ಆರೋಗ್ಯ-ಜೀವನಶೈಲಿ

ಸ್ತನ ಅರ್ಬುದ (ಬ್ರೆಸ್ಟ್ ಕ್ಯಾನ್ಸರ್) ತಡೆಯಲು ರೋಸ್ ಹಿಪ್ ರಸ

Rashmi Kasaragodu

ವಾಷಿಂಗ್ಟನ್:  ನೈಸರ್ಗಿಕ ರೋಸ್ ಹಿಪ್ (Rose hip) ರಸ ಸ್ತನ ಅರ್ಬುದವನ್ನು ತಡೆಯಬಲ್ಲುದು ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.

ರೋಸ್ ಹಿಪ್ ನ ರಸ ಕ್ಯಾನ್ಸರ್ ಹರಡುವ ಕೋಶಗಳ ಬೆಳವಣಿಗೆಯನ್ನು ತಡೆಗಟ್ಟುವುದು ಮಾತ್ರವಲ್ಲದೆ ಕೋಶಗಳ ಚಲನೆಯನ್ನೂ ನಿಯಂತ್ರಿಸುತ್ತದೆ. ಟ್ರಿಪಲ್ ನೆಗೆಟಿವ್ ಎಂದು ಕರೆಯಲ್ಪಡುವ ಒಂದು ಸ್ತನ ಅರ್ಬುದ ತಡೆಯಲು ರೋಸ್ ಹಿಪ್  ರಸ ಸಹಕಾರಿಯಾಗುತ್ತದೆ. ಈ ರೀತಿಯ ಅರ್ಬುದ ಆಫ್ರಿಕನ್- ಅಮೆರಿಕನ್ ಮೂಲದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.   

ರೋಸ್ ಹಿಪ್ ರಸದಿಂದ ಟ್ರಿಪಲ್ ನೆಗೆಟಿವ್ ಸ್ತನ ಅರ್ಬುದ ಕೋಶಗಳನ್ನು ಗುಣಪಡಿಸಬಹುದೆಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಕ್ಯಾನ್ಸರ್ ಕೀಮೋಥೆರಪಿ ಔಷಧಿಗಳಲ್ಲಿ ಬಳಸುವ ವಸ್ತುಗಳಿಗಿಂತ ರೋಸ್ ಹಿಪ್ ರಸ ಹೆಚ್ಚು ಪರಿಣಾಮಕಾರಿಯಾಗಿದೆ.

ಇದೀಗ ರೋಸ್‌ಹಿಪ್ ಸ್ತನ ಅರ್ಬುದ ತಡೆಯಲು ಸಹಕಾರಿ ಎಂದು ಹೇಳಿರುವ ತಜ್ಞರು ಇದನ್ನೇ  ಪ್ರೋಸ್ಟೇಟ್ ಕ್ಯಾನ್ಸರ್  ತಡೆಗೆ ಬಳಸಿದರೆ ಪರಿಣಾಮಕಾರಿಯಾಗುವುದೇ ಎಂಬುದರ ಬಗ್ಗೆ  ಸಂಶೋಧನೆ ನಡೆಸುತ್ತಿದ್ದಾರೆ.

SCROLL FOR NEXT