ಸಂಗ್ರಹ ಚಿತ್ರ 
ಆರೋಗ್ಯ-ಜೀವನಶೈಲಿ

ಜಗತ್ತಿನಲ್ಲಿ ಶೇ. 95 ರಷ್ಟು ಜನರಿಗೆ ಆರೋಗ್ಯ ಸಮಸ್ಯೆ!

ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ(ಜಿ.ಬಿ.ಡಿ) ವರದಿ ಪ್ರಕಾರ ಜಗತ್ತಿನಲ್ಲಿ ಶೇ.95 ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಾಷಿಂಗ್ಟನ್: ಜಾಗತಿಕ ಮಟ್ಟದಲ್ಲಿ ಅನಾರೋಗ್ಯದ ಬಗ್ಗೆ ಅಧ್ಯಯನ ನಡೆದಿದ್ದು ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ(ಜಿ.ಬಿ.ಡಿ) ವರದಿ ಪ್ರಕಾರ ಜಗತ್ತಿನಲ್ಲಿ ಶೇ.95 ಜನರು  ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ  ಎಂದು ತಿಳಿದುಬಂದಿದೆ.

ಮೂರನೇ ಒಂದು ಭಾಗಕ್ಕೂ ಅಧಿಕದಷ್ಟು ಜನರು ಐದು ರೀತಿಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ದಿ ಲ್ಯಾನ್ಸೆಟ್ ಜರ್ನಲ್ ನಲ್ಲಿ ಪ್ರಕಟವಾಗಿರುವ ಜಿ.ಬಿ.ಡಿ ವರದಿ ಬಹಿರಂಗಗೊಳಿಸಿದೆ. 2013 ರಲ್ಲಿ 20 ಜನರ ಪೈಕಿ ಕೇವಲ ಒಬ್ಬ ವ್ಯಕ್ತಿ ಮಾತ್ರ(ಜಾಗತಿಕ ಮಟ್ಟದಲ್ಲಿ ಶೇ.4.3 ರಷ್ಟು ಜನ) ಯಾವುದೇ ಕಾಯಿಲೆ ಇಲ್ಲ ಎಂದು ತಿಳಿದುಬಂದಿದೆ.  1990 ರಲ್ಲಿ ಜಾಗತಿಕ ಮಟ್ಟದಲ್ಲಿ ಅನಾರೋಗ್ಯಕ್ಕೊಳಗಾದವರ ಅಂಕಿ ಅಂಶ ಶೇ.21 ರಷ್ಟಿದ್ದರೆ, 2013 ರ ವೇಳೆಗೆ ಶೇ. 31 ಕ್ಕೆ ಏರಿಕೆಯಾಗಿದೆ.

ಬೆನ್ನು ನೋವು ಮತ್ತು ತೀವ್ರ ಖಿನ್ನತೆ  2013 ರಲ್ಲಿ ಪ್ರತಿ ದೇಶದಲ್ಲೂ ಅತಿ ಹೆಚ್ಚು ಕಂಡುಬಂದಿರುವ ಆರೋಗ್ಯ ಸಮಸ್ಯೆಯಾಗಿದೆ. ವ್ಯಕ್ತಿಯೋಬ್ಬನ ಸಾಮರ್ಥ್ಯವನ್ನು ಕುಗ್ಗಿಸುವ ಪ್ರಧಾನ ಅಂಶಗಳಲ್ಲಿ ಬೆನ್ನು ನೋವು ಮತ್ತು ತೀವ್ರ ಖಿನ್ನತೆ ಪ್ರಮುಖವಾಗಿವೆ ಎಂದು ವರದಿ ತಿಳಿಸಿದೆ. ಜಿ.ಬಿ.ಡಿ ಅಧ್ಯಯನದ ಪ್ರಕಾರ ಜಾಗತಿಕ ಮಟ್ಟದಲ್ಲಿ ಅರ್ಧದಷ್ಟು ಜನರು ಬೆನ್ನಿನ ನೋವು, ಕುತ್ತಿಗೆ ನೋವು ಮತ್ತು ಸಂಧಿವಾತ ಹಾಗು ಮಾನಸಿಕ ಅಸ್ವಸ್ಥತೆ ಮತ್ತು ಮಾದಕವಸ್ತುಗಳಿಂದ ಅನಾರೋಗ್ಯಪೀಡಿತರಾಗಿದ್ದಾರೆ. ಆದರೆ ಇದಕ್ಕೆ  ಮುನ್ನೆಚ್ಚರಿಕೆ ಕೈಗೊಳ್ಳಲು ಸೂಕ್ತ ಗಮನ ಹರಿಸುತ್ತಿಲ್ಲ ಎಂದು ಅಧ್ಯಯನ ನಡೆಸಿದ ಜಿ.ಬಿ.ಡಿ ಸಂಸ್ಥೆ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್