ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಸಂಶೋಧನಾ ವರದಿ ವಿಧಿಸಿದ ಎಚ್ಚರಿಕೆ: ಇ-ಸಿಗರೇಟ್ ಗಳೂ ಆರೋಗ್ಯಕ್ಕೆ ಹಾನಿಕರ!

ಸಿಗರೇಟು ವ್ಯಸನಮುಕ್ತ 'ಔಷಧ' ಸೋಗಿನಲ್ಲಿ ಲಗ್ಗೆಯಿಟ್ಟ ಎಲೆಕ್ಟ್ರಾನಿಕ್ ಸಿಗರೇಟ್(ಇ-ಸಿಗರೇಟ್ ) ಗಳೂ ಸೇಫ್ ಅಲ್ಲ!.

ಇ-ಸಿಗರೇಟ್(ಸಂಗ್ರಹ ಚಿತ್ರ)
Srinivas Rao BV
Updated On : 29 Dec 2015, 12:37 pm

ನ್ಯೂಯಾರ್ಕ್: ಸಿಗರೇಟು ವ್ಯಸನಮುಕ್ತ 'ಔಷಧ' ಸೋಗಿನಲ್ಲಿ ಲಗ್ಗೆಯಿಟ್ಟ ಎಲೆಕ್ಟ್ರಾನಿಕ್ ಸಿಗರೇಟ್(ಇ-ಸಿಗರೇಟ್ ) ಗಳೂ ಸೇಫ್ ಅಲ್ಲ!.
ತಂಬಾಕು ಸಿಗರೇಟ್ ಗಳಂತೆಯೇ ಎಲೆಕ್ಟ್ರಾನಿಕ್ ಸಿಗರೇಟ್ ಗಳೂ ಸಹ ಕ್ಯಾನ್ಸರ್ ಗೆ ಕಾರಣವಗಾಬಲ್ಲವು ಹೊಸ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ. "ತಂಬಾಕು ಸಿಗರೇಟ್ ಗಳಿಗಿಂತ ಇ-ಸಿಗರೇಟ್ ಗಳು ಸುರಕ್ಷಿತವಾಗಿ ಉಳಿದಿಲ್ಲ" ಎಂದು ಕ್ಯಾಲಿಫೋರ್ನಿಯಾದ ಸಂಶೋಧನಾ ತಂಡದ ಪ್ರೊ. ಜೆಸ್ಸಿಕಾ ವಾಂಗ್-ರೊಡ್ರಿಗಜ್ ಹೇಳಿದ್ದಾರೆ. 
ಎರಡೂ ಮಾದರಿಯ ಸಿಗರೇಟ್ ನಿಂದ ಹೊರಬರುವ ಹೊಗೆಯನ್ನು ಸಂಗ್ರಹಿಸಿ ಸಂಶೋಧನೆ ನಡೆಸಲಾಗಿದ್ದು ಎರಡು ಮಾದರಿಯ ಹೊಗೆಯೂ ಮಾನವ ಜೀವಕೋಶಗಳಿಗೆ ಮಾರಕ ಎಂಬ ಅಂಶ ಬಹಿರಂಗವಾಗಿದೆ. ನಿಕೋಟಿನ್ ಇರುವ ಸಿಗರೇಟ್ ಗಳಿಂದ ಜೀವಕೋಶಗಳಿಗೆ ಅತಿ ಹೆಚ್ಚು ಹಾನಿಯುಂತಾಗುತ್ತದೆ, ನಿಕೋಟಿನ್ ಇಲ್ಲದ ಇ-ಸಿಗರೆಟ್ ಗಳಿಂದ ಆರೋಗ್ಯವಂತ ಜೀವಕೋಶಗಳು ಹಾಳಾಗುತ್ತವೆ, ಒಟ್ಟಿನಲ್ಲಿ ಎರಡೂ ಮಾದರಿಯ ಸಿಗರೇಟ್ ಗಳಿಂದ ಜೀವಕೋಶಗಳಿಗೆ ಹಾನಿಯುಂಟಾಗುವುದು ಖಚಿತ ಎನ್ನುತ್ತಿದೆ ಸಂಶೋಧನಾ ವರದಿ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement