ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಹೆಚ್ಚು ಇಂಟರ್ ನೆಟ್ ಬಳಕೆಯಿಂದ ಅಧಿಕ ರಕ್ತದೊತ್ತಡ!

ಹೆಚ್ಚು ಇಂಟರ್ ನೆಟ್ ಬಳಸುವ ಯುವಕರು ಅಧಿಕ ರಕ್ತದೊತ್ತಡ ಎದುರಿಸುವ ಅಪಾಯವಿದೆ ಎಂದು ಇತ್ತೀಚಿನ ಅಧ್ಯಯನ ವರದಿ ಎಚ್ಚರಿಸಿದೆ.

ಇಂಟರ್ ನೆಟ್ ಬಳಕೆ(ಸಂಗ್ರಹ ಚಿತ್ರ)
Srinivas Rao BV
Updated On : 8 Oct 2015, 1:10 am

ವಾಷಿಂಗ್ಟನ್: ಹೆಚ್ಚು ಇಂಟರ್ ನೆಟ್ ಬಳಸುವ ಯುವಕರು ಅಧಿಕ ರಕ್ತದೊತ್ತಡ ಎದುರಿಸುವ ಅಪಾಯವಿದೆ ಎಂದು ಇತ್ತೀಚಿನ ಅಧ್ಯಯನ ವರದಿ ಎಚ್ಚರಿಸಿದೆ.
ಪ್ರತಿ ವಾರ ಕನಿಷ್ಠ 14 ಗಂಟೆ ಅವಧಿ ಇಂಟರ್ ನೆಟ್ ಬಳಕೆ ಮಾಡುವವರಿಗೆ ರಕ್ತದೊತ್ತಡ ಹೆಚ್ಚಿರುವುದನ್ನು ಡೆಟ್ರಾಯಿಟ್ ನ ಹೆನ್ರಿ ಫೋರ್ಡ್ ಆಸ್ಪತ್ರೆಯ ಸಂಶೋಧಕರು ಕಂಡುಹಿಡಿದಿದ್ದಾರೆ. ಅತಿ ಹೆಚ್ಚು ಇಂಟರ್ ನೆಟ್ ಬಳಕೆ ಮಾಡುವ  134 ಯುವಕರ ಪೈಕಿ 26 ಜನರಿಗೆ ಅಧಿಕ ರಕ್ತದೊತ್ತಡ ಇರುವುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.
ಇಂಟರ್ ನೆಟ್ ನ ಅಧಿಕ ಬಳಕೆ ಹಾಗೂ ಅಧಿಕ ರಕ್ತದೊತ್ತಡದ ಬಗ್ಗೆ  ನಡೆದಿರುವುದು ಇದೇ ಮೊದಲ ಸಂಶೋಧನೆಯಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ಇಂಟರ್ ನೆಟ್ ಬಳಕೆಗೂ ಚಟ, ಆತಂಕ, ಖಿನ್ನತೆ, ಬೊಜ್ಜು ಮತ್ತು ಸಾಮಾಜಿಕ ಪ್ರತ್ಯೇಕತೆ ಉಂಟಾಗುವುದಕ್ಕೂ ಕಾರಣವಾಗಿದೆ ಎಂದು ಇದೇ ಸಂಶೋಧನೆ ತಿಳಿಸಿದೆ.
ಯುವಜನತೆ ವಾರದಲ್ಲಿ 25 ಗಂಟೆ ಇಂಟರ್ ನೆಟ್ ಬಳಕೆ ಮಾಡುತ್ತಿದ್ದಾರೆ, ಅತಿ ಹೆಚ್ಚು ಇಂಟರ್  ನೆಟ್ ನಮಗೆ ಹಾನಿ ಉಂಟುಮಾಡಬಾರದು. ಕಂಪ್ಯೂಟರ್ ಗಿಂತಲೂ ದೈಹಿಕ ಚಟುವಟಿಕೆಯತ್ತ ಹೆಚ್ಚಿನ ಗಮನ ಹರಿಸುವುದು ಅಗತ್ಯವಾಗಿದೆ ಎಂದು ಅಧ್ಯಯನ ವರದಿ ಸಲಹೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments