ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ನಿಮ್ಮ ಮಕ್ಕಳಿಗೆ ಏನು ತಿನಿಸುತ್ತಿದ್ದೀರಿ?

ಹೆಲ್ತ್ ಡ್ರಿಂಕ್ಸ್‌ನ ಕತೆ ಪಕ್ಕಕ್ಕಿಟ್ಟು ಯೋಚಿಸಿ. ಯಾವ ಆಹಾರದಲ್ಲಿ ವಿಟಾಮಿನ್ ಇದೆ? ಯಾವುದರಲ್ಲಿ ಕಬ್ಬಿಣದ ಅಂಶ ಇದೆ?

ಸಾಂದರ್ಭಿಕ ಚಿತ್ರ
Rashmi Kasaragodu
Updated On : 3 Nov 2015, 7:23 am
ಮಕ್ಕಳಿಗೆ ಸಮತೂಕದ ಆಹಾರವನ್ನು ನೀಡಬೇಕು. ಬೆಳೆಯುತ್ತಿರುವ ಮಕ್ಕಳಿಗೆ ವಿಟಮಿನ್, ಮಿನರಲ್ಸ್ ಹಾಗೂ ಇನ್ನಿತರ ಪೋಷಕಾಂಶಗಳಿರುವ ಆಹಾರಗಳನ್ನು ನೀಡಬೇಕು ಎಂದು ವೈದ್ಯರು ಟೀವಿಯಲ್ಲಿ  ಬಂದು ಹೇಳಿ, ಮಕ್ಕಳಿಗೆ ಹೆಲ್ತ್ ಡ್ರಿಂಕ್ಸ್ ಕುಡಿಸಿ ಎನ್ನುತ್ತಾರೆ. ಹೆಲ್ತ್ ಡ್ರಿಂಕ್ಸ್‌ನ ಕತೆ ಪಕ್ಕಕ್ಕಿಟ್ಟು ಯೋಚಿಸಿ. ಯಾವ ಆಹಾರದಲ್ಲಿ ವಿಟಾಮಿನ್ ಇದೆ? ಯಾವುದರಲ್ಲಿ ಕಬ್ಬಿಣದ ಅಂಶ ಇದೆ? ಮಕ್ಕಳಿಗೆ ಕೊಡುವ ಸಮತೂಕದ ಆಹಾರ ಎಂದರೆ ಯಾವುದು? 
ಮಕ್ಕಳ ದೇಹ ಮತ್ತು ಬುದ್ಧಿಶಕ್ತಿ ಬೆಳವಣಿಗೆಗೆ ಸಮತೂಕದ ಆಹಾರವನ್ನೇ ನೀಡಬೇಕು. 10 ವರುಷದವರೆಗೆ ಮಗು ಹೆಣ್ಣಾಗಲೀ ಗಂಡಾಗಲೀ ಒಂದೇ ರೀತಿಯ ಆಹಾರಗಳನ್ನು ಕೊಟ್ಟರೆ ಸಾಕು. ಈ ಹೊತ್ತಿನಲ್ಲಿ ಕ್ಯಾಲ್ಶಿಯಂ ಹೆಚ್ಚು ಇರುವ ಆಹಾರಗಳನ್ನು ನೀಡುವುದೊಳಿತು. ಯಾಕೆಂದರೆ ಬೆಳವಣಿಗೆಯ ಈ ಹಂತದಲ್ಲಿ ಕ್ಯಾಲ್ಶಿಯಂ ಯುಕ್ತ ಆಹಾರಗಳನ್ನು ನೀಡಬೇಕು.
ಕಾಲ್ಶಿಯಂ ಯಾವುದರಲ್ಲಿದೆ? 

