚಿಕಿತ್ಸೆಯ ಅವಧಿಯ ಮುಂಜಾಗ್ರತೆಗಳು
ವೈದ್ಯರಿಗೆ ವಿವರವಾದ ಮಾಹಿತಿ ಕೊಡಿ. ಹುಟ್ಟಿನ ಗಾಯಗಳು, ತಲೆಗೆ ಆದ ಗಾಯಗಳು, ನರಮಂಡಲದ ಸೋಂಕುಗಳು ಅಪಸ್ಮಾರದ ಕೌಟುಂಬಿಕ ಹಿನ್ನ್ನೆಲೆಯ ಬಗ್ಗೆ ಮಾಹಿತಿ ಒದಗಿಸಿ. ಅಪಸ್ಮಾರದ ಉತ್ತಮ ನಿಯಂತ್ರಣ, ಆಘಾತದ ಶೀಘ್ರ ಗುರುತಿಸುವಿಕೆ ಮತ್ತು ವೈದ್ಯಕೀಯ ಪರಿಹಾರಗಳು ಅತ್ಯಂತ ಮಹತ್ವದ್ದು. ವೈದ್ಯರ ನಿರ್ದೇಶನದಂತೆ ನಿಯಮಿತವಾಗಿ ಔಷಧ ಸೇವನೆ ಅತ್ಯಗತ್ಯ.
ಮನೆಯಲ್ಲಿ ಔಷಧದ ಸ್ಟಾಕ್ ಇಟ್ಟುಕೊಂಡಿರಬೇಕು ಮತ್ತು ಬರೆದುಕೊಟ್ಟಿರುವ ಔಷಧದ ಹೆಸರು ಮತ್ತು ಡೋಸೇಜ್ ನೆನಪಿಡುವುದು ಅಗತ್ಯ. ಆಘಾತದ ಪುನರಾವರ್ತನೆಯ ಬಗ್ಗೆ ಡೈರಿಯಲ್ಲಿ ಬರೆದಿಡುವುದು ಅಗತ್ಯ. ಕನಿಷ್ಠ ಮೂರು ವರ್ಷ ಔಷಧತೆಗೆದುಕೊಳ್ಳುವುದು ಅತ್ಯಗತ್ಯ. ವೈದ್ಯರ ಸಮ್ಮತಿ ಪಡೆದು ಕ್ರೀಡೆಯಲ್ಲಿ ಭಾಗವಹಿಸಬಹುದು. ವಿರಾಮದ ಚಟುವಟಿಕೆಗಳಿಗೂ ಅವರ ಸಮ್ಮತಿಯಿದ್ದರೆ ಅನುಕೂಲ.
-ಡಾ. ರಾಜೇಶ್ ಕೆ.ಎನ್.
ನರರೋಗವಿಜ್ಞಾನ ಮುಖ್ಯಸ್ಥರು, ಪೀಪಲ್ ಟ್ರೀ ಹಾಸ್ಪಿಟಲ್ಸ್, 9980515435
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/48908ಗೆ ಭೇಟಿನೀಡಿ.