ನ್ಯೂಯಾರ್ಕ್: ಮಹಿಳೆಯರೇ ಗಮನಿಸಿ! ನಿಮ್ಮ ಲೈಂಗಿಕ ಆಸಕ್ತಿ ಕುಂದಿದೆಯಾದರೆ ಇಂದು ರಾತ್ರಿ ಒಂದು ಘಂಟೆ ಹೆಚ್ಚು ನಿದ್ದೆ ಮಾಡಿ ಮತ್ತು ಅದರ ಫಲವನ್ನು ಮುಂದಿನ ದಿನ ಅನುಭವಿಸಿ!
ಹೌದು ಹೀಗೆನ್ನುತ್ತದೆ ಹೊಸದೊಂದು ಅಧ್ಯಯನ. ಮಾಮೂಲಿಗಿಂತ ಒಂದು ಘಂಟೆ ಹೆಚ್ಚು ನಿದ್ದೆ, ಮಹಿಳೆಯರಿಗೆ ತನ್ನ ಸಂಗಾತಿಯ ಜೊತೆಗಿನ ಲೈಂಗಿಕ ಚಟುವಟಿಕೆಯನ್ನು ೧೪% ಹೆಚ್ಚಿಸುತ್ತದಂತೆ!
ಲೈಂಗಿಕ ಔಷಧ ಪತ್ರಿಕೆಯಲ್ಲಿ (ಜರ್ನಲ್ ಆಫ್ ಸೆಕ್ಸ್ಯುಯಲ್ ಮೆಡಿಸನ್) ಪ್ರಕಟವಾಗಿರುವ ಈ ಅಧ್ಯಯನದ ಪ್ರಕಾರ ಹೆಚ್ಚು ಸಮಯ ಮಲಗಿದ ಮಹಿಳೆಯರು ಕಡಿಮೆ ನಿದ್ದೆ ಮಾಡುವ ಮಹಿಳೆಯರಿಂಗಿತ ಹೆಚ್ಚು ಲೈಂಗಿಕ ಆಸಕ್ತಿ ಉಳ್ಳವರಾಗಿರುತ್ತಾರೆ ಎನ್ನುತ್ತದೆ.
ಸರಾಸರಿಯಾಗಿ ಮಹಿಳೆಯರು ಏಳು ಘಂಟೆ ೨೨ ನಿಮಿಷ ನಿದ್ದೆ ಮಾಡುವುದಾಗಿ ವರದಿಯಾಗಿದೆ.
"ಲೈಂಗಿಕ ಆಸಕ್ತಿ ಮತ್ತು ಉದ್ರೇಕತೆಯ ಮೇಲೆ ನಿದ್ದೆ ಬೀರುವ ಪರಿಣಾಮದ ಬಗ್ಗೆ ಅತಿ ಕಡಿಮೆ ಗಮನ ನೀಡಲಾಗಿದೆ ಆದರೆ ನಿದ್ರಾಹೀನತೆ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಮತ್ತು ಉದ್ರೇಕತೆಯನ್ನು ಕಡಿಮೆ ಮಾಡುತ್ತದೆ" ಎಂದು ಮಿಷಿಗನ್ ವಿಶ್ವವಿದ್ಯಾಲಯದ ಸಂಶೋಧಕ ಡೇವಿಡ್ ಕಲಂಬಾಕ್ ತಿಳಿಸಿದ್ದಾರೆ.
ಕಾಲೇಜಿಗಿ ಹೋಗುವ ೧೭೧ ಮಹಿಳೆಯರನ್ನು ಕಲಂಬಾಕ್ ಮತ್ತು ಸಹೋದರರು ಅಧ್ಯಯನ ಮಾಡಿದ್ದಾರೆ.
"ಇದು ತಿಳಿಸುವ ಸಂಗತಿಯೆಂದರೆ ಹೆಚ್ಚು ನಿದ್ದೆ ಮಾಡಬೇಕೆಂದಲ್ಲ ಆದರೆ ನಮ್ಮ ದೇಹ ಮತ್ತು ಮನಸ್ಸಿಗೆ ಅಗತ್ಯವಾದಷ್ಟು ನಿದ್ದೆಯಿಂದ ತಪ್ಪಿಸಿಕೊಳ್ಳಬಾರದು ಎಂಬುದು" ಎಂದು ಅವರು ತಿಳಿಸಿದ್ದಾರೆ.