ಆರೋಗ್ಯ-ಜೀವನಶೈಲಿ

ಮೊದಲ ಮಹಿಳೆಯರ ವಯಾಗ್ರಾಕ್ಕೆ ಅಮೆರಿಕಾ ಎಫ್ ಡಿ ಎ ಅಸ್ತು

Guruprasad Narayana

ವಾಶಿಂಗ್ಟನ್: ಜಾಗತಿಕವಾಗಿ ಲೈಂಗಿಕ ಆಸಕ್ತಿ ಕುಂದುವಿಕೆಯಿಂದ ನರಳುತ್ತಿರುವ ಲಕ್ಷಾಂತರ ಮಹಿಳೆಯರಿಗೆ ಸಹಾಯವಾಗಬಲ್ಲ ಮಹಿಳಾ ವಯಾಗ್ರಕ್ಕೆ ಅಮೆರಿಕಾ ಆಹಾರ ಮತ್ತು ಔಶಧ ನಿಯಂತ್ರಣಾ ಸಂಸ್ಥೆ (ಎಫ್ ಡಿ ಎ) ಅನುಮೋದನೆ ನೀಡಿದೆ. ಇದು ಹೈಪೋಆಕ್ಟಿವ್ ಸೆಕ್ಸುಯಲ್ ಡಿಸೈರ್ ಡಿಸಾರ್ಡರ್ (ಎಚ್ ಎಸ್ ಎಸ್ ಡಿ) ಚಿಕಿತ್ಸೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದೆ.

ಅದ್ದ್ಯಿ (ಫಿಬಾಂಸೆರ್ನಿನ್ ಎಂದೂ ಕರೆಯಲಾಗುವ) ಎಂದು ಹೆಸರಿಸಲಾಗಿರುವ ೧೦೦ ಎಂ ಜಿ ಪಿಂಕ್ ವಯಾಗ್ರಾವನ್ನು ಮಲಗುವ ಸಮಯದಲ್ಲಿ ದಿನಕ್ಕೊಂದು ತೆಗೆದುಕೊಳ್ಳಬಹುದಾಗಿದೆ.

"ಇದನ್ನು ತೆಗೆದುಕೊಂಡ ಎಂಟು ವಾರಗಳ ನಂತರ ಲೈಂಗಿಕ ಆಸಕ್ತಿಯಲ್ಲಿ ಯಾವುದೇ ವೃದ್ಧಿ ಕಂಡುಬರದಿದ್ದರೆ ರೋಗಿಗಳು ಇದನ್ನು ತಕ್ಷಣ ನಿಲ್ಲಿಸಬೇಕು" ಎಂದು ಎಫ್ ಡಿ ಎ ನೀಡುರುವ ಹೇಳಿಕೆಯಲ್ಲಿ ಆಗಸ್ಟ್ ೧೮ ರಂದು ತಿಳಿಸಿದೆ.

"ಸುಮಾರು ೧೭೭೦ ಮಹಿಳೆಯರು ಕಳೆದ ಆರು ತಿಂಗಳುಗಳಲ್ಲಿ ಇದರಿಂದ ಚಿಕಿತ್ಸೆ ಪಡೆದಿದ್ದಾರೆ ಹಾಗೂ ೮೫೦ ಜನ ಕಳೆದ ವರ್ಷ ಚಿಕಿತ್ಸೆ ಸ್ವೀಕರಿಸಿದ್ದಾರೆ" ಎಂದು ಎಫ್ ಡಿ ಎ ತಿಳಿಸಿದೆ.

ಇದು ಕೆಲವೊಮ್ಮೆ ವ್ಯತಿರಿಕ್ತ ಪರಿಣಾಮವೂ ಬೀರಲಿದ್ದು, ತಲೆ ಸುತ್ತುವಿಕೆ, ನಿದ್ರೆ ಬಾರದಿರುವುದು, ವಾಂತಿ, ಸುಸ್ತು, ಒಣಗಿದ ಬಾಯಿ ಇದರಿಂದ ಉಂಟಾಗುವ ಅಡ್ಡಪರಿಣಾಮಗಳು.

SCROLL FOR NEXT