ಶೂ ಬದಲಿಗೆ ಉಪಯೋಗಿಸಬಹುದಾದ ಸಾಕ್ಸ್(ಸಾಂಕೇತಿಕ ಚಿತ್ರ) 
ಆರೋಗ್ಯ-ಜೀವನಶೈಲಿ

ನೀವು ಈ ಸಾಕ್ಸ್ ನ್ನು ಧರಿಸಿದರೆ ಶೂ ಹಾಕುವ ಅಗತ್ಯವಿಲ್ಲ!

ಈ ಸಾಕ್ಸ್ ನ್ನು ಧರಿಸಿದರೆ ನೀವು ಶೂ ಧರಿಸುವ ಅಗತ್ಯವಿರುವುದಿಲ್ಲ! ಹೌದು, ಅಂತಹದ್ದೊಂದು ವಿಶೇಷ ಮಾದರಿಯ ಸಾಕ್ಸ್ ಕಮ್ ಶೂ ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಲಂಡನ್: ಈ ಸಾಕ್ಸ್ ನ್ನು ಧರಿಸಿದರೆ ನೀವು ಶೂ ಧರಿಸುವ ಅಗತ್ಯವಿರುವುದಿಲ್ಲ! ಹೌದು, ಅಂತಹದ್ದೊಂದು ವಿಶೇಷ ಮಾದರಿಯ ಸಾಕ್ಸ್ ಕಮ್ ಶೂ ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಸೂಪರ್ ಸ್ಟ್ರಾಂಗ್ ಫಾಬ್ರಿಕ್(ಬಟ್ಟೆ)ಯಿಂದ ವಿಶೇಷ ಮಾದರಿಯ  ಕಾಲುಚೀಲ ತಯಾರಾಗಲಿದ್ದು, ಸ್ಪೋರ್ಟ್ ಸಾಕ್ಸ್ ಹಾಗೂ ಶೂ ಎರಡೂ ರೀತಿಯಲ್ಲಿ ಬಳಸಬಹುದಾಗಿದೆ. ರಾಕ್ ಕ್ಲೈಂಬರ್ಸ್ ಸಾಮಾನ್ಯವಾಗಿ ಈ ರೀತಿಯ ಸೂಪರ್ ಸ್ಟ್ರಾಂಗ್ ಬಟ್ಟೆಯಿಂದ ತಯಾರಾದ ಸಾಕ್ಸ್ ಗಳನ್ನು ಬಳಸುತ್ತಾರೆ. ಶೂ ಬದಲಿಗೆ ಉಪಯೋಗಿಸಬಹುದಾದ ಸಾಕ್ಸ್ ಗಳು ನೀರಿನ ನಿರೋಧಕವಾಗಿರಲಿದೆಯಂತೆ.

ಈ ರೀತಿಯ ಸಾಕ್ಸ್ ಗಳಿಂದ ಅಥ್ಲೀಟ್ ಗಳಿಗೆ ಹೆಚ್ಚಿನ ಉಪಯೋಗವಾಗಲಿದ್ದು, ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಬರಿಗಾಲಿನ ಅನುಭವ ನೀಡುತ್ತದೆ ಎಂದು ಫ್ರೀ ಯುವರ್ ಫುಟ್ ಸಂಸ್ಥೆಯ ಡೈಟರ್ ಹೆಷ್ ಹೇಳಿದ್ದಾರೆ. ಹಲವು ಕ್ರೀಡೆಗಳನ್ನು ಬರಿಗಾಲಿನಲ್ಲೇ ಆಡಲು ಬಯಸುವ ಕ್ರೀಡಾಪಟುಗಳಿಗೆ ಶೂ ಬದಲಿಗೆ ಉಪಯೋಗಿಸಬಹುದಾದ ಸಾಕ್ಸ್ ಅನುಕೂಲವಾಗಲಿದೆ.

ರಾಕ್ ಕ್ಲೈಂಬಿಂಗ್, ಡೈವಿಂಗ್, ಓಟ, ಬೀಚ್ ವಾಲಿಬಾಲ್ ನಂತಹ ಹಲವು ಕ್ರೀಡೆಗಳಲ್ಲಿ ಈಗಾಗಲೇ ಸೂಪರ್ ಸ್ಟ್ರಾಂಗ್ ಫಾಬ್ರಿಕ್ ನಿಂದ ತಯಾರಾದ ಸಾಕ್ಸ್ ನ್ನು ಪ್ರಾಯೋಗಿಕವಾಗಿ ಬಳಕೆಮಾಡಲಾಗಿದೆ. ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗುವ  ಶೂ ಬದಲಿಗೆ ಉಪಯೋಗಿಸಬಹುದಾದ ಸಾಕ್ಸ್ ನ ಬೆಲೆ 80 $ ಯಾಗಿರಲಿದೆ ಎಂದು ಅಂದಾಜಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT