ಮೊಳಕೆ ಕಾಳು (ಸಾಂದರ್ಬಿಕ ಚಿತ್ರ) 
ಆರೋಗ್ಯ-ಜೀವನಶೈಲಿ

ವೀರ್ಯಾಣು ವೃದ್ಧಿಗೆ ಮೊಳಕೆ ಕಾಳು ಸಹಕಾರಿ

ಮೊಳಕೆ ಕಾಳಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರೊಟೀನ್ ಇದೆ. ಹೀಗಾಗಿ ಬೆಳೆಯುವ ಮಕ್ಕಳಿಗೆ ಮೊಳಕೆ ಕಾಳು ನೀಡುವುದು ತುಂಬಾ ಉಪಯೋಗ...

ಮೊಳಕೆ ಕಾಳಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರೊಟೀನ್ ಇದೆ. ಹೀಗಾಗಿ ಬೆಳೆಯುವ ಮಕ್ಕಳಿಗೆ ಮೊಳಕೆ ಕಾಳು ನೀಡುವುದು ತುಂಬಾ ಉಪಯೋಗ. ಕಾಳುಗಳ ಮೊಳಕೆಯಲ್ಲಿ ಸಿ ವಿಟಮಿನ್ ಇರುತ್ತದೆ. ಇದು ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟುತ್ತದೆ.

ಮೊಳಕೆ ಕಾಳುಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯದನ್ನು ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳು ಲಭ್ಯವಾಗುತ್ತದೆ.

ಮೊಳಕೆ ಕಾಳುಗಳಿಂದ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕಿ ರಕ್ತವನ್ನು ಶುದ್ಧೀಕರಿಸುವಲ್ಲಿ ಸಹಾಯ ಮಾಡುತ್ತದೆ ಮೊಳಕೆ ಕಾಳು. ಮೊಳಕೆ ಕಾಳಿನಲ್ಲಿ ಮ್ಯಾಂಗನೀಸ್, ವಿಟಮಿನ್, ಮಿನರಲ್ಸ್ ಇರುವುದರಿಂದ ವೀರ್ಯಾಣು ವೃದ್ಧಿಗೆ ಸಹಕಾರಿಯಾಗುತ್ತದೆ.

ಮೊಳಕೆ ಕಾಳು ದೇಹದಲ್ಲಿ ಸೇರ್ಪಡೆಯಾಗುವ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಉಂಟಾಗುವ ಬೋಳು ತಲೆ ಸಮಸ್ಯೆಯನ್ನು ತಡೆಗಟ್ಟುತ್ತದೆ.

ಡಯಟ್ ಮಾಡುವವರು ಮೊಳಕೆ ಕಾಳುಗಳನ್ನು ತಿನ್ನುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಕೊಲೆಸ್ಟ್ರಾಲ್ ಪ್ರಮಾಣವವನ್ನು ಕಡಿಮೆ ಮಾಡುವುದರ ಜೊತೆಗೆ ಹೃದಯ ಸಂಬಂಧಿ ರೋಗಗಳಿಂದ ದೂರ ವಿಡುತ್ತದೆ.

ಮಕ್ಕಳಿಗೆ ಪ್ರತಿ ನಿತ್ಯ ಮೊಳಕೆ ಕಾಳುಗಳನ್ನು ತಿನ್ನಿಸುವುದರಿಂದ ಮಕ್ಕಳ ದೇಹ ಹಾಗೂ ಬುದ್ದಿಯ ಬೆಳವಣಿಗೆ ಉತ್ತಮವಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