Advertisement

Advertisement

ಹಸಿರೆಲೆ ತರಕಾರಿಗಳು, ಗಿಣ್ಣು, ಹಾಲು, ಮೊಸರು, ಕ್ಯಾಬೇಜ್, ಸೋಯಾ ಉತ್ಪನ್ನಗಳು, ಬೆಂಡೆಕಾಯಿ, ಬ್ರೊಕೊಲಿ, ಬೀನ್ಸ್, ಬಾದಾಮಿ, ಮೀನು, ಮಾಂಸ, ಮೊಟ್ಟೆ, ಸೇಬು, ಕಿತ್ತಳೆ, ಬಾಳೆಹಣ್ಣು, ಆಪ್ರಿಕೋಟ್, ಬೇಳೆಕಾಳು, ಕ್ಯಾರೆಟ್, ಟೊಮ್ಯಾಟೋ 
ಬೆಳಗ್ಗಿನ ಉಪಹಾರ ತಪ್ಪಿಸಬೇಡಿ
ಮಕ್ಕಳ ಮೆದುಳಿನ ಬೆಳವಣಿಗೆಗೆ ಬೆಳಗ್ಗಿನ ಉಪಹಾರ ಸಹಾಯ ಮಾಡುತ್ತದೆ. ಬೆಳಗ್ಗಿನ ಉಪಹಾರವನ್ನು ಬ್ರೈನ್ ಫುಡ್ ಎಂದೇ ಹೇಳಲಾಗುತ್ತದೆ . ಮಕ್ಕಳ ಕಲಿಕೆಗೆ ಮತ್ತು ಏಕಾಗ್ರತೆ ಹೆಚ್ಚಿಸಲು ಬೆಳಗ್ಗಿನ ತಿಂಡಿ ಬೇಕೇ ಬೇಕು.
ಹಾಲು ಕುಡಿಸಿ
ಹಾಲು ಮತ್ತು ಅದರ ಉತ್ಪನ್ನಗಳನ್ನು ತಿನಿಸಿ. ದಿನಾ ಎರಡು ಗ್ಲಾಸ್ ಹಾಲು ಕುಡಿಯುವುದು ಒಳ್ಳೆಯದು. ಮಕ್ಕಳು ದಪ್ಪ ಆಗುತ್ತಾರೆ ಎಂದಾದರೆ ಕೆನೆ ತೆಗೆದು ಹಾಲು ಕೊಡಿ. ತುಪ್ಪ, ಬೆಣ್ಣೆ, ಮೊಸರಿಗಿಂತ ಮಜ್ಜಿಗೆ ಮಾಡಿ ಕೊಡಿ.
ಮಾಂಸಾಹಾರಿಯಾಗಿದ್ದರೆ..
ಒಂದು ಹೊತ್ತು ಮೀನು ಊಟ ತಿನಿಸಿ. ಕೋಳಿ ಮಾಂಸವಾಗಿದ್ದರೆ ವಾರದಲ್ಲಿ ಒಂದು ದಿನ ಸಾಕು.
ಹಣ್ಣು, ತರಕಾರಿಗಳು ಯಥೇಚ್ಛವಿರಲಿ
ದಿನಾ 100 ಗ್ರಾಂನಷ್ಟು ಹಣ್ಣು, 150 ಗ್ರಾಂಗಳಷ್ಟು ಹಸಿರೆಲೆ ತರಕಾರಿಗಳ ಸೇವನೆ ಕಡ್ಡಾಯವಾಗಿ ಇರಲಿ.
ಕುದಿಸಿ ತಣಿಸಿದ ನೀರು
ನೀರು ದೇಹದ ಆರೋಗ್ಯಕ್ಕೆ ಅತ್ಯಾವಶ್ಯಕ. ಕುದಿಸಿ ತಣಿಸಿದ ನೀರನ್ನೇ ಮಕ್ಕಳಿಗೆ ಕುಡಿಯಲು ಕೊಡಿ
ಫಾಸ್ಟ್ ಫುಡ್ ಬೇಡವೇ ಬೇಡ
ಪ್ಯಾಕೆಟ್‌ನಲ್ಲಿ ಬರುವ ತಿಂಡಿಗಳು, ಕೊಬ್ಬಿನಂಶವಿರುವ ವಸ್ತು, ಫಾಸ್ಟ್ ಫುಡ್, ಹೋಟೆಲ್‌ಗಳಿಂದ ತಿನ್ನುವ ಎಣ್ಣೆಯಲ್ಲಿ ಕರಿದ ಮಾಂಸಾಹಾರಗಳಿಂದ ಮಕ್ಕಳನ್ನು ದೂರವಿರಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments