ಎಬೋಲಾ ವೈರಸ್ 
ಆರೋಗ್ಯ-ಜೀವನಶೈಲಿ

ಎಬೋಲಾ: ವ್ಯಕ್ತಿ ಸತ್ತರೂ ವೈರಸ್ ಜೀವಂತ

ವಿಶ್ವವನ್ನೇ ಭಯಭೀತರನ್ನಾಗಿಸಿರುವ ಮಾರಕ ರೋಗದ ಕುರಿತು ಮತ್ತೊಂದು ಭಯಾನಕ ಸಂದೇಶ...

ನವದೆಹಲಿ: ವಿಶ್ವವನ್ನೇ ಭಯಭೀತರನ್ನಾಗಿಸಿರುವ ಮಾರಕ ರೋಗದ ಕುರಿತು ಮತ್ತೊಂದು ಭಯಾನಕ ಸಂದೇಶವೊಂದನ್ನು ವಿಶ್ವ ಆರೋಗ್ಯ ಸಂಸ್ಥೆ ರವಾನಿಸಿದೆ.

ವಿಶ್ವದೆಲ್ಲೆಡೆ ಮರಣ ಮೃದಂಗ ಮುಂದುವರಿಸಿರುವ ಎಬೋಲಾ ಕುರಿತಂತೆ ಸಂಶೋಧಕರು ಎಚ್ಚರಿಕೆ ಸಂದೇಶವನ್ನು ನೀಡಿದ್ದು, ಎಬೋಲಾ ರೋಗದಿಂದ ಸತ್ತ ವ್ಯಕ್ತಿಯ ದೇಹದಲ್ಲಿ ವೈರಸ್ 7 ದಿನಗಳವರೆಗೂ ಜೀವಂತವಾಗಿರುತ್ತವೆ ಎಂದು ಹೇಳಿದ್ದಾರೆ.

ಎಬೋಲಾ ರೋಗಕ್ಕೆ ತುತ್ತಾಗಿ ಸತ್ತ ವ್ಯಕ್ತಿಯ ದೇಹದಲ್ಲಿದ್ದ ವೈರಸ್‌ಗಳು ಸಾವನ್ನಪ್ಪಿರುತ್ತವೆ ಎಂದು ಎಲ್ಲರೂ ನಂಬಿದ್ದರು. ಆದರೆ, ಈ ಕುರಿತಂತೆ ಸಂಶೋಧನೆ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆಯುಗೆ ಭಯಾನಕ ಮಾಹಿತಿ ದೊರಕಿದ್ದು, ಎಬೋಲಾಗೆ ತುತ್ತಾದ ವ್ಯಕ್ತಿಯ ದೇಹದಲ್ಲಿ ಕನಿಷ್ಟ 7 ದಿನಗಳು ವೈರಸ್ ಜೀವಂತವಾಗಿರುತ್ತದೆ ಎಂದು ಹೇಳಿದೆ.

ಸತ್ತ ವ್ಯಕ್ತಿಯ ದೇಹವನ್ನು ಮುಟ್ಟಿದ ವ್ಯಕ್ತಿಗೂ ಇದರ ಸೋಂಕು ಹರಡಲಿದ್ದು, ಎಬೋಲಾದಿಂದ ಸಾವನ್ನಪ್ಪಿದ ವ್ಯಕ್ತಿಯ ದೇಹ ಅತ್ಯಂತ ಅಪಾಯಕಾರಿಯಾಗಿದೆ. ವ್ಯಕ್ತಿಯ ದೇಹವನ್ನು ಸುಡುವಾಗ ಬೆಂಕಿಯ ಸಣ್ಣ ಕಿಡಿಯಿಂದಲೂ ಎಬೋಲಾ ವೈರಸ್ ಇನ್ನಿತರರಿಗೆ ಹರಡುತ್ತವೆ ಎಂದು ತಿಳಿಸಿದೆ. ಎಬೋಲಾ ರೋಗದಿಂದ ಬಳಲುತ್ತಿರುವವರ ದೇಹಲ್ಲಿರುವ ವೈರಸ್‌ಗಳು ಎಲ್ಲಿಯವರೆಗೆ ಜೀವಂತವಾಗಿರುತ್ತವೆಂಬುದರ ಕುರಿತು ಈವರೆಗೂ ಯಾರೊಬ್ಬರೂ ಸಂಶೋಧನೆ ನಡೆಸಿಲ್ಲ. ಎಬೋಲಾ ರೋಗದಿಂದಾಗಿ ಸಾವನ್ನಪ್ಪಿರುವವರಿಂದ ಸಾರ್ವಜನಿಕರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದ್ದು, ರೋಗಪೀಡತ ವ್ಯಕ್ತಿಯಿಂದ ದೂರವಿರುವುದು ಒಳ್ಳೆಯದು ಎಂದು ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT