ಆರೋಗ್ಯ-ಜೀವನಶೈಲಿ

ಮೂಳೆ ಮುರೀತಾ?

ನಿಮಗೆ ಗೊತ್ತಾ? 50 ವರ್ಷ ದಾಟಿದ ಗಂಡಸರು ಪ್ರೊಸ್ಟೇಟ್ ಕ್ಯಾನ್ಸರ್‌ಗಿಂತ...

ಆಸ್ಟಿಯೋಪೋರೋಸಿಸ್ ಇರಬಹುದು!

-ನಿಮಗೆ ಗೊತ್ತಾ? 50 ವರ್ಷ ದಾಟಿದ ಗಂಡಸರು ಪ್ರೊಸ್ಟೇಟ್ ಕ್ಯಾನ್ಸರ್‌ಗಿಂತ ಹೆಚ್ಚಾಗಿ ಆಸ್ಟಿಯೊಪೋರೋಸಿಸ್‌ನಿಂದ ಬಳಲುತ್ತಾರೆ... ಹಾಲು ಕುಡೀರಿ!
-50 ವರ್ಷ ದಾಟಿದ ಹೆಚ್ಚಿನ ಮಹಿಳೆಯರು ಮೂಳೆಮುರಿತಕ್ಕೆ ಒಳಗಾಗುತ್ತಾರೆ...ಹಾಲು ಕುಡಿದ್ರಾ?

ಋತುಸ್ರಾವ ನಿಂತ ತಕ್ಷಣ ಕೆಲವು ವರ್ಷಗಳ ಕಾಲ ಮೂಳೆಗಳ ಸಾಂದ್ರತೆ ತೀವ್ರವಾಗಿ ಕುಗ್ಗುತ್ತದೆ. ಹಾಗೆಯೆ ವಯಸ್ಸಾದಂತೆ ಆಸ್ಟಿಯೋಪೋರೋಸಿಸ್‌ನ ಸಾಧ್ಯತೆ ಹೆಚ್ಚುತ್ತ ಹೋಗುತ್ತದೆ. ಧೂಮಪಾನ, ಮದ್ಯಪಾನ, ಸಣ್ಣಗಿನ ಮೈಕಟ್ಟು,ವಂಶಾವಳಿಯಲ್ಲಿ ಇದ್ದರೆ ಅಥವಾ ಸ್ಟಿರಾಯ್ಡ್ ಸೇವನೆ, ಮೂರ್ಛೆ ರೋಗಕ್ಕೆತೆಗೆದುಕೊಳ್ಳುವ ಕೆಲವು ಔಷಧಗಳಿಂದಲೂಆಸ್ಟಿಯೋಪೋರೋಸಿಸ್ ಬರಬಹುದು.

ಚಲನೆ ಸ್ಥಿರತೆ ಹಾಗೂ ಶರೀರದ ಸುಸ್ಥಿತಿಗೆ ಬೇಕಾಗಿರುವ ಪ್ರಮುಖ ಅಂಗಾಂಶ ಮೂಳೆ ಹುಟ್ಟಿನಿಂದ ಮುಪ್ಪಿನವರೆಗೂ ಮೂಳೆಗಳಲ್ಲಾಗುವ ಬದಲಾವಣೆಗಳು, ಚಲನೆಗಷ್ಟೇ ಅಲ್ಲ, ವಿವಿಧಅವಯವಗಳ ಸಮರ್ಪಕ ಕಾರ್ಯನಿರ್ವಹಣೆಗೂ ಅವಶ್ಯಕ. ವಯಸ್ಸಾದಂತೆ ಮೂಳೆಗಳಿಗಾಗುವ ಭೌತಿಕ ಹಾಗೂ ರಾಸಾಯನಿಕ ಬದಲಾವಣೆಯಲ್ಲಿ ಏರುಪೇರಾದರೆ ಉಂಟಾಗುವುದೇ 'ಆಸ್ಟಿಯೋಪೋರೋಸಿಸ್‌'. ಅಮೇರಿಕಾದ 'ನ್ಯಾಷನಲ್ ಆಸ್ಟಿಯೋಪೋರೋಸಿಸ್ ಫೌಂಡೇಷನ್‌'ನ 2005ರ ಅಂಕಿ ಅಂಶದ ಪ್ರಕಾರ ಆಸ್ಟಿಯೋಪೋರೋಸಿಸ್‌ನಿಂದ ಉಂಟಾಗುವ ಮೂಳೆ ಮುರಿತ (ಜ್ಠಿಛ್ಛಡ್ಡ್ಠಿಜ)ಗಳ ಸಂಖ್ಯೆ ಸುಮಾರು 20 ಲಕ್ಷ ಹಾಗೂ ಇದರಲ್ಲಿ ಶೇಕಡ 70ಕ್ಕೂ ಹೆಚ್ಚು ಮಹಿಳೆಯರು. 2005ರಲ್ಲಿ ಇದರ ವೈದ್ಯಕೀಯ ನಿರ್ವಹಣೆಗೆ ತಗುಲಿರುವ ವೆಚ್ಚ 1700 ಕೋಟಿ ಡಾಲರ್‌ಗಳು. ಭಾರತದಲ್ಲಿ ಸರಾಸರಿ ಆಯಸ್ಸು ವೃದ್ಧಿಸಿರುವಂತೆ ವೃದ್ಧರ ನಿವ್ವಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಜೀವನ ಶೈಲಿ ಹಾಗೂ ಸಾರ್ವಜನಿಕ ಆರೋಗ್ಯದಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಳ್ಳದಿದ್ದರೆ ಆಸ್ಟಿಯೋಪೋರೋಸಿಸ್ ಸಾಂಕ್ರಾಮಿಕವಾಗುವ ಸಾಧ್ಯತೆ ದೂರವೇನಿಲ್ಲ.

ಏನಿದು ಆಸ್ಟಿಯೋಪೋರೋಸಿಸ್?
ಜೀವಕೋಶಗಳನ್ನು ಹೊರತುಪಡಿಸಿದರೆ ಮೂಳೆಗಳಲ್ಲಿನ ಮುಖ್ಯ ಅಂಶಗಳು ಮ್ಯಾಟ್ರಿಕ್ಸ್ ಮತ್ತು ಕ್ಯಾಲ್ಸಿಯಂ. ಪ್ರಾಯದಿಂದ ಹೆಚ್ಚುತ್ತಾ ಹೋಗುವ ಈ ಎರಡು ಅಂಶಗಳು ಸುಮಾರು 30 ವರ್ಷ ವಯಸ್ಸಾದಾಗ ಪೂರ್ಣ ಪ್ರಮಾಣದಲ್ಲಿ ಶೇಖರಣೆಯಾಗಿ ಮೂಳೆಗಳ ಸಾಂದ್ರತೆ ಗರಿಷ್ಟ ಮಟ್ಟವನ್ನು ಮುಟ್ಟುತ್ತದೆ. ಇದಾದ ನಂತರ ಪ್ರತಿವರ್ಷ ಶೇಕಡ 1ರಷ್ಟು ಸಾಂದ್ರತೆ ಕುಂದುತ್ತ ಹೋಗಿ, ಮಹಿಳೆಯರಲ್ಲಿ ಋತುಸ್ರಾವ ನಿಂತ ಬಳಿಕ ವಾರ್ಷಿಕ ಶೇಕಡ 2ರಷ್ಟು ಕುಗ್ಗುತ್ತ ಹೋಗುತ್ತದೆ. ಇದರಿಂದ ಮೂಳೆಯ ಸಾಂದ್ರತೆ ಹಾಗೂ ದೃಢತೆ ಕುಗ್ಗಿ ಸುಲಭವಾಗಿ ಮೂಳೆ ಮುರಿಯಬಲ್ಲ ಪರಿಸ್ಥಿತಿ ಉಂಟಾಗುತ್ತದೆ. ಇದಕ್ಕೆ'ಆಸ್ಟಿಯೋಪೋರೋಸಿಸ್‌' ಎನ್ನುತ್ತೇವೆ.

ಯಾರಿಗೆ ಬರಬಹುದು?
ಮೂಳೆಗಳ ಗರಿಷ್ಟ ಸಾಂದ್ರತೆಯನ್ನು ಸಾಧಿಸಲು ಬೇಕಾಗಿರುವುದು- ಬಾಲ್ಯ ಮತ್ತು ಯೌವನಾಸ್ಥೆಯಲ್ಲಿ ಸೂಕ್ತವಾದ ಪೌಷ್ಟಿಕ ಆಹಾರ ಮತ್ತು ವ್ಯಾಯಾಮ. ಮೂಳೆಗಳ ಸಾಂದ್ರತೆ ಹೆಚ್ಚಿಸಲು ಸದಾ ಪ್ರೇರಣೆಯ ಅವಶ್ಯಕತೆಯೂ ಇದೆ. ಗುರುತ್ವ ವಿರೋಧಿ ವ್ಯಾಯಾಮಗಳೇ ಇದಕ್ಕೆ ಪ್ರಮುಖ ಪ್ರೇರಣೆ. ಶೂನ್ಯ ಗುರುತ್ವವಿರುವ ಅಂತರಿಕ್ಷದಲ್ಲಿ ಬಹಳ ಕಾಲ ಉಳಿಯುವ ಗಗನ ಯಾತ್ರಿಗಳನ್ನು ಆಸ್ಟಿಯೋಪೋರೋಸಿಸ್ ಸಾಮಾನ್ಯವಾಗಿ ಕಾಡುತ್ತದೆ. ಅಪೌಷ್ಠಿಕ ಆಹಾರ ಮತ್ತು ಸೂಕ್ತ ವ್ಯಾಯಾಮಗಳಿಲ್ಲದಿರುವುದು ಚಿಕ್ಕ ವಯಸ್ಸಿನಲ್ಲಿಯೇ ಮೂಳೆಯ ಸಾಂದ್ರತೆಯನ್ನು ಕಡಿಮೆ ಮಾಡಿ ವಯಸ್ಸಾದ ಮೇಲೆ ಆಸ್ಟಿಯೋಪೋರೋಸಿಸ್‌ಗೆ ಈಡಾಗುವಂತೆ ಮಾಡುತ್ತದೆ.

ಋತುಸ್ರಾವ ನಿಂತ ತಕ್ಷಣ ಕೆಲವು ವರ್ಷಗಳ ಕಾಲ ಮೂಳೆಗಳ ಸಾಂದ್ರತೆ ತೀವ್ರವಾಗಿ ಕುಗ್ಗುತ್ತದೆ. ಹಾಗೆಯೆ ವಯಸ್ಸಾದಂತೆ ಆಸ್ಟಿಯೋಪೋರೋಸಿಸ್‌ನ ಸಾಧ್ಯತೆ ಹೆಚ್ಚುತ್ತ ಹೋಗುತ್ತದೆ. ಧೂಮಪಾನ, ಮದ್ಯಪಾನ, ಸಣ್ಣಗಿನ ಮೈಕಟ್ಟು, ವಂಶಾವಳಿಯಲ್ಲಿ ಇದ್ದರೆ ಅಥವಾ ಸ್ಟಿರಾಯ್ಡ್ ಸೇವನೆ, ಮೂರ್ಛೆ ರೋಗಕ್ಕೆ ತೆಗೆದುಕೊಳ್ಳುವ ಕೆಲವು ಔಷಧಗಳಿಂದಲೂ ಆಸ್ಟಿಯೋಪೋರೋಸಿಸ್ ಬರಬಹುದು.

