Representational Image 
ಆರೋಗ್ಯ-ಜೀವನಶೈಲಿ

ಮಹಿಳೆಯರೇ ಎಚ್ಚರ..ಹೆಚ್ಚು ಹೊತ್ತು ಒಂದೇ ಕಡೆ ಕೂರುವುದರಿಂದ ಕ್ಯಾನ್ಸರ್ ಬರಬಹುದು!

ಮಹಿಳೆಯರು ಗಂಟೆಗಟ್ಟಲೆ ಒಂದೇ ಕಡೆ ಕುಳಿತುಕೊಂಡಿದ್ದರೆ ಅದು ಕ್ಯಾನ್ಸರ್‌ಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯೊಂದು...

ಮಹಿಳೆಯರು ಗಂಟೆಗಟ್ಟಲೆ ಒಂದೇ ಕಡೆ ಕುಳಿತುಕೊಂಡಿದ್ದರೆ ಅದು ಕ್ಯಾನ್ಸರ್‌ಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಆಲ್ಪಾ ಪಟೇಲ್ ಎಂಬವರ ನೇತೃತ್ವದಲ್ಲಿ ಅಮೆರಿಕದ ಕ್ಯಾನ್ಸರ್ ಸೊಸೈಟಿಯ ಅಧ್ಯಯನ ತಂಡ ಮಹಿಳೆಯರು 6 ಗಂಟೆಗಿಂತ ಹೆಚ್ಚು ಕಾಲ ಕೂತಲ್ಲೇ ಕುಳಿತಿದ್ದರೆ ಅವರಿಗೆ ಗರ್ಭಕೋಶ ಮತ್ತು  ಸ್ತನ ಅರ್ಬುದ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ದೀರ್ಘ ಹೊತ್ತು ಯಾತ್ರೆ ಮಾಡುವಾಗ, ಕಂಪ್ಯೂಟರ್ ಮುಂದೆ, ಇನ್ನಿತರ ಕೆಲಸ ಮಾಡುವಾಗ ಮಹಿಳೆಯರು ಸುಮಾರು 12  ಗಂಟೆಗಳ ಕಾಲ ಕುಳಿತಿರುತ್ತಾರೆ. ಹೆಚ್ಚು ಕಾಲ ಒಂದೇ ಜಾಗದಲ್ಲಿ ಕುಳಿತುಕೊಳ್ಳುವುದರಿಂದ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಕ್ಯಾನ್ಸರ್ ಬರುವ ಸಾಧ್ಯತೆಯಿದೆ.

ಆದ್ದರಿಂದ ಉತ್ತಮ ವ್ಯಾಯಾಮ ಮಾಡುವುದು ದೇಹಕ್ಕೆ ಒಳ್ಳೆಯದು. ದೀರ್ಘ ಹೊತ್ತುಗಳ ಕಾಲ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆಗಾಗ್ಗೆ ಎದ್ದು ಮೈ ಕೊಡವುದು, ನಡೆದಾಡುವುದನ್ನು ಮಾಡಿದರೆ ಈ ರೀತಿಯ ತೊಂದರೆಗಳು ಇರಲ್ಲ ಎಂದು ಅಧ್ಯಯನ ತಂಡ ಹೇಳಿದೆ.

ಸುಮಾರು 146,000 ಜನರನ್ನು ಅಧ್ಯಯನಕ್ಕಾಗಿ ಬಳಸಿಕೊಳ್ಳಲಾಗಿತ್ತು.
ಅಧ್ಯಯನದಿಂದ ತಿಳಿದುಕೊಂಡ ಸಂಗತಿಗಳು

6 ಗಂಟೆಯಿಂದ ಹೆಚ್ಚು ಕಾಲ ಕುಳಿತುಕೊಂಡೇ ಕೆಲಸ ಮಾಡುವ ಮಹಿಳೆಯರನ್ನು ಇತರರಿಗೆ ಹೋಲಿಸಿದರೆ ದೀರ್ಘಕಾಲ ಕುಳಿತೇ ಕೆಲಸ ಮಾಡುವವರಿಗೆ ಶೇ. 37ರಷ್ಟು ಜೀವಕ್ಕೆ ಅಪಾಯ ಹೆಚ್ಚಿದೆ.

ಕನಿಷ್ಟ 6 ಗಂಟೆಗಳ ಕಾಲ ಕುಳಿತಲ್ಲೇ ಕುಳಿತುಕೊಳ್ಳುವ ಪುರುಷರಲ್ಲಿ ಶೇ. 17 ರಷ್ಟು ಮಂದಿಗೆ ಜೀವಕ್ಕೆ ಅಪಾಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!