ಜಾನ್ಸನ್ ಆ್ಯಂಡ್ ಜಾನ್ಸೆನ್ ಫಾರ್ಮಾಸ್ಯುಟಿಕಲ್ ಕಂಪನಿ ಭಾರತದಲ್ಲಿ ಮಧಮೇಹದಿಂದ ಬಳಲುತ್ತಿರುವ ಸುಮಾರು 67 ದಶಲಕ್ಷ ಜನರಿಗೆ ಅನುಕೂಲವಾಗುವ ಇನ್ವೊಕಾನ್ ವನ್ನು ಪರಿಚಯಿಸಿದೆ.
ಇನ್ವೊಕಾನಾನ್ನು ದಿನದಲ್ಲಿ ಒಂದು ಸಲ ಔಷಧ ರೂಪದಲ್ಲಿ ಸೇವಿಸಬೇಕು.
ಇದು ಸೋಡಿಯಂ, ಗ್ಲುಕೋಸ್, ಕೊ-ಟ್ರಾನ್ಸ್ ಫೋಟರ್ 2 ಪ್ರತಿರೋಧಕ ಹೊಂದಿರುವ ಹೊಸ ಶ್ರೇಣಿಯ ಔಷಧವಾಗಿದೆ. ಟೈಪ್ 2 ಮಧುಮೇಹಕ್ಕೆ ಸಂಬಂಧಿಸಿದ ಇತರ ಔಷಧಗಳಿಂದ ಸಂಪೂರ್ಣ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ.
ಇನ್ವೊಕಾನಾ ಈ ಹಿಂದೆ ಡಯಟ್, ಜೀವನಶೈಲಿ ಬದಲಾವಣೆ ಅಥವಾ ಚಿಕಿತ್ಸೆ ಮೂಲಕ ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸಲು ಸಾಧ್ಯವಾಗದೇ ಇರುವ ವಯಸ್ಕರಲ್ಲಿಯೂ ಗಣನೀಯ ಸಕ್ಕರೆ ಅಂಶ ನಿಯಂತ್ರಿಸಬಹುದು.