ವಾಷಿಂಗ್ಟನ್: ಅಮೆರಿಕಾ ಸಂಶೋಧಕರ ಪ್ರಕಾರ ಅತಿ ಹೆಚ್ಚು ಸಮಯ ಟಿವಿ ನೋಡುವುದಕ್ಕೂ ಮರಣ ಸಂಭವಿಸುವ ಅಂಶಗಳು ಕಾಡುವುದಕ್ಕೂ ಸಂಬಂಧವಿದೆಯಂತೆ. ಅಮೆರಿಕಾದಲ್ಲಿ ಶೇ.80 ರಷ್ಟು ಜನರು ದಿನವೊಂದರಲ್ಲಿ 3 .5 ಗಂಟೆ ಟಿವಿ ವೀಕ್ಷಿಸುತ್ತಾರೆ. ಹೆಚ್ಚು ಟಿವಿ ವೀಕ್ಷಿಸುವುದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ಈಹಿಂದಿನ ಸಂಶೋಧನೆಗಳಿಂದ ಪ್ರಕಾರ ಹೆಚ್ಚು ಟಿವಿ ವೀಕ್ಷಣೆಯಿಂದ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಎದುರಾಗಲಿದೆ ಎಂಬುದು ತಿಳಿದಿತ್ತು. ಈಗಿನ ಸಂಶೋಧನೆಯಿಂದ ಮಧುಮೇಹ, ನ್ಯುಮೋನಿಯಾ, ಪಾರ್ಕಿನ್ ಸನ್ ಖಾಯಿಲೆ, ಲಿವರ್ ನಂತಹ ಮಾರಕ ಸಮಸ್ಯೆಗಳೂ ಹೆಚ್ಚಾಗಲಿವೆ ಎಂಬುದು ಬಹಿರಂಗವಾಗಿದೆ.
ಟಿವಿ ನೋಡುವುದಕ್ಕೂ ಮಾರಕ ಸಮಸ್ಯೆಗಳು ಉಂಟಾಗುವುದಕ್ಕೂ ಇರುವ ಸಂಬಂಧದ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ ಎಂದು ಸಾರಾ ಖೇಡ್ಲೇ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಅಧ್ಯಯನ ವರದಿ ಅಮೆರಿಕಾದ ಪ್ರಿವೆಂಟಿವ್ ಮೆಡಿಸಿನ್ ಜರ್ನಲ್ ನಲ್ಲಿ ಪ್ರಕಟವಾಗಿದೆ.