ಮೆಲ್ಬೋರ್ನ್: ಕ್ರೀಡಾ ಚಾನೆಲ್ ಗಳನ್ನು ವೀಕ್ಷಿಸಲು ಇಷ್ಟಪಡುವ ಮಕ್ಕಳು ಅತಿ ಹೆಚ್ಚು ಮದ್ಯದ ಜಾಹಿರಾತುಗಳನ್ನು ನೋಡುವುದನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಸಂಶೋಧನೆ ಪ್ರಕಾರ ಬೆಳಿಗ್ಗೆ ವೇಳೆ ಮಕ್ಕಳು ಅತಿ ಹೆಚ್ಚು ವೀಕ್ಷಿಸುವ ಕ್ರೀಡಾ ಚಾನೆಲ್ ಗಳಲ್ಲಿ ಶೇ.87 ರಷ್ಟು ಮದ್ಯದ ಜಾಹಿರಾತುಗ ಪ್ರಸಾರವಾಗುತ್ತವೆ. ಇದರಿಂದಾಗಿ ಕ್ರೀಡಾ ಚಾನೆಲ್ ವೀಕ್ಷಿಸುವ ಮಕ್ಕಳು, ಉಳಿದ ಚಾನೆಲ್ ಗಳನ್ನು ವೀಕ್ಷಿಸುವ ಮಕ್ಕಳಿಗಿಂತಲೂ ಅತಿ ಹೆಚ್ಚು ಮದ್ಯದ ಜಾಹೀರಾತುಗಳನ್ನೇ ವೀಕ್ಷಿಸುತ್ತಾರೆ.
2012 ರಲ್ಲಿ ಕ್ರೀಡಾ ಚಾನೆಲ್ ಗಳ ನೇರ ಪ್ರಸಾರ ಕಾರ್ಯಕ್ರಮಗಳಲ್ಲಿ 6 , 049 ಮದ್ಯದ ಜಾಹೀರಾತು ಪ್ರಸಾರವಾಗಿದ್ದು ಮುಂದಿನ ದಿನಗಳಲ್ಲಿ ಮಕ್ಕಳು ಮದ್ಯಸೇವಿಸುವುದಕ್ಕೆ ಇದು ಪ್ರೇರಣೆಯಾಗಿ ಸಮಸ್ಯೆ ಉಂಟಾಗಲಿದೆ ಎಂದು ಸಂಶೋಧಕರು ಅಭಿಪ್ರಯಪಟ್ಟಿದ್ದಾರೆ. ಈ ಸಂಶೋಧನಾ ವರದಿ ಪಿಎಲ್ಒಎಸ್ ಒನ್ ಎಂಬ ಜರ್ನಲ್ ನಲ್ಲಿ ಪ್ರಕಟವಾಗಿದೆ.