ಆರೋಗ್ಯ-ಜೀವನಶೈಲಿ

ವಕ್ರದಂತಕ್ಕೆ ಕ್ಯಾಪ್

ಸೌಂದರ್ಯಕ್ಕೆ ಸುಂದರ ದಂತಗಳ ಕೊಡುಗೆ ಅಪಾರ. ಎಲ್ಲವೂ ಸರಿಯಿದ್ದು, ವಕ್ರದಂತವಿದ್ದರಂತೂ ಅಷ್ಟವಕ್ರನಂತೆಯೇ ಕಾಣಿಸುತ್ತೇವೆ. ಈ ವಕ್ರದಂತ ಸರಿ ಮಾಡೋಕೆ ಕ್ಲಿಪ್ ಹಾಕಿಸಿಕೊಳ್ಳೋದು ಅವಮಾನವೆಂದು ಕೊಳ್ಳಲಾಗುತ್ತದೆ. ಅದಕ್ಕೆ ಪರಿಹಾರವಾಗಿದೆ ಇನ್ವಿಸಲೈನ್. ಇದೊಂದು ಯಾರಿಗೂ ಕಾಣಿಸದಂತೆ ಹಲ್ಲನ್ನು ಸರಿಪಡಿಸಿಕೊಳ್ಳುವ ಚಿಕಿತ್ಸೆ. ವ್ಯಕ್ತಿಯ ಸೌಂದರ್ಯಕ್ಕೆ ಕುಂದಾಗದಂತೆ ವಕ್ರದಂತವನ್ನು ಆಧುನಿಕ ದಂತವಿಜ್ಞಾನ ಹೊಸದೊಂದು ಆವಿಷ್ಕಾರದಿಂದ ಸರಿಪಡಿಸುತ್ತದೆ. ವ್ಯಕ್ತಿಗೆ ಬೇಕಾದಂತೆ ನೀಡಬಹುದಾದ ಈ ಚಿಕಿತ್ಸೆ ಎಲ್ಲರಿಗೂ ಇಷ್ಟವಾಗುತ್ತದೆ ಮತ್ತು ಸುಲಭ.

ಚಿಕಿತ್ಸಾ ವಿಧಾನ ಹೇಗೆ?
ಇನ್ವಿಸಲೈನ್‌ನಲ್ಲಿ ಹಲ್ಲನ್ನು ಸರಿಪಡಿಸಲು ಪಾರದರ್ಶಕ ಪ್ಲಾಸ್ಟಿಕ್ ಫೈಬರ್ ಸಂಯುಕ್ತ ಪಟ್ಟಿ ಬಳಸಲಾಗುತ್ತದೆ. ಹಲ್ಲಿನ ಮೇಲೆ ಬಳಸುವ ಈ ಪಟ್ಟಿ ಬಳಸೋದು ಯಾರಿಗೂ ಕಾಣಿಸೋಲ್ಲ. ಕಂಪ್ಯೂಟರ್ ಮೂಲಕ ಹಲ್ಲು ಪಟ್ಟಿಯನ್ನು(ಅಲೈನರ್) ರೂಪಿಸಿ, ನಿರ್ದಿಷ್ಟ ನಿರ್ಧರಿಸಿದ ಸ್ಥಳದಲ್ಲಿ ಅಳವಡಿಸುವುದರಿಂದ ದಂತಪಂಕ್ತಿ ಸೂಕ್ತ ರೀತಿಯಲ್ಲಿ ಸರಿಯಾಗುತ್ತದೆ. ಇದನ್ನು ಅಳವಡಿಸಿಕೊಂಡಾಗ ಮಾತನಾಡಲು, ಸ್ವಚ್ಚಗೊಳಿಸಲು ಮತ್ತು ಕಾಳಜಿಗೂ ತೊಂದರೆಯಾಗುವುದಿಲ್ಲ. ರೋಗಿಯ ದಂತ ಸಮಸ್ಯೆಗೆ ಅನುಗುಣವಾಗಿ ನೀಡುವ ಈ ಚಿಕಿತ್ಸಾ ಕ್ರಮವನ್ನು ವ್ಯಕ್ತಿಯ ಹಲ್ಲಿನ ಸ್ಥಿತಿ ಆಧರಿಸಿ ವೈದ್ಯರು ನಿರ್ಧರಿಸುತ್ತಾರೆ.

