ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಉರಿಬಿಸಿಲಿನಲ್ಲಿ ದಾಹ ತಣಿಸುವ ಎಳನೀರು ಸರ್ವರೋಗಕ್ಕೂ ಮದ್ದು

ಬಿರು ಬಿಸಿಲ ಬೇಗೆಗೆ ಬಾಯಾರಿಕೆ ತಣಿಸಿ, ದೇಹಕ್ಕೆ ತಂಪು ನೀಡುವ ಎಳನೀರು ಕೇವಲ ಪಾನೀಯವಲ್ಲ, ಇದೊಂದು ಆರೋಗ್ಯ ವೃದ್ಧಿಸುವ ದಿವ್ಯೌಷಧಿ....

ಎಳನೀರು
Shilpa D
Updated On : 16 Apr 2016, 12:36 pm

ಬಿರು ಬಿಸಿಲ ಬೇಗೆಗೆ ಬಾಯಾರಿಕೆ ತಣಿಸಿ, ದೇಹಕ್ಕೆ ತಂಪು ನೀಡುವ ಎಳನೀರು ಕೇವಲ ಪಾನೀಯವಲ್ಲ, ಇದೊಂದು ಆರೋಗ್ಯ ವೃದ್ಧಿಸುವ  ದಿವ್ಯೌಷಧಿ.

ನೆತ್ತಿ ಸುಡುವ ಬಿಸಿಲಿಂದಾಗಿ ದೇಹದ ನಿರ್ಜಲೀಕರಣ ಉಂಟಾಗಿ, ಉಷ್ಣತೆ ಏರುತ್ತದೆ. ಇಂತಹ ಸಮಯದಲ್ಲಿ ಎಳನೀರು ಬಹಳ ಉಪಯೋಗಿ. ದೇಹದಲ್ಲಿ ಗ್ಲೂಕೋಸ್ ಕೊರತೆಯಾದಾಗ ಎಳನೀರು ಸೇವನೆ ಉತ್ತಮ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಎಳ ನೀರು ಸೇವಿಸುವುದರಿಂದ ಆರೋಗ್ಯ ಉತ್ತಮವಾಗುತ್ತದೆ. ಇದರಲ್ಲಿರುವ ಅತ್ಯಧಿಕ ಮಿನರಲ್ಸ್, ಪೊಟಾಶಿಯಂ ಅಂಶಗಳು ದೇಹದ ವಿಷಯುಕ್ತ ಅಂಶಗಳನ್ನು ಹೊರಹಾಕುತ್ತವೆ.

ಎಳನೀರು ಕುಡಿಯುವುದರಿಂದ ಹೃದಯಕ್ಕೂ ತುಂಬಾ ಒಳ್ಳೆಯದು. ಅಧಿಕ ರಕ್ತದೊತ್ತಡ ಕಡಿಮೆ ಮಾಡುವುದಲ್ಲದೇ, ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಹೊಟ್ಟೆ ನೋವು ಇರುವವರು ಈ ಎಳನೀರನ್ನು ಸೇವಿಸಬೇಕು.

ಗ್ಯಾಸ್ಟ್ರಿಕ್ ಸಮಸ್ಯೆಯಿರುವವರು ಎಳನೀರು ಕುಡಿಯವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಕಾಕಂಬಿ ಅಥವಾ ಹಸಿರು ಕೊತ್ತಂಬರಿ ಹಾಕಿ ಎಳೆ ನೀರು ಕುಡಿಯುವುದರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ.

ಉರಿಮೂತ್ರ ಸಮಸ್ಯೆ ಇರುವವರು ಪ್ರತಿನಿತ್ಯ ಎಳನೀರು ಸೇವಿಸದರೇ ಸಮಸ್ಯೆ ಕಡಿಮೆಯಾಗುತ್ತದೆ. ಹೊಟ್ಟೆ ಉರಿ, ಅಜೀರ್ಣ, ಮಲಬದ್ಧತೆ ಹೋಗಲಾಡಿಸುವುದರಿಂದ ವೈದ್ಯರು ಇದನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ.

ಮಹಿಳೆಯರ ಬಿಳಿ ಸೆರಗು ಸಮಸ್ಯೆಗೆ ಇದು ರಾಮಬಾಣ. ಹೊಟ್ಟೆಯಲ್ಲಿ ಹುಳಗಳಾದಾಗ ಎಳನೀರು ಸೇವಿಸಿದರೆ ಒಳ್ಳೆಯದು. ದೇಹದ ತೂಕ ಕಡಿಮೆ ಮಾಡಲೂ ಇದು ಸಹಕಾರಿ. ಕೂದಲು ಉದುರುವುದು, ಒಣ ಕೂದಲಿಗೆ ಎಳನೀರು ಉತ್ತಮ. ಪ್ರತಿದಿನ ಇದನ್ನು ಕುಡಿಯುತ್ತ ಬಂದರೆ ಕೂದಲು ಉದುರುವುದು ಕಡಿಮೆಯಾಗಿ, ಕೂದಲು ಹೊಳೆಯುವಂತೆ ಮಾಡುತ್ತದೆ.

ಕಾಫಿ, ಟಿ ಇನ್ಯಾವುದೋ ಜಂಕ್ ಫುಡ್‌ಗಳನ್ನು ತಿನ್ನುವ ಬದಲು, ಯಾವುದೇ ಫ್ಲೇವರ್ ಮಿಕ್ಸ್ ಮಾಡದೇ ನೈಸರ್ಗಿಕವಾಗಿ, ಸಿಗುವ ಎಳನೀರು ಕುಡಿದರೇ ಹಲವು ರೋಗಗಳಿಂದ ದೂರವಿರಬಹುದು. ಜೊತೆಗೆ ಉತ್ತಮ ಆರೋಗ್ಯ ಹೊಂದಬಹುದು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement