ದಾಹ ನೀಗಿಸಲು ನಿಂಬೆ ಪಾನಕ ಉತ್ತಮ ಪಾನೀಯ! 
ಆರೋಗ್ಯ-ಜೀವನಶೈಲಿ

ದಾಹ ನೀಗಿಸಲು ನಿಂಬೆ ಪಾನಕ ಉತ್ತಮ ಪಾನೀಯ!

ಬೇಸಿಗೆ ಬಂತೆಂದರೆ ಸಾಕು ದಾಹ ನೀಗಿಸಿಕೊಳ್ಳಲು ಜನರು ಮೊದಲು ಮೊರೆ ಹೋಗುವುದು ತಂಪು ಪಾನೀಯಗಳ ಬಳಿಗೆ. ದಾಹದ ಸಮಯದಲ್ಲಿ ಯಾವ ಪಾನೀಯ ಒಳ್ಳೆಯದು ಯಾವು ಪಾನೀಯ ಹಾನಿಕಾರಕ ಎಂದು ಯೋಚಿಸುವವರ ಸಂಖ್ಯೆ ಬಹಳ ವಿರಳ. ಪಾನೀಯ ಸೇವನೆಗೆ ಬಹಳಷ್ಟು ಜನ ಅಂಗಡಿಗಳನ್ನೇ...

ಬೇಸಿಗೆ ಬಂತೆಂದರೆ ಸಾಕು ದಾಹ ನೀಗಿಸಿಕೊಳ್ಳಲು ಜನರು ಮೊದಲು ಮೊರೆ ಹೋಗುವುದು ತಂಪು ಪಾನೀಯಗಳ ಬಳಿಗೆ. ದಾಹದ ಸಮಯದಲ್ಲಿ ಯಾವ ಪಾನೀಯ ಒಳ್ಳೆಯದು ಯಾವು ಪಾನೀಯ ಹಾನಿಕಾರಕ ಎಂದು ಯೋಚಿಸುವವರ ಸಂಖ್ಯೆ ಬಹಳ ವಿರಳ. ಪಾನೀಯ ಸೇವನೆಗೆ ಬಹಳಷ್ಟು ಜನ ಅಂಗಡಿಗಳನ್ನೇ ಅವಲಂಬಿಸಿರುವುದನ್ನು ಪ್ರತಿ ನಿತ್ಯ ನಾವು ಕಾಣಬಹುದು.

ಅಂಗಡಿಗಳಲ್ಲಿ ಸಿಗುವ ಕೃತಕ ತಂಪುಪಾನೀಯಗಳನ್ನು ತೆಗೆದುಕೊಂಡು ಕುಡಿಯುವುದಂತೂ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಇಂತಹ ತಂಪು ಪಾನೀಯಗಳು ಆರೋಗ್ಯಕ್ಕೆ ಸಾಕಷ್ಟು ತೊಂದರೆಗಳನ್ನು ತಂದೊಡ್ಡುತ್ತದೆ ಎಂಬುದು ಎಷ್ಟೋ ಮಂದಿ ತಿಳಿದಿದ್ದರೂ ಅವುಗಳನ್ನು ಕುಡಿಯುವ ಚಟವನ್ನು ಮಾತ್ರ ಬಿಡುವುದೇ ಇಲ್ಲ.

ಸಾಧ್ಯವಾದಷ್ಟು ನಾವು ಅಂಗಡಿಗಳಲ್ಲಿ ಸಿಗುವ ತಂಪು ಪಾನೀಯಗಳನ್ನು ಬಿಟ್ಟು ಮನೆಯಲ್ಲೇ ಹಣ್ಣುಗಳು, ನಿಂಬೆ, ಮಜ್ಜಿಗೆಗಳನ್ನು ಬಳಸಿ ಪಾನೀಯ ತಯಾರಿಸಿ ಕುಡಿಯುವುದು ದೇಹಕ್ಕೆ ಮತ್ತು ಆರೋಗ್ಯಕ್ಕೆ ಬಹಳ ಒಳ್ಳೆಯದು.

ತಂಪು ಪಾನೀಯದಲ್ಲಿ ಸುಲಭವಾಗಿ ತಯಾರಿಸಿಕೊಳ್ಳಬಲ್ಲ ಪಾನೀಯವೆಂದರೆ ಅದು ನಿಂಬೆ ಪಾನಕ.ಈ ನಿಂಬೆ ಪಾನಕಕ್ಕೆ ಬಹಳ ಖರ್ಚು ಆಗುವುದಿಲ್ಲ. ಕಡಿಮೆ ಸಮಯದಲ್ಲೇ ವೇಗವಾಗಿ ತಯಾರಿಸಿಕೊಳ್ಳಬಹುದು.

ನಿಂಬೆ ಪಾನಕ ತಯಾರಿಸುವ ವಿಧಾನ ಬಹಳ ಸುಲಭ




1 ಲೋಟ ನೀರು ತೆಗೆದುಕೊಂಡು ಅದಕ್ಕೆ ಸಕ್ಕರೆ ಹಾಕಿ ಕರಗಿಸಿಕೊಳ್ಳಬೇಕು. ನಂತರ ಏಲಕ್ಕಿಪುಡಿಯನ್ನು ಹಾಕಿದರೆ ನಿಂಬೆ ಪಾನಕ ತಯಾರಾಗುತ್ತದೆ. ಬೇಕಿದ್ದರೆ ಇದಕ್ಕೆ ಸ್ವಲ್ಪ ಶುಂಠಿಯನ್ನು ಸೇರಿಸಬಹುದು. ನಂತರ ಫ್ರಿಡ್ಜ್ ನಲ್ಲಿಟ್ಟು ಕುಡಿದರೆ ಹೊಟ್ಟೆ ತಣ್ಣಗಿರುತ್ತದೆ. ಜೊತೆಗೆ ದಾಹವೂ ಶಮನವಾಗುತ್ತದೆ.

ನಿಂಬೆ ಹಣ್ಣಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ

  • ನಿಂಬೆ ಪಾನೀಯ ಜೀರ್ಣ ಶಕ್ತಿ ಹೆಚ್ಚಿಸುತ್ತದೆ. ಬೆಳಿಗ್ಗೆ ಎದ್ದ ಕೂಡಲೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಪಾನಕ ಕುಡಿದರೆ ಪಚನಕ್ರಿಯೆ ಸುಗಮಗೊಳ್ಳುತ್ತದೆ.
  • ಪ್ರತಿದಿನ ನಿಂಬೆ ಪಾನಕ ಕುಡಿಯುವುದರಿಂದ ಯಕೃತ್ತಿನಲ್ಲಿರುವ ವಿಷಗಳು ಹೊರಹೋಗಲು ಸಹಾಯವಾಗಿದೆ.
  • ನಿಂಬೆ ರಸ ಆ್ಯಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ನಿಂಬೆ ರಸವನ್ನು ಸೇವಿಸುವದರಿಂದ ಸಮಸ್ಯೆಯಿಂದ ದೂರವಿರಬಹುದು. ಕಾರಣ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಇದ್ದರೂ ಅದು ಪ್ರಬಲ ಆ್ಯಸಿಡ್ ಆಗಿರುವುದಿಲ್ಲದಿರುವುದರಿಂದ ಬೆವರಿನ ಮೂಲಕ ಈ ಸಿಟ್ರಿಕ್ ಆ್ಯಸಿಡ್ ದೇಹದಿಂದ ಹೊರಹೋಗುತ್ತದೆ. ಅಲ್ಲದೆ, ನಿಂಬೆರಸದಿಂದ ಮೂತ್ರದ್ವಾರದಲ್ಲಿರುವ ಸೋಂಕನ್ನು ನಿಂಬೆ ರಸ ದೂರಾಗಿಸುತ್ತದೆ.
  • ನಿಂಬೆಹಣ್ಣಿನ ರಸದಲ್ಲಿ ವಿಟಮಿನ್ ಸಿ ಇರುವುದರಿಂದ ದೇಹದ ಪ್ರತಿರೋಧ ಶಕ್ತಿ ಹೆಚ್ಚಿಸುತ್ತದೆ. ಮತ್ತು ದೇಹದಲ್ಲಿರುವ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
  • ಬಾಯಿಯ ದುರ್ವಾಸನೆಯನ್ನು ದೂರಾಗಿಸುವ ಈ ನಿಂಬೆಯನ್ನು ದೇಹದ ತೂಕ ಇಳಿಸಲು ಬಳಸಲಾಗುತ್ತದೆ.
  • ಇವಿಷ್ಟೂ ದೇಹದ ಆರೋಗ್ಯದ ಬಗ್ಗೆಯಾದರೆ ಇನ್ನು ಸೌಂದರ್ಯ ವಿಚಾರದಲ್ಲೂ ನಿಂಬೆ ರಸ ಉತ್ತಮ ಔಷಧಿ ಎಂತಲೇ ಹೇಳಬಹುದು. ನಿಂಬೆರಸದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಅಂಶ ತ್ವಚೆಯ ಚೇತರಿಕೆಗೆ ಬಂದು ಚರ್ಮ ಕಾಂತಿಯುತವಾಗಿರುವಂತೆ ಮಾಡುತ್ತದೆ. ನಿಂಬೆಪಾನಕದಿಂದ ರಕ್ತದಲ್ಲಿರುವ ವಿಷಕಾರಿ ಅಂಶಗಳು ಹೊರಹೋಗುತ್ತದೆ. ಅಲ್ಲದೆ, ಚರ್ಮದಲ್ಲಿರುವ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಕಿ ಹಬೆಯನ್ನು ತೆಗೆದುಕೊಳ್ಳುವುದರಿಂದ ಚರ್ಮದಲ್ಲಿ ತಾಜಾತನವನ್ನು ಕಾಣಬಹುದು.

-ಮಂಜುಳ.ವಿ.ಎನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; 2 ದಿನಗಳ ಡೆಡ್‌ಲೈನ್‌!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸ್ಟಿಂಗ್‌ ಆಪರೇಷನ್‌ ರೂವಾರಿ, ರೌಡಿಶೀಟರ್‌ ಫೋಟೋ ರಿಲೀಸ್‌ ಮಾಡಿದ ಕುಮಾರಸ್ವಾಮಿ!