ರೋಗಿಯೇ ತೆಗೆದು ಹಾಕಿಕೊಳ್ಳಬಹುದಾದ ಈ ಪ್ಸಾಸ್ಟಿಕ್ ಪಟ್ಟಿ ಹಲ್ಲ ಮೇಲೆ ದಿನೇ ದಿನೇ ಸ್ವಲ್ಪ ಒತ್ತಡ ಹಾಕಿ ನಿರ್ದಿಷ್ಟ ಜಾಗದಲ್ಲಿ ಕೂರಿಸುತ್ತದೆ. ನಿಯಮಿತವಾಗಿ ರೋಗಿಯನ್ನು ವೈದ್ಯರು ಪರೀಕ್ಷಿಸಿ ಪ್ರತಿ 15 ದಿನಕ್ಕೊಮ್ಮೆ ಹೊಸ ಪಟ್ಟಿಯನ್ನು ಹೊಸ ಅಳತೆಗೆ ಕೊಡುತ್ತಾರೆ. ಚಿಕಿತ್ಸೆಗೆ ವ್ಯಕ್ತಿ ಸ್ಪಂದಿಸುವ ಆಧಾರದ ಮೇಲೆ 6 ತಿಂಗಳಿಂದ- ವರ್ಷದವರೆಗೆ ಚಿಕಿತ್ಸೆ ಮುಂದುವರಿಯುತ್ತದೆ.

ಬಾಯಿಗೆ ಚುಚ್ಚುವ, ಒತ್ತುವ ಯಾವುದೇ ರೀತಿ ತಂತಿ-ಬಟನ್ ಇದರಲ್ಲಿ ಇರುವುದಿಲ್ಲ. ಊಟ, ಬ್ರಷ್ ಮಾಡುವಾಗ ಈ ಪಟ್ಟೆಯನ್ನು ತೆಗೆಯಬಹುದು. ಇದರಿಂದ ವಸಡಿನ ಆರೋಗ್ಯ ಸಂರಕ್ಷಣೆಯೂ ಸುಲಭ.

ಪ್ಲಸ್ ಪಾಯಿಂಟ್
ರೋಗಿ ಬಯಸಿದ ವಿಧಾನದಲ್ಲಿ ಹಲ್ಲು ಜೋಡಿಸಬಹುದು.
ಕ್ರಮಬದ್ಧ ಜೋಡಣೆ ಸಾಧ್ಯ.
ಮಾತನಾಡಲು, ಊಟ ಮಾಡಲು ತೊಂದರೆಯಿಲ್ಲ.
ದೈನಂದಿನ ಸ್ವಚ್ಛತೆಗೆ ತೊಂದರೆಯಾಗದು.
ಆರೋಗ್ಯ ಪೂರ್ಣ ಹಲ್ಲು, ವಸಡು ಇರುತ್ತದೆ.
ದಂತ ಕ್ಷಯ, ಹುಳುಕು ಸಾಧ್ಯವಿಲ್ಲ.

ಮೈನಸ್ ಪಾಯಿಂಟ್
ತೆಗೆದು ಹಾಕಿಕೊಳ್ಳಬೇಕಾಗಿದ್ದರಿಂದ ರೋಗಿಯು ಆ ಪಟ್ಟಿಯನ್ನು ಮುರಿಯಬಹುದು, ಕಳೆಯಬಹುದು.
ಪಟ್ಟಿಯಲ್ಲಿ ಬದಲಾವಣೆ ಮಾಡಬಹುದು, ಅರ್ಧಕ್ಕೆ ಚಿಕಿತ್ಸೆ ನಿಲ್ಲಿಸಬಹುದು.
ವರ್ಷದಲ್ಲಿ 25, 30 ಸಲ ವೈದ್ಯರನ್ನು ಭೇಟಿಯಾಗಬೇಕು.
ಚಿಕಿತ್ಸೆ ಶ್ರಮದಾಯಕ, ವೆಚ್ಚದಾಯಕ
ಚಿಕ್ಕಮಕ್ಕಳಿಗೆ ಈ ವಿಧಾನ ಕಷ್ಟ

-ಡಾ. ಕೆ.ವಿ. ಸಂತೋಷ್ ಹೊಳಲ್ಕೆರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!