ಪರೀಕ್ಷಾ ವಿಧಾನಗಳೇನು?
ಸುಲಭವಾಗಿ ಮೂಳೆ ಮುರಿತ ಉಂಟಾದರೆ ಆಸ್ಟಿಯೋಪೋರೋಸಿಸ್ ಇದೆಯೇ ಎಂದು ಪರೀಕ್ಷಿಸಬೇಕಾಗುತ್ತದೆ. ಕ್ಷ-ಕಿರಣಗಳ ಮೂಲಕ ಇದರ ಕುರುಹು ತಿಳಿದರೂ ಆಸ್ಟಿಯೋಪೋರೋಸಿಸ್ ಸಾಕಷ್ಟು ಉಲ್ಬಣಗೊಂಡ ನಂತರವೇ ಇದರಲ್ಲಿ ತಿಳಿಯುತ್ತದೆ. ಆದ್ದರಿಂದ 'ಡೆಕ್ಸಾ (ಉಊ್ಗಆ) ಸ್ಕ್ಯಾನಿಂಗ್‌' ಅತ್ಯಂತ ಸೂಕ್ತ ವಿಧಾನ. ಅಲ್ಟ್ರಾಸೌಂಡ್ ಮೂಲಕವೂ ಮೂಳೆಯ ಸಾಂದ್ರತೆಯನ್ನು ಮಾಪನ ಮಾಡಬಹುದಾದರೂ 'ಡೆಕ್ಸಾ' ನಿಖರವಾದ ಮಾಹಿತಿಯನ್ನು ನೀಡುತ್ತದೆ. ರಕ್ತ ಪರೀಕ್ಷೆಯಿಂದ ಆಸ್ಟಿಯೋಪೋರೋಸಿಸ್ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ, ಆದರೆ ವಿಟಮಿನ್ 'ಡಿ' ಬಗ್ಗೆ ಅಗತ್ಯ ಮಾಹಿತಿ ಲಭಿಸುತ್ತದೆ.

ಆಸ್ಟೀಯೋಪೋರೋಸಿಸ್ ಚಿಕಿತ್ಸೆ ಹೇಗೆ?
ಆಸ್ಟಿಯೋಪೋರೋಸಿಸ್‌ನ ನಿವಾರಣೆ, ಅದನ್ನು ತಡೆಗಟ್ಟುವಷ್ಟು ಸುಲಭದ ಕೆಲಸವಲ್ಲ, ಹೀಗಾಗಿ ಜೀವನ ಶೈಲಿಯಲ್ಲಿ ಮಾರ್ಪಾಡು, ಸಾಕಷ್ಟು ದೈಹಿಕ ವ್ಯಾಯಾಮ, ಸೂರ್ಯನ ಬೆಳಕಿಗೆ ಮೈಯೊಡ್ಡುವುದು, ವಿಟಮಿನ್ 'ಡಿ' ಹಾಗೂ ಕ್ಯಾಲ್ಸಿಯಂನ ಸಮರ್ಪಕ ಸೇವನೆಯ ಮೂಲಕ ಚಿಕ್ಕವಯಸ್ಸಿನಲ್ಲಿಯೇ ಮೂಳೆಯ ಸಾಂದ್ರತೆಯನ್ನು ಹೆಚ್ಚಿಸಿಕೊಳ್ಳುವುದು ಒಳಿತು. 30ರ ನಂತರ ಸ್ವಾಭಾವಿಕವಾಗಿ ಸಾಂದ್ರತೆ ಕ್ಷೀಣಿಸುವುದರಿಂದ ಅದನ್ನು ಕಡಿಮೆ ಮಾಡಲಷ್ಟೇ ಸಾಧ್ಯ. ಋತುಸ್ರಾವದ ಬಳಿಕ ಉಂಟಾಗುವ ಬದಲಾವಣೆಗಳನ್ನು ತಡೆಗಟ್ಟಲು ಸೂಕ್ತವಾದ ಔಷಧಿಗಳಿವೆ. ವೈದ್ಯರ ಸಲಹೆಯ ಮೇರೆಗೆ ಅವುಗಳನ್ನು ಸೇವಿಸಬಹುದು. ಸಣ್ಣ ಪೆಟ್ಟಿನಿಂದ ಮೂಳೆ ಮುರಿತ ಉಂಟಾಗಿದ್ದರೆ ಅಂತವರು ಸಮಯಕ್ಕೆ ಸರಿಯಾಗಿ ಸೂಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ಮಾಡಿಸುವುದು ಉತ್ತಮ.

-ಡಾ. ರವೀಂದ್ರ ಪುಟ್ಟಸ್ವಾಮಯ್ಯ ಆರ್ಥೋಪಿಡಿಕ್ ಸರ್ಜನ್
9740044771

drravindrap@yahoo.co.in

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/48908ಗೆ ಭೇಟಿನೀಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!