ಆರೋಗ್ಯ-ಜೀವನಶೈಲಿ

ಹೋಳಿ ಆಡೋಕು ಮುನ್ನ ಕೂದಲ ಆರೈಕೆ

ಹೋಳಿ ಬಣ್ಣಗಳ ಹಬ್ಬವೇನು ಸರಿ, ಆದರೆ ಅಂತಹ ಬಣ್ಣಗಳ ಎಚ್ಚರದಿಂದಿರಿ. ಬಣ್ಣ ತ್ವಚೆ ಮತ್ತು...

ಹೋಳಿ ಬಣ್ಣಗಳ ಹಬ್ಬವೇನು ಸರಿ, ಆದರೆ ಅಂತಹ ಬಣ್ಣಗಳ ಎಚ್ಚರದಿಂದಿರಿ. ಬಣ್ಣ ತ್ವಚೆ ಮತ್ತು ಕೂದಲನ್ನು ಹಾಳು ಮಾಡುವ ಸಾಧ್ಯತೆ ಇದೆ.

ಹೋಳಿ ಹಬ್ಬ ಬಂತೆಂದರೆ ಎಲ್ಲಿಲ್ಲದ ಸಡಗರ, ಎಲ್ಲೆಂದರಲ್ಲಿ ಬಣ್ಣ ಹಚ್ಚುವವರೇ, ಅದು ಬಣ್ಣದ ನೀರಲ್ಲಿ, ಆಡುವುದು, ವಿವಿಧ ಬಣ್ಣಗಳನ್ನು ಒಬ್ಬರಿಗೊಬ್ಬರು ಹಚ್ಚಿ ಸಂತೋಷ ಪಡುವುದು. ಈ ಸಂತೋಷ ನಡುವೆ ಒಂದು ಸ್ವಲ್ಪ ಭಯ ಎಲ್ಲರಿಗೂ ಇದ್ದೇ ಇರುತ್ತದೆ, ಅದೇ ಕೂದಲ ಬಗ್ಗೆ. ಬಣ್ಣಗಳು ಕೂದಲಿಗೆ ಹಾನಿಕರ, ಬಣ್ಣ ಹಚ್ಚಲು ಇಷ್ಟ, ಆದ್ರೆ ಕೂದಲು ಉದುರುತ್ತೇ ಎಂಬ ಭಯದಿಂದ ದೂರು ಉಳಿಯುವುದಂತು ಸಹಜ.

ಹೋಳಿ ಹಬ್ಬದ ದಿನ ಬಣ್ಣದಲ್ಲಿ ಆಡಿ, ನಂತರ ಆ ರಂಗನ್ನು ಕೂದಲಿನಿಂದ ಹೋಗಲಾಡಿಸಲು ಕೆಲವು ಟಿಪ್ಸ್ ಇಲ್ಲಿವೆ...

  • ಕೂದಲಿಗೆ ಬಣ್ಣವಾದಲ್ಲಿ, ಕೂದಲನ್ನು ಶುದ್ಧ ನೀರಿನಲ್ಲಿ ತೊಳೆಯಬೇಕು. ಸರಳ ನೀರಿನಲ್ಲಿ ಚಿಕ್ಕ ಕಣಗಳು ಹೋಗುವಂತೆ ಕೂದಲನ್ನು ತೊಳೆಯಬೇಕು.
  • ಪ್ರತಿನಿತ್ಯ ತಾವು ಬಳಸುವ ಶ್ಯಾಂಪು ತೆಗೆದು ಒದ್ದೆ ಕೂದಲಿಗೆ ಹಾಕಿ, 2 ನಿಮಿಷದವರೆಗೆ ನೆತ್ತಿಯ ಭಾಗದಲ್ಲಿ ಉಜ್ಜಬೇಕು. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದಾದ ಬಳಿಕ ಒಂದು ಜಗ್ಗಿನ ತುಂಬಾ ನೀರು ತೆಗೆದು ಅದಕ್ಕೆ ನಿಂಬೆ ರಸ ಮಿಶ್ರಣ ಮಾಡಬೇಕು. ಅದನ್ನು ತಲೆ ಬುರುಡೆಗೆ ಹಾಕಿ ತೊಳೆಯಬೇಕು. ಹೀಗೆ ಮಾಡುವುದರಿಂದ ತಲೆಬುರುಡೆಯ ಆಮ್ಲ-ಕ್ಷಾರೀಯ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ.

ರಾಸಾಯನಿಕ ಬಣ್ಣಗಳ ಹಾವಳಿಯಿಂದ ತಡೆಯಲು ಟಿಪ್ಸ್
  • ಮೆಂತ್ಯ ಬೀಜವನ್ನು ಮೊಸರಿನಲ್ಲಿ ನೆನೆಹಾಕಿ ಕೆಲವು ನಿಮಿಷದ ನಂತರ ಅದನ್ನು ತಲೆ ಬುರುಡೆಗೆ ಹಚ್ಚಿ 30 ನಿಮಿಷ ಬಿಡಬೇಕು. ನಂತರ ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯಬೇಕು.
  • 1 ಟೆಬಲ್ ಸ್ಪೂನ್ ವೆನಿಗರನ್ನು 3 ಟೆಬಲ್ ಸ್ಪೂನ್ ಎಣ್ಣೆಗೆ ಮಿಶ್ರಣ ಮಾಡಿ ಹಚ್ಚಬೇಕು. ಹೀಗೆ ಮಾಡುವುದರಿಂದ ಕೂದಲಿಗೆ ಆಗುವಂತಹ ಹಾನಿಯನ್ನು ತಡೆಯಬಹುದು.
  • ಹೋಳಿ ಹಬ್ಬಕ್ಕೂ ಮುನ್ನ ಹೇರ್ ಮಸಾಜ್ ಮಾಡಿಸಿಕೊಳ್ಳುವುದು ಉತ್ತಮ. ಮಸಾಜ್ ಮಾಡುವುದರಿಂದ ರಕ್ತ ಸಂಚಲನ ಹೆಚ್ಚಾಗಿ, ಕೂದಲಿನ ಬುಡ ಗಟ್ಟಿಯಾಗುತ್ತದೆ.
  • ಹೋಳಿ ಆಡುವ ಮುನ್ನ ಬೆಚ್ಚಗಿನ ಕೊಬ್ಬರಿಯನ್ನು ತಲೆಗೆ ಹಚ್ಚಿ ಕೂದಲಿಗೆ ಪೂರ್ಣವಾಗಿ ಸವರಿ, ಕೂದಲ ಬೇರಿನಲ್ಲಿ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ರಾಸಾಯನಿಕ ಮಿಶ್ರಿತ ಬಣ್ಣ ನಿಮ್ಮ ಕೂದಲಿಗೆ ಅಂಟುವುದಿಲ್ಲ.
  • ಸಸ್ಯಜನ್ಯತೈಲಗಳನ್ನು ಬಳಸಬೇಕು. ರಾಸಾಯನಿಕ ಮಿಶ್ರಿತ ಎಣ್ಣೆಯನ್ನು ಬಳಸುವುದು ಕಡಿಮೆ ಮಾಡಬೇಕು. ಸಸ್ಯಜನ್ಯತೈಲವನ್ನು ಬಳಸುವುದರಿಂದ ಕೂದಲ ಉದುರುವಿಕೆಯನ್ನು ತಡೆಯುತ್ತದೆ.
  • ಕವಲೊಡೆದ ಕೂದಲನ್ನು ಕತ್ತರಿಸಬೇಕು. ಕವಲೊಡೆದ ಕೂದಲಿದ್ದರೆ, ಒಡೆದ ಕೂದಲಿನ ಮಧ್ಯ ಭಾಗದಲ್ಲಿ ಬಣ್ಣ ಹೋಗಿ, ಕೂದಲನ್ನು ಒಣಗಿದಂತೆ ಮಾಡುತ್ತದೆ.
  • ಹೋಲಿ ಆಡುವ ಎರಡು ದಿನಗಳ ಮುಂಚೆ ಡ್ರೈ ಶಾಂಪೂಗಳನ್ನು ಬಳಕೆ ಮಾಡಬಾರದು. ಇದನ್ನು ಡ್ಯಾಂಡ್ರಫ್ ಹೆಚ್ಚು ಮಾಡುತ್ತದೆ. ಹಾಗಾಗಿ, ಡ್ರೈ ಶಾಂಪೂ ಬಳಕೆ ಕಡಿಮೆ ಮಾಡಬೇಕು.
  • ಬೇಬಿ ಎಣ್ಣೆ ಬಳಸುವುದು ಉತ್ತಮ. ಬೇಬಿ ಎಣ್ಣೆಯಲ್ಲಿ ರಾಸಾಯನಿಕ ಅಂಶ ಕಡಿಮೆ ಇರುವುದರಿಂದ ಕೂದಲಿಗೆ ಹಾನಿ ಉಂಟು ಮಾಡುವುದಿಲ್ಲ.
  • ಹೋಲಿ ಹಾಡಬೇಕಾದರೆ, ಕೂದಲು ಬಿಡುವ ಬದಲು, ಜಡೆ ಎಣೆದುಕೊಂಡರೆ ಉತ್ತಮ.
  • ಹೆಚ್ಚಿನ ಮಟ್ಟದಲ್ಲಿ ಕೂದಲು ಉದುರುವಿಕೆ, ಹಾನಿಯಾದರೆ, ಅಂತಹವರು ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.

-ಮೈನಾಶ್ರೀ.ಸಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT