ಆರೋಗ್ಯ-ಜೀವನಶೈಲಿ

ಹೆಚ್ಚು ಜಿಮ್ ಮಾಡುವುದು ಹೆಚ್ಚು ಮದ್ಯ ಸೇವನೆಗೆ ಕಾರಣವಾಗುತ್ತದೆ

Srinivas Rao BV

ವಾಷಿಂಗ್ ಟನ್: ವ್ಯಾಯಾಮ ಹಾಗೂ ಹೆಚ್ಚು ಮದ್ಯ ಸೇವನೆ ಎರಡೂ ಸಹ ತದ್ವಿರುದ್ಧ ಅಂಶಗಳು, ಒಂದು ಆರೋಗ್ಯಕರವಾದರೆ ಇನ್ನೊಂದು ಅನಾರೋಗ್ಯಕರ, ಆದರೆ ವಿಜ್ಞಾನಿಗಳ ಪ್ರಕಾರ ವ್ಯಾಯಾಮ ಹಾಗೂ ಮದ್ಯ ಸೇವನೆಗೆ ಸಂಬಂಧವಿದೆಯಂತೆ. 
ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ಹೆಚ್ಚು ದೈಹಿಕ  ವ್ಯಾಯಾಮ ಮಾಡಿದಾಗ ಹೆಚ್ಚು ಮದ್ಯ ಸೇವನೆಗೆ ಪ್ರಭಾವ ಬೀರುತ್ತದೆ. ಜಿಮ್ ನಂತರದ ಹಿತಾನುಭವವನ್ನು ಹಾಗೆಯೇ ಹಿಡಿದಿಟ್ಟುಕೊಳ್ಳುವುದಕ್ಕೆ ಹೆಚ್ಚು ಮದ್ಯ ಸೇವನೆ ಮಾಡುತ್ತಾರೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ವ್ಯಾಯಾಮ ಹಾಗೂ ಮದ್ಯ ಸೇವನೆ ಕ್ರೀಡೆ ಮತ್ತು ಫಿಟ್ನೆಸ್ ಅಂಶಕ್ಕೆ ಸಂಬಂಧಿಸಿದ್ದು ಯಾವುದೇ ಸಮಯದಲ್ಲೂ ಜಿಮ್/ ವ್ಯಾಯಾಮ ಜನರ ಮದ್ಯ ಸೇವನೆ ಪ್ರಮಾಣದ ಮೇಲೆ ಪರಿಣಾಮ ಬೀರುವುದನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಸಂಶೋಧಕರು ಗುರುತಿಸಿದ್ದಾರೆ.     

SCROLL FOR NEXT