ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಸಂಚಕಾರ

ದಿನದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಪದೇ ಪದೇ ಕಾಫಿ ಕುಡಿಯುವುದರಿಂದ ನಮ್ಮ ಅನಾರೋಗ್ಯಕ್ಕೆ ನಾವೇ ಕಾರಣರಾಗುತ್ತೇವೆ.....

ಸಾಂದರ್ಭಿಕ ಚಿತ್ರ
Shilpa D
Updated On : 29 May 2015, 1:09 am

ಬೆಳಗ್ಗೆ ಬೆಳಗ್ಗೆ ಪೇಪರ್ ಓದಿಕೊಂಡು ಜೊತೆ ಬಿಸಿ ಬಿಸಿ ಕಾಫಿ, ತಿಂಡಿ ತಿಂದ ಮೇಲೆ ಇನ್ನೊಂದು ಕಪ್ ಕಾಫಿ, ಆಫೀಸ್ ನಲ್ಲಿ ಸಹೋದ್ಯೋಗಿಗಳ ಜೊತೆ ಮತ್ತೊಂದು ಕಪ್ ಕಾಫಿ, ಸಂಜೆ ಇನ್ನೊಂದು ಕಪ್ ಕಾಫಿ, ಹೀಗೆ ನಾವು ಪ್ರತಿನಿತ್ಯ ಸುಮಾರು ನಾಲ್ಕರಿಂದ ಐದು ಕಪ್ ಕಾಫಿ ಕುಡಿಯುತ್ತೇವೆ.

ಕಾಫಿ ಕುಡಿಯುವುದರಿಂದ ತಕ್ಷಣಕ್ಕೆ ತಲೆಬಿಸಿ ಕಡಿಮೆಯಾಗಿ ಒಂದು ರಿಲೀಫ್ ಸಿಗುತ್ತೆ. ಆದರೆ ಧೀರ್ಘಾವಧಿಯಲ್ಲಿ ಅದರ ಕೆಟ್ಟ ಪರಿಣಾಮ ದೇಹದ ಮೇಲೆ ಬೀರುತ್ತದೆ.

ದಿನದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಪದೇ ಪದೇ ಕಾಫಿ ಕುಡಿಯುವುದರಿಂದ ನಮ್ಮ ಅನಾರೋಗ್ಯಕ್ಕೆ  ನಾವೇ ಕಾರಣರಾಗುತ್ತೇವೆ. ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೆಫಿನ್ ಅಂಶ ಸೇರುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತೆ, ಹೃದಯ ಬಡಿತದಲ್ಲಿ ಏರಿಳಿತ, ಆಸಿಡಿಟಿ, ಅಲ್ಸರ್, ದೇಹದಲ್ಲಿ ನಿಶಕ್ತತೆ, ಹಾಗೂ ಪಾರ್ಶ್ವವಾಯು ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾಫಿ ರಹದಾರಿ ಮಾಡಿಕೊಡುತ್ತದೆ ಎಂದು ಯುರೋಪಿಯನ್ ಆಹಾರ ಸುರಕ್ಷತಾ ಪ್ರಾಧಿಕಾರ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ.

ಇನ್ನು ವರದಿ ಪ್ರಕಾರ ವಯಸ್ಕರು ದಿನವೊಂದಕ್ಕೆ 400 ಮಿಲಿಗ್ರಾಂ ಪ್ರಮಾಣದ ಕೆಫೀನ್ ಸೇವಿಸಿದ್ರೆ ಅವರ ಆರೋಗ್ಯ ಸೇಫ್, ಇನ್ನು ಗರ್ಭಿಣಿಯರು ಕೂಡ ಕಾಫಿಯನ್ನು ಹೆಚ್ಚು ಕುಡಿಯುವಂತಿಲ್ಲ.  ಇದು ಭ್ರೂಣದಲ್ಲಿರುವ ಶಿಶುವಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಕೇವಲ 200 ಮಿಲಿಗ್ರಾಂ ಮಾತ್ರ ಕಾಫಿ ಸೇವಿಸಬೇಕು. ಇನ್ನು ಮಕ್ಕಳಿಗೂ ಕೂಡ ಕಾಫಿ ಉತ್ತಮ ಪಾನೀಯವಲ್ಲ ಎಂದು ಯುರೋಪಿಯನ್ ಆಹಾರ ಸಂರಕ್ಷಣಾ ಪ್ರಾಧಿಕಾರ